ಆನ್‌ಲೈನ್ ಶಾಪಿಂಗ್ ಹಗರಣಗಳನ್ನು ಗುರುತಿಸಲು ಮತ್ತು ತಪ್ಪಿಸಲು ಮಾರ್ಗದರ್ಶಿ

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವ ಸೌಲಭ್ಯವು ಗ್ರಾಹಕರು ತಮ್ಮ ಮತ್ತು ತಮ್ಮ ಪ್ರೀತಿಪಾತ್ರರಿಗಾಗಿ ಶಾಪಿಂಗ್ ಮಾಡುವ ರೀತಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಇದು ಸುಲಭ ಮತ್ತು ಅನುಕೂಲಕರ. ಆದರೆ, ಈ ಅನುಕೂಲದ ಜೊತೆಗೆ ವಂಚನೆ ಎಂಬ ಕರಾಳ ಭಾಗವೂ ಇದೆ. ಆನ್‌ಲೈನ್ ಶಾಪಿಂಗ್ ವಂಚನೆಯು ನಿಮ್ಮ ಮೇಲೆ ದೀರ್ಘಕಾಲಿಕ ಪರಿಣಾಮ ಬೀರಬಹುದು.


ಉದಾಹರಣೆಗೆ, ಭಾರಿ ಹಣಕಾಸಿನ ನಷ್ಟ ಅಥವಾ ಮಾಹಿತಿಯ ಕಳ್ಳತನ ಆಗಬಹುದು. ಒಮ್ಮೆ ಹಣ ವರ್ಗಾವಣೆಯಾದರೆ, ಅದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ಇದಲ್ಲದೆ, ಕೆಲವು ವಂಚಕ ವೆಬ್‌ಸೈಟ್‌ಗಳು ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಸೇರಿದಂತೆ ನಿಮ್ಮ ವೈಯಕ್ತಿಕ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಬಹುದು.

ವಂಚಕರು ಈ ಕೆಳಗಿನ ಪ್ರಮುಖ ವಿಧಾನಗಳಲ್ಲಿ ಗ್ರಾಹಕರನ್ನು ಮೋಸ ಮಾಡುತ್ತಾರೆ.

೧. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದು: ವಂಚಕರು ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರ ಖಾತೆಯನ್ನೇ ಹೋಲುವ ನಕಲಿ ಪ್ರೊಫೈಲ್‌ಗಳನ್ನು ರಚಿಸುತ್ತಾರೆ. ಅವರು ಸಾಮಾನ್ಯವಾಗಿ ಪ್ರತಿಷ್ಠಿತ ಮಾರಾಟಗಾರರು ಅಥವಾ ಬ್ರಾಂಡ್‌ಗಳಂತೆ ನಟಿಸಿ, ’ಕಲ್ಪಿಸಲಾಗದಷ್ಟು’ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಾರೆ. ಅವರು ಕಳುವಾದ ಉತ್ಪನ್ನಗಳ ಚಿತ್ರಗಳು, ಸುಳ್ಳು ಟೆಸ್ಟಿಮೋನಿಯಗಳನ್ನು ಬಳಸಿ ಬಳಸಿ, ಯುಪಿಐ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ ಮುಂಗಡ ಪಾವತಿ ಮಾಡಲು ಒತ್ತಾಯಿಸಿ, ನಂತರ ಅದೃಶ್ಯರಾಗುತ್ತಾರೆ.


೨. ವಂಚಕ ಆನ್‌ಲೈನ್ ವೆಬ್‌ಸೈಟ್‌ಗಳನ್ನು ಸೃಷ್ಟಿಸುವುದು:


ನಕಲಿ ವೆಬ್‌ಸೈಟ್‌ಗಳನ್ನು ಸಾಮಾನ್ಯವಾಗಿ ನಿಜವಾದ ಇ-ಕಾಮರ್ಸ್ ವೇದಿಕೆಗಳಂತೆ ಕಾಣುವಂತೆ ವಿನ್ಯಾಸಗೊಳಿಸಲಾಗುತ್ತದೆ. ಅವರು ನಿಜವಾದ ಸೈಟ್‌ಗಳಿಗೆ ಹೋಲುವ ಡೊಮೇನ್ ಹೆಸರುಗಳನ್ನು ಬಳಸಬಹುದು ಮತ್ತು ಗ್ರಾಹಕರನ್ನು ಸೆಳೆಯಲು ನಂಬಲಾಗದಷ್ಟು ಅಗ್ಗದ ಡೀಲ್‌ಗಳನ್ನು ನೀಡುತ್ತಾರೆ. ಇಂತಹ ವೆಬ್‌ಸೈಟ್‌ಗಳಲ್ಲಿ ಸುರಕ್ಷಿತವಲ್ಲದ ಪಾವತಿ ಗೇಟ್‌ವೇಗಳು ಇರುವುದರಿಂದ, ಇದು ಬಳಕೆದಾರರ ಬ್ಯಾಂಕ್ ವಿವರಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ.


ಆನ್ಲೈನ್ ಶಾಪಿಂಗ್ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಸಾಮಾನ್ಯ ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ಒಂದು ಡೀಲ್ ನಂಬಲು ಅಸಾಧ್ಯ ಎನಿಸಿದರೆ, (ಅಂದರೆ ಅದು ತುಂಬಾ ಚೆನ್ನಾಗಿದ್ದರೆ), ಅದು ಒಂದು ಎಚ್ಚರಿಕೆಯ ಕರೆಗಂಟೆ. ಹಾಗೆಯೇ, ಕೇವಲ ಮುಂಗಡ ಪಾವತಿಗೆ ಮಾತ್ರ ಒತ್ತಾಯಿಸುವ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರವಿರಲಿ.

ವೆಬ್‌ಸೈಟ್ ವಿನ್ಯಾಸವು ಸಂದೇಹಾಸ್ಪದವಾಗಿದೆಯೇ ಎಂದು ನೋಡುವುದು ಸಹ ಮುಖ್ಯ. ವ್ಯಾಕರಣ ಸರಿಯಿಲ್ಲದಿದ್ದರೆ, ಮಸುಕಾದ ಚಿತ್ರಗಳಿದ್ದರೆ, ಅಥವಾ ಕೆಲಸ ಮಾಡದ ಲಿಂಕ್ಗಳಂತಹ ಅಂಶಗಳಿದ್ದರೆ ಅದನ್ನು ವಂಚನೆಯ ದೊಡ್ಡ ಸೂಚನೆಯೆಂದೇ ಪರಿಗಣಿಸಿ. ಯಾವುದೇ ಗ್ರಾಹಕ ಬೆಂಬಲ ಇಲ್ಲದ ವೆಬ್ಸೈಟ್ಗಳಿಂದ ದೂರವಿರಿ, ಏಕೆಂದರೆ ನಂಬಿಕಸ್ಥ ವ್ಯಾಪಾರಗಳು ಯಾವಾಗಲೂ ಸ್ಪಷ್ಟವಾದ ಮರುಪಾವತಿ/ವಿನಿಮಯ ನಿಯಮಗಳನ್ನು ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಒದಗಿಸುತ್ತವೆ. ಕೊನೆಯದಾಗಿ, ಸೋಷಿಯಲ್ ಮೀಡಿಯಾದಲ್ಲಿ, ಆ ಖಾತೆಗೆ ಬ್ಲೂ ಟಿಕ್ ಇದೆಯೇ ಅಥವಾ ನಿಜವಾದ ಅನುಯಾಯಿಗಳ ಸಂಖ್ಯೆ ಎಷ್ಟಿದೆ ಎಂದು ಗ್ರಾಹಕರು ಪರಿಶೀಲಿಸಿ.

ವಂಚಕರು ಹೆಚ್ಚು ಜಾಣರಾಗುತ್ತಿದ್ದರೂ, ಗ್ರಾಹಕರು ತಮ್ಮನ್ನು ರಕ್ಷಿಸಿಕೊಳ್ಳಲು ಹಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಫೋನ್‌ಪೇ ಯ ಸೈಬರ್ ಸುರಕ್ಷತಾ ತಜ್ಞರು ಗ್ರಾಹಕರು ಇಂತಹ ವಂಚನೆಗಳಿಗೆ ಬಲಿಯಾಗದಂತೆ ತಡೆಯಲು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಗ್ರಾಹಕರು ಏನನ್ನಾದರೂ ಖರೀದಿಸುವ ಮೊದಲು ಆ ವೆಬ್‌ಸೈಟ್ ಅಥವಾ ಆಪ್ ಅನ್ನು ಪರಿಶೀಲಿಸಬೇಕು ಮತ್ತು ಮಾರಾಟಗಾರರ ಅಥವಾ ವೆಬ್‌ಸೈಟ್ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಬೇಕು.

ರಿವ್ಯೂಗಳಿಗಾಗಿ ಕೂಡಲೇ ಗೂಗಲ್‌ನಲ್ಲಿ ಹುಡುಕಿ ವಂಚನೆಯ ಬಗ್ಗೆ ತಿಳಿದುಕೊಳ್ಳಬಹುದು. ಬಳಕೆದಾರರು ಪಾವತಿ ವಿವರಗಳನ್ನು ನಮೂದಿಸುವ ಮೊದಲು ಯುಆರ್‌ಎಲ್ ನಲ್ಲಿ hಣಣಠಿs:// ಮತ್ತು ಪ್ಯಾಡ್ಲಾಕ್ ಚಿಹ್ನೆಯನ್ನು ನೋಡಿ ವೆಬ್‌ಸೈಟ್ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಉತ್ತಮ ಮತ್ತು ನಂಬಿಕಸ್ಥ ವೇದಿಕೆಗಳು ಯಾವುವು ಎಂದು ತಿಳಿದು, ಈಗಾಗಲೇ ಒಳ್ಳೆಯ ಖ್ಯಾತಿಯನ್ನು ಹೊಂದಿರುವ ವಿಶ್ವಾಸಾರ್ಹ ಇ-ಕಾಮರ್ಸ್ ಆಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸುವುದು ಉತ್ತಮ.

ಸೋಷಿಯಲ್ ಮೀಡಿಯಾದಲ್ಲಿ, ಪ್ರತಿಯೊಂದು ಪುಟವನ್ನೂ ಅಥವಾ ಜಾಹೀರಾತನ್ನೂ ನಂಬಬಾರದು ಮತ್ತು ಖಾತೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು.


ಒಂದು ವೇಳೆ ಬಳಕೆದಾರರಿಗೆ ಯಾವುದೇ ಸಂದೇಹಾಸ್ಪದ ಚಟುವಟಿಕೆ ಕಂಡುಬಂದರೆ, ಅವರು ತಕ್ಷಣ ಅದನ್ನು ಸಂಬಂಧಪಟ್ಟ ಡೊಮೇನ್ಗಳಿಗೆ ವರದಿ ಮಾಡಬೇಕು ಮತ್ತು ಸರ್ಕಾರದ ಸೈಬರ್‌ಕ್ರೈಮ್ ಪೋರ್ಟಲ್‌ನಲ್ಲಿ ದೂರು ನೋಂದಾಯಿಸಬೇಕು.


ಒಂದು ವೇಳೆ ನೀವು ಫೋನ್‌ಪೇನಲ್ಲಿನಲ್ಲಿ ಅಂತಹ ವಂಚನೆಗೆ ಗುರಿಯಾಗಿದ್ದರೆ, ನೀವು ತಕ್ಷಣವೇ ಫೋನ್‌ಪೇ ಅಪ್ಲಿಕೇಶನಲ್ಲಿ ವರದಿ ಮಾಡಬಹುದು ಅಥವಾ ೦೮೦೬೮೭೨೭೩೭೪ / ೦೨೨೬೮೭೨೭೩೭೪ ಗ್ರಾಹಕ ಬೆಂಬಲ ಸಂಖ್ಯೆಗಳಿಗೆ ಕರೆ ಮಾಡಬಹುದು.


ಫೋನ್‌ಪೇನ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕವೂ ದೂರು ನೀಡಬಹುದು. ಇದಲ್ಲದೆ, ನೀವು ಹತ್ತಿರದ ಸೈಬರ್ ಕ್ರೈಂ ಸೆಲ್ಗೆ ಹೋಗಿ ವಂಚನೆಯ ಬಗ್ಗೆ ದೂರು ನೀಡಬಹುದು, ಇಲ್ಲವೇ https://www.cybercrime.gov.in/ ನಲ್ಲಿ ಆನ್‌ಲೈನ್ ದೂರು ನೋಂದಾಯಿಸಬಹುದು.