ವೀರವನಿತೆಯಾಗಿ ನಮ್ಮದೇಶದ ಶತೃಗಳನ್ನು ಸದೆ ಬಡಿದ ಮಹಾನ ತಾಯಿ:ಶಾಸಕ ಅಲ್ಲಮ್‍ಪ್ರಭು ಪಾಟೀಲ

ಕಲಬುರಗಿ: ನ,12: 18 ನೇ ಶತಮಾನದಲ್ಲಿ ಚಿತ್ರದುರ್ಗದ ವೀರಯೋಧಿಯಾಗಿದ್ದ ಒನಕೆ ಓಬವ್ವ ವೀರವನಿತೆಯಾಗಿ ನಮ್ಮ ದೇಶದ ಶತ್ರುಗಳನ್ನು ಸದೆ ಬಡಿದ ಮಹಾನ ತಾಯಿ ಇವರು ಎಂದು ಕಲಬುರಗಿ ದಕ್ಷಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಹೇಳಿದರು.
ಮಂಗಳವಾರ ಡಾ.ಎಸ್.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತನ್ನ ಒನಕೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ದೇಶದ ಶತ್ರು ಆದ ಹೈದಾರಾಲಿಯ ಸೈನ್ಯವನ್ನು ಸದೆ ಬಡೆದು ನಾಶ ಮಾಡಿ ಹೆಣ್ಣು ಕುಲದ ಗೌರವವನ್ನು ಎತ್ತಿ ಹಿಡಿದ ಮಹಾತಾಯಿ ಇವರು, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಯಾವುದೆ ಸ್ಥಾನ ಇರಲಿಲ್ಲ. ಅಂತಹ ಸಮಯದಲ್ಲಿ ಅವರು ಮಾಡಿದ ಧೈರ್ಯ ಸಾಹಾಸವನ್ನು ನಾವು ಮೆಚ್ಚಲೆಬೇಕು ಎಂದರು.
ಸಮಾಜದಲ್ಲಿ ಪ್ರತಿಯೊಂದು ಮನೆಯಲ್ಲಿ ಹೆಣ್ಣು ಮಗಳು ಅವರ ಹಾಗೆ ಹುಟ್ಟಿ ಬೆಳೆಯಬೇಕು ಬರಿ ಟಿವಿ ಧಾರಾವಾಹಿಗಳನ್ನು ನೋಡುತ್ತಾ ಕುಳಿತರೆ ಹೇಗೆ ಇತಿಹಾಸದ ಬಗ್ಗೆ ಹೆಣ್ಣು ಮಕ್ಕಳಿಗೆ ಗಮನ ವಿರಲಿ ಎಂದು ಹೇಳಿದರು.
ಯಾರು ಇತಿಹಾಸ ಬಲ್ಲವರು ಅವರೇ ಇತಿಹಾಸ ಸೃಷ್ಟಿ ಮಾಡುವರು ಎಂದು ಡಾ. ಬಾಬ ಸಾಹೇಬ ಅಂಬೇಡ್ಕರ ಅವರು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಸ್ಥಾನಮಾನ ಇರಲಿಲ್ಲ. ಇಂದಿನ ಯುಗದಲ್ಲಿ ಹೆಣ್ಣು ಹೆಚ್ಚಿನ ಸ್ಥಾನ ಮಾನ ಹೊಂದಿದ್ದಾರೆ. ಎಂದರು.
ನಾವು ಚಿಕ್ಕವರಿಂದ್ದಾಗ ವೀರವನಿತೆ ಒನಕೆ ಒಬ್ಬವ ಕಥೆಗಳು ಪಠ್ಯಪುಸ್ತಕಗಳನ್ನು ಓದುತ್ತಿದ್ದೇವೆ ವೀರವನಿತೆ ಓನಕೆ ಓಬ್ಬವ ಕಥೆಗಳು ಇಂದಿನ ಪೀಳಿಗೆಗಳಿಗೆ ಪರಿಚಯಸಬೇಕೆಂದರು.
ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಜೀಯವರು , ಮಾಜಿ ಮುಖ್ಯಮಂತ್ರಿಗಳಾ ಧರ್ಮಸಿಂಗ್ ಅವರ ಪ್ರಯತ್ನದಿಂದ ಈ ಭಾಗಕ್ಕೆ 371 (ಜೆ) ತಂದು ಅನೇಕ ಸೌಲಭ್ಯಗಳನ್ನು ಪಡೆದುಕೊಂಡಿವೆ ಎಂದರು.
ಸರಕಾರಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥರಾದ ವಿಜಯಕುಮಾರ ಎಚ್. ಸಾಲಿಮನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹುಟ್ಟು ಅಸಾಧರಣವಾದರು ಸಾವು ಮಾತ್ರ ಚರಿತ್ರೆ ಯಾಗಬೇಕು, ಸಾಮಾನ್ಯ ಗೃಹಿಣಿ ಎನಿಸಿಕೊಂಡಿದ್ದ ಒನಕೆ ಓಬವ್ವ ಚಿತ್ರದುರ್ಗದ ಕೋಟೆಯ ವಶಕ್ಕೆ ಯತ್ನಿಸಿದ ಹೈದರಾಲಿಯ ಕುಂತಂತ್ರವನ್ನು ವಿಫಲಗೊಳಿಸಿ ಕೋಟೆ ಮತ್ತು ಜನತೆಯನ್ನು ಅಪಾಯದಿಂದ ಪಾರು ಮಾಡಿದ ವೀರವನಿತೆ ಓಬವ್ವ ಎಂದು ಹೆಸರುವಾಸಿಯಾಗಿದ್ದಾರೆ ಎಂದು ಅವರು ಹೇಳಿದರು.
ಒನಕೆ ಓಬವ್ವ ಕಿತ್ತುರಾಣಿ ಚನಮ್ಮ ಹಾಗೂ ಜಾನ್ಸಿರಾಣಿ ಲಕ್ಷೀಬಾಯಿಯ ಹಾಗೆ ರಾಣಿಯ ವಂಶದಲ್ಲಿ ಜನಿಸಿರಲಿಲ್ಲ ಓಬವ್ವ ಒಂದು ಸಣ್ಣ ಮನೆತನದಲ್ಲಿ ಜನಿಸಿ ಇಡಿ ದೇಶವನ್ನೆ ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾರೆ ಎಂದರು,
ಸಮಾಜದಲ್ಲಿ ಪ್ರತಿಯೊಂದು ಹೆಣ್ಣು ಮಗಳು ಮನಸ್ಸು ಮಾಡಿದರೆ ದೇಶವನ್ನೆ ಸೃಷ್ಟಿ ಮಾಡುತ್ತಾರೆ. ಅದರಿಂದ ಎಲ್ಲಾ ಹೆಣ್ಣು ಮಕ್ಕಳಿಗೆ ಧೀರ, ಶೂರ, ಮಹಿಳೆ ಮತ್ತು ಭೂ ತಾಯಿಗೆ ಹೊಲಿಸುತ್ತಾರೆ ಆದರಿಂದ ಪ್ರತಿಯೊಂದು ಹೆಣ್ಣು ಮಗಳು ಸಮಾಜದಲ್ಲಿ ಸಾಧನೆ ಮಾಡಬೇಕು ಎಂದರು.
ಕರ್ನಾಟಕ ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಮಹಾದೇವ ಮೋಘಾ ಅವರು ಮಾತನಾಡಿ ಛಲವಾದಿ ಸಮಾಜದ ವೀರವನಿತೆ ಒನಕೆ ಓಬವ್ವನವರ ಜಯಂತಿಯ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳು ಹಾಗೂ ಜಿಲ್ಲೆಯಲ್ಲಿ ಸಾಧನೆ ಮಾಡಿದಂತಹ ಒಟ್ಟು 22 ಮಹಿಳೆಯರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಗುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕಿ ಜಗದೀಶ್ವರಿ ಅ. ನಾಸಿ ಅವರು ಸ್ವಾಗತಿಸಿದರು.
ಕಾಲೇಜು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಾದ ಮಹಾಲಕ್ಷ್ಮೀ ಅಶೋಕ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಭೀಮಾಬಾಯಿ, ತೃತೀಯ ಶಿವಾನಿ ತಂದೆ ಮಲ್ಲಿಕಾರ್ಜುನ ಅವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಅದೇ ರೀತಿಯಾಗಿ ಜಿಲ್ಲೆಯಲ್ಲಿ ಸಾಧನೆ ಮಾಡಿದ ಮಹಿಳೆಯರು ಡಾ. ಸಂಧ್ಯಾ ಕಾನೇಕರ್, ಡಾ.ಪಮೀಣ ಕೋಳ್ಳರಕರ್, ಡಾ. ರಾಜಶೇಶ್ವರಿ ಹಾಲು, ಭಾರತೀಬಾಯಿ ಧನ್ನಿ, ಸವಿತಾ ನಾಸಿ, ರಮಾ ದರ್ಗಿ, ಸುಮಂಗಲಾ ಜಿ. ಸಂಗಾವಿ, ಸ್ವಾತಿ ಧರ್ಗಿ, ನಂದಿನಿ ಸನಬಾಲ, ಪ್ರತಿಭಾ ಹದನೂರು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾ ವರ್ಷಾ ರಾಜೀವ ಜಾನೆ, ಕಲಬುರಗಿ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಗ್ರೇಡ್-2 ತಹಶೀಲ್ದಾರರ ಆನಂದ ಶೀಲ, ಜಿಲ್ಲಾಧಿಕಾರಿಗಳ ಶಿಷ್ಠಾಚಾರದ ತಹಶೀಲ್ದಾರ ಪಂಪಯ್ಯ. ಎಸ್‍ಸಿ/ಎಸ್‍ಟಿ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಮಹೇಶ ಹುಬಳ್ಳಿ, ಸೇರಿದಂತೆ ಚಲುವಾದಿ ಸಮಾಜ ಮುಖಂಡರಾದ ಸುರೇಶ ಬಡಿಗೇರ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು.