
ಚನ್ನಮ್ಮನ ಕಿತ್ತೂರು,ನ3: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮನ ವರ್ತುಳದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶಾಸಕ ಬಾಬಾಸಾಹೇಬ ಪಾಟೀಲ ಮುಖ್ಯ ಅತಿಥಿಗಳಾಗಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿವಿಧ ರೂಪಕಗಳಿಗೆ ಚಾಲನೆ ನೀಡಿ ಮಾತನಾಡಿ ಈ ದಿನ ಕನ್ನಡಕ್ಕಾಗಿ ಹೋರಾಡಿ ಪ್ರಾಣ ತೆತ್ತ ಮಹನೀಯರನ್ನು ನೆನೆಯುವ ದಿನ. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ಕರ್ನಾಟಕ ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಭೌಗೋಳಿಕ ಸಮೃದ್ಧ ರಾಜ್ಯವಾಗಿದೆ. ಕರ್ನಾಟಕವನ್ನು ಏಕೀಕರಣಗೊಳಿಸಬೇಕೆಂದು ಅನೇಕರು ಹೋರಾಟ ನಡೆಸಿದ್ದಾರೆ. ಕನ್ನಡ ಉಳಿಸಿ-ಬೆಳೆಸುವುದರಲ್ಲಿ ನಮ್ಮೇಲ್ಲರ ಪಾತ್ರ ಮಹತ್ವದ್ದಾಗಿದೆ ಎಂದರು.
ತಹಶೀಲ್ದಾರ ಕಲ್ಲನಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ಕೆಪಿಸಿಸಿ ಸದಸ್ಯ ರೋಹಿನಿ ಪಾಟೀಲ, ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ,ವೈ. ತುಬಾಕಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ತಾಪಂ ಇಓ ನಿಂಗಪ್ಪ ಮಸಳಿ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‍ಐ ಪ್ರವೀಣ ಗಂಗೋಳ, ಪಿಡಬ್ಲೂಡಿ ಎಇಇ ಸಂಜೀವ ಮಿರಜಕರ, ಲ್ಯಾಂಡ್ ಆರ್ಮಿ ಶ್ರೀ ರಾಮಯ್ಯ, ರಕ್ಷಣಾವೇದಿಕೆ ಅಧ್ಯಕ್ಷ ರುದ್ರಗೌಡ ಪಾಟೀಲ, ಉಪಾಧ್ಯಕ್ಷ ಆನಂದಗೌಡ ಪಾಟೀಲ, ಅಶಪಾಕ ಹವಾಲ್ದಾರ, ಕೃಷ್ಣಾ ಬಾಳೇಕುಂದರಗಿ, ಮುದಕಪ್ಪ ಮರಡಿ, ವಿವಿಧ ಶಾಲೆಯ ಶಿಕ್ಚಕರು, ಮಕ್ಕಳು ಕನ್ನಡಪರ ಹೋರಾಟಗಾರರು, ಸೇರಿದಂತೆ ಸಾರ್ವಜನಿಕರು, ವಿವಿಧ ಸಂಘಟನೆಗಳು, ತಾಲೂಕಮಟ್ಟದ ಎಲ್ಲ ಅಧಿಕಾರಿಗಳು ಇದ್ದರು. ವಿವಿಧ ರೂಪಕಗಳು ನೋಡುಗರ ಕಣ್ಮಣ ಸೆಳೆದಿದ್ದವು, ಮೆರವಣಿಗೆ ಅರಳಿಕಟ್ಟಿ ಮಾರ್ಗವಾಗಿ ಸೋಮವಾರ ಚನ್ನಮ್ಮನ ಕೂಟ ತಲುಪಿತ್ತು.






























