ಆರೋಗ್ಯಾಧಿಕಾರಿ ದೀಪರಿಗೆ ಆತ್ಮೀಯ ಬೀಳ್ಕೊಡುಗೆ

ಕೋಲಾರ:- ತಾಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ದೀಪಾ.ಎನ್ ಸುಮಾರು ಎರಡುವರೆ ವರ್ಷಗಳ ಕಾಲ ಆರೋಗ್ಯ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಸಾರ್ವಜನಿಕ ವಲಯಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು, ಈಗ ತಮ್ಮ ಮಾತೃ ಇಲಾಖೆಯಾದ ಆರೋಗ್ಯಸೌಧಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಅರಿಶಿನ, ಕುಂಕುಮ, ಹೂ, ಬಳೆ, ಹಣ್ಣುಹಂಪಲು ನೀಡುವ ಮೂಲಕ ಪೌರ ಕಾರ್ಮಿಕರು ಬಿಳ್ಕೊಡುಗೆ ನೀಡಿದರು.


ಪೌರ ಕಾರ್ಮಿಕರು ಮಾತನಾಡಿ, ನಾವುಗಳು ಪೌರಕಾರ್ಮಿಕರ ಕೆಲಸಕ್ಕೆ ಬಂದಾಗ ಮುಜುಗರ ಬೇಸರವಾಗುತ್ತಿತ್ತು, ವಿಧಿ ಇಲ್ಲದೆ ಮಾಡುತ್ತಿದ್ದೆವು, ಆದರೆ ಇತ್ತೀಚಿನ ದಿನಗಳಲ್ಲಿ ಇಷ್ಟಪಟ್ಟು ನಮ್ಮ ಸ್ವಂತ ಕೆಲಸದಂತೆ ಮಾಡಲಾಗುತ್ತಿದ್ದೇವು, ಇದಕ್ಕೆಲ್ಲ ಕಾರಣ ಆರೋಗ್ಯ ಅಧಿಕಾರಿ ದೀಪಾ ಮೇಡಂ ತೋರುತ್ತಿದ್ದ ಕಾಳಜಿ ಪ್ರೀತಿ ಪ್ರತಿಯೊಬ್ಬರನ್ನು ಸಮಾನತೆ ಪ್ರೀತಿ ವಾತ್ಸಲ್ಯದಿಂದ ತಾಯಿಯಂತೆ, ಚಿಕ್ಕವರಿಗೆ ಅಕ್ಕನಂತೆ, ದೊಡ್ಡವರಿಗೆ ತಂಗಿಯಂತೆ ಹಿರಿಯರಿಗೆ ಮಗಳಂತೆ ಕೈ ತುತ್ತು ಪ್ರೀತಿ ನೀಡಿ ನಮ್ಮನ್ನು ಮಕ್ಕಳ ಹಾಗೆ ಸಾಕಿದ್ದಾರೆ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.


ಆರೋಗ್ಯ ಅಧಿಕಾರಿ ದೀಪ ಮಾತನಾಡಿ, ಇಷ್ಟೆಲ್ಲಾ ಕೆಲಸ ಕಾರ್ಯಗಳು ಧೈರ್ಯ ಹಾಗೂ ಉತ್ಸಾಹದಿಂದ ಮಾಡಲು ನನಗೆ ತಿಳಿಯದ ಕೆಲಸಗಳನ್ನು ಹೇಳಿ ಕೊಡುವುದರ ಜೊತೆಗೆ ಕೆಲಸವನ್ನು ಕಲಿಸುತ್ತಾ ನನ್ನ ಹೇಳಿಗೆ ಬಯಸುತ್ತಾ ನಿಮ್ಮೆಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ನಮ್ಮಣ್ಣನ ಹಾಗೆ ಜೊತೆಯಲಿದ್ದ ಮುಖ್ಯ ಅಧಿಕಾರಿ ಎಸ್.ಎಂ.ವೆಂಕಟೇಶ್‌ರವರೇ ಕಾರಣ ಇಷ್ಟೊಂದು ಪ್ರೀತಿ ವಿಶ್ವಾಸ ನೀಡಿದ ನಿಮ್ಮನ್ನೆಲ್ಲಾ ಬಿಟ್ಟು ಇಷ್ಟೊಂದು ಬೇಗ ಬೇರೆ ಕಡೆ ಹೋಗುವ ಪರಿಸ್ಥಿತಿ ಬರುತ್ತದೆ ಎಂದರು.


ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಸ್.ಎಂ.ವೆಂಕಟೇಶ್ ಮಾತನಾಡಿ ಕಚೇರಿಯಲ್ಲಿ ನನ್ನ ಬಲಗೈಯಾಗಿ ಕೆಲಸ ಮಾಡಿದ್ದಾರೆ ಸಾರ್ವಜನಿಕರು ಮೊದಲು ಕೇಳುವುದು ನೀರು ಮತ್ತು ಸ್ವಚ್ಛತೆ ಅದನ್ನು ನಿಭಾಯಿಸಿದರೆ ಅರ್ಧದಷ್ಟು ಕೆಲಸ ಮುಗಿದಷ್ಟೇ ಅದನ್ನು ಅವರು ಬಹಳ ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ ನಾನು ಕೆಲಸ ಹೇಳುವ ಬರದಲ್ಲಿ ಸುಮಾರು ಸಲ ಬೈದಿದ್ದೇನೆ ಆದರೆ ಬೇಜಾರು ಮಾಡಿ ಕೊಳ್ಳದೆ ಕೆಲಸ ಮಾಡಿದ್ದಾರೆ ಇಂತಹದ್ದೇ ಕೆಲಸ ಎನ್ನದೆ ಪ್ರತಿಯೊಂದು ಕೆಲಸ ದೀಪಾರಿಗೆ ಹೇಳಿದ್ದೇನೆ ಅವರು ಸಹ ಇದು ನನ್ನ ಕೆಲಸವಲ್ಲ ಅನ್ನದೇ ಪ್ರತಿಯೊಂದು ಕೆಲಸವನ್ನು ಮಾಡಿದ್ದಾರೆ ಎಂದು ನುಡಿದರು.


ಶಾಲೆಗಳಲ್ಲಿ ಶಿಕ್ಷಕರನ್ನು ಸರ್ಕಾರ ವರ್ಗಾವಣೆಯಾದಾಗ ಮಕ್ಕಳು ಕಣ್ಣೀರು ಹಾಕುವುದು ಸರ್ವೇ ಸಾಮಾನ್ಯ, ಆದರೆ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಒಬ್ಬ ಆರೋಗ್ಯ ಅಧಿಕಾರಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಕಣ್ಣೀರು ಹಾಕುವುದು ಸಿಬ್ಬಂದಿ ಬೇಸರದಿಂದ ಬೀಳ್ಕೊಡುವ ಪ್ರಸಂಗ ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ಕಂಡುಬಂತು.


ಕೆಲಸ ಮಾಡಿದರೆ ಹಣ ನೀಡುವುದು ಮಾಮೂಲಿ ಆದರೆ ಸರ್ಕಾರಿ ಅಧಿಕಾರಿಗಳು ಎಷ್ಟೊಂದು ಪ್ರೀತಿ ವಿಶ್ವಾಸ ಗಳಿಸುವುದು ಸುಲಭದ ಮಾತಲ್ಲ ಮನುಷ್ಯನಿಗೆ ಹಣ ಅಧಿಕಾರ ಯಾವುದು ಶಾಶ್ವತವಲ್ಲ ಅವರು ಮಾಡಿರುವ ಕೆಲಸ ಕಾರ್ಯಗಳೇ ಶಾಶ್ವತ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.


ಕಂದಾಯ ನಿರೀಕ್ಷಕ ಶಿವಕುಮಾರ್, ಕಿರಿಯ ಅಭಿಯಂತರ ರಾಜೇಂದ್ರ, ಅಂಕೌಟೆಂಟ್ ಮೋನಿಶ್, ಸಿಬ್ಬಂದಿಯವರಾದ ಮೈಲಾರಸ್ವಾಮಿ, ಹನುಮಂತರಾಯಪ್ಪ, ಗಜೇಂದ್ರ ರೆಡ್ಡಿ, ಜಾನಕಿರಾಮ್, ನಾಗರಾಜ್ ಬಾಬು, ಸೌಭಾಗ್ಯ, ಅಮೃತ, ಸ್ವಾತಿ, ಹರೀಶ್ ಇದ್ದರು.