Home ಜಿಲ್ಲೆ ಕಲಬುರಗಿ ಆರೋಗ್ಯಕರ ಜೀವನಶೈಲಿಯಿಂದ ಸದೃಢ ಹೃದಯ

ಆರೋಗ್ಯಕರ ಜೀವನಶೈಲಿಯಿಂದ ಸದೃಢ ಹೃದಯ

ಕಲಬುರಗಿ: ಧೂಮಪಾನ. ಮದ್ಯಪಾನ, ಸ್ಥೂಲಕಾಯ, ಅನುವಂಶಿಯತೆ, ಬೊಜ್ಜು, ಜಂಕ್ ಫುಡ್‍ಗಳ ಸೇವೆನ, ಮಧುಮೇಹ, ವಿಶ್ರಾಂತಿರಹಿತ ದುಡಿಮೆ, ಮಾನಸಿಕ ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಹೃದಯಘಾತದ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಸೂಕ್ತ ಕಾಲಕ್ಕೆ ಸಮತೋಲಿತ ಆಹಾರದ ಸೇವನೆ, ಒತ್ತಡ ರಹಿತತೆ, ನಿಯಮಿತ ವ್ಯಾಯಾಮ ಮತ್ತಯ ಯೋಗ ಮಾಡುವುದು, ಧೂಮಪಾನ, ಮದ್ಯಪಾನ ಸೇವನೆಯಿಂದ ದೂರವಿರುವುದು, ಸೂಕ್ತ ವಿಶ್ರಾಂತಿಯಂತ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಸದೃಢ ಹೃದಯ ನಮ್ಮದಾಗುವುದರ ಜೊತೆ ಹೃದಯಘಾತದಿಂದ ದೂರವಿರಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಾಮ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿನ ‘ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಹೃದಯ ದಿನಾಚರಣೆ’ಯನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿವಸಗಳಲ್ಲಿ ಹೃದಯಘಾತಗಳ ಸಂಖ್ಯೆ ಹೆಚಾಗಿರುವುದಕ್ಕೆ ಅನಾರೋಗ್ಯಕರ ಜೀವನಶೈಲಿ ಮತ್ತು ಒತ್ತಡ ಪ್ರಮುಖ ಕಾರಣವಾಗಿವೆ. ಹೃದಯಕ್ಕೆ ಬಲಿಷ್ಠವಾದ ಮಾಂಸಖಂಡಗಳಿವೆ. ಇವುಗಳಿಗೆ ನಿರಂತರವಾಗಿ ರಕ್ತ, ಸರಬರಾಜು ಆಗಬೇಕು. ಆರ್ಯೋಟದಿಂದ ಹೊರಟ ಎರಡು ಕರೋನರಿ ರಕ್ತನಾಳಗಳು ಹೃದಯಕ್ಕೆ ರಕ್ತ ಒದಗಿಸುತ್ತದೆ. ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಹೃದಯರೋಗಿಗಳು ಇದ್ದಾರೆ. ಸುಮಾರು 75 ಸುಸಜ್ಜಿತ ಚಿಕಿತ್ಸಾ ಕೇಂದ್ರಗಳಿವೆ. ರೋಗಿಗಳ ಸಂಖ್ಯೆ ಮತ್ತು ಆಸ್ಪತ್ರೆಗಳ ನಡುವೆ ಸಾಕಷ್ಟ್ಲು ವ್ಯತ್ಯಾಸವಿದೆ. ದೇಹದಲ್ಲಿರುವ ಕೋಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳುವುದು, ಮದುಮೇಹದಿದ್ದರೆ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣ ನಿಯಂತ್ರಣದಲ್ಲಿರಿಸುವುದು, ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡಕ್ಕೆ ಒಳಗಾಗದಿರುವುದು, ಆಗಾಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ತಜ್ಞ ವೈದ್ಯರ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವುದು ಸೇರಿದಂತೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ್, ಆರೋಗ್ಯ ಕೇಂದ್ರದ ಸಿಬ್ಬಂದಿ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಗಂಗಾಜ್ಯೋತಿ ಗಂಜಿ, ರೇಶ್ಮಾ ನಕ್ಕುಂದಿ, ಚಂದಮ್ಮ ಮರಾಠಾ, ಆಶಾ ಕಾರ್ಯಕರ್ತೆಯರಾದ ವಿಜುಬಾಯಿ, ಸಂಗೀತಾ ಡಿ, ಗೌರಮ್ಮ, ಶ್ರೀದೇವಿ, ನೀತಾ, ಸೇವಕರಾದ ನಾಗಮ್ಮ ಚಿಂಚೋಳಿ, ಚಂದ್ರಕಲಾ, ಸಿದ್ರಾಮ್ ಸೇರಿದಂತೆ ಇನ್ನಿತರರಿದ್ದರು.