ಆತ್ಮ ಮತ್ತು ಜೀವ ಕುಲದ ರಹಸ್ಯವನ್ನು ತಿಳಿಸಿದ ಶ್ರೇಷ್ಠ ದಾಸ: ಶೆಟ್ಟಿಹಳ್ಳಿ

ಸೈದಾಪುರ:ನ.10: ಸರಳ ಸಾಹಿತ್ಯದ ಮೂಲಕ ಆತ್ಮ ಮತ್ತು ಜೀವ ಕುಲದ ಹುಟ್ಟಿನ ರಹಸ್ಯವನ್ನು ಜನಸಾಮಾನ್ಯರಿಗೆ ತಿಳಿಸಿಕೊಟ್ಟ ದಾಸ ಶ್ರೇಷ್ಠ ಕನಕದಾಸರು ಎಂದು ಸೈದಾಪುರ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಕನಕವೃತ್ತದಲ್ಲಿ ಕುರುಬ ಸಮುದಾಯದಿಂದ ಶನಿವಾರ ಕನಕದಾಸರ 538ನೇ ಜಯಂತ್ಯೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡಲಾಯಿತು. ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತ. ಮನದೊಳಗಿನ ಅಂಧಕಾರದ ಚಂಚಲವೆಂಬ ಹಕ್ಕಿಯನು ಓಡಿಸಿದ ಮಹಾಮಹಿಮ. ಸರಳ ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆಗಳಿಂದ ಕನಕದಾಸರು ವಿಶಿಷ್ಠರಾಗಿದ್ದರು. ಮಾಹನ್ ದಾರ್ಶನಿಕರ ಹಿತವಚನಗಳು ಸರ್ವಕಾಲಕ್ಕೂ ಉಳಿಯುತ್ತವೆ. ಇವು ಕೇವಲ ಒಂದು ಸಮುದಾಯ, ಜಾತಿಗೆ ಸೀಮಿತವಾದವರೆಲ್ಲ ಎನ್ನುವುದನ್ನು ನಾವೆಲ್ಲರು ಅರಿತುಕೊಂಡು ಅವರ ಆದರ್ಶಗಳನ್ನು ನಾವುಗಳು ಪಾಲಿಸಿಕೊಂಡು ಜೀವನ ಸಾಗಿಸಿದರೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದರು.

ಅನ್ನ ದಾಸೋಹ ಕಾರ್ಯಕ್ರಮ: ಇದಕ್ಕೂ ಮೊದಲು ಕನಕವೃತ್ತದಲ್ಲಿ ಕನಕ ಜಯಂತಿ ಅಂಗವಾಗಿ ದಾನಿ ಪ್ರಕಾಶ ಜೇಗರ್ ಅನ್ನದಾಸೋಹವನ್ನು ನಡೆಸಿಕೊಟ್ಟರು. ಸುತ್ತಮುತ್ತಲಿನ ನೂರಾರು ಜನರಿಗೆ ಅನ್ನ ಸಂತಾರ್ಪಣೆಯನ್ನು ಮಾಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ವಿಜಯ ಕಂದಳ್ಳಿ, ಭೀಮಶಪ್ಪ ಜೇಗರ್, ಪರಮೇಶ ವಾರದ, ಆನಂದ, ಮಾಳಪ್ಪ ಅರಿಕೇರಿ, ಸಿದ್ದು ಪೂಜಾರಿ, ರವಿ ಕಡೇಚೂರು, ಸಂಗಪ್ಪ, ಸಿದ್ರಾಮಪ್ಪ, ಮಹೇಶ, ಹಣಮಂತ, ಪ್ರಕಾಶ ಜೇಗರ್, ಪುಂಡಲಿಕ ಗೊಂದೆಡಗಿ, ಬಸ್ಸು, ಲಿಂಗಾರೆಡ್ಡಿ ಗಬ್ಬೂರು, ಸಾಬಣ್ಣ ಸೈದಾಪುರ, ಸಾಬರೆಡ್ಡಿ ಗೂಡೂರು, ಸಾಬಣ್ಣ ದುಪ್ಪಲ್ಲಿ, ನಾಗರಾಜ, ಮಲ್ಲಿಕಾರ್ಜುನ ಮಲ್ಲೋರ್ ಕೂಡ್ಲೂರು, ಸಾಬಣ್ಣ ತರಕಾರಿ ಸೈದಾಪುರ ಸೇರಿದಂತೆ ಇತರರಿದ್ದರು.