ಚಿತ್ತಾಪುರ; ಸೆ.24:ಪಟ್ಟಣದ ಸ್ಟೇಷನ್ ತಾಂಡಾದ ಬಂಜಾರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ನವರಾತ್ರಿ ಉತ್ಸವದ ನಿಮಿತ್ತ ಜಗದಂಬಾ ದೇವಿ ಮೂರ್ತಿಯ ಮೆರವಣಿಗೆ ಜನಸಾಗರದ ನಡುವೆ ಅದ್ಧೂರಿಯಾಗಿ ನಡೆಯಿತು.
ಪಟ್ಟಣದ ರೈಲ್ವೆ ಸ್ಟೇಷನ್ ನಿಂದ ಪ್ರಾರಂಭವಾದ ಜಗದಂಬಾ ದೇವಿ ಮೂರ್ತಿಯ ಭವ್ಯ ಮೆರವಣಿಗೆ ಅಂಬಿಗರ ಚೌಡಯ್ಯ ಭವನ, ಬಸವೇಶ್ವರ ವೃತ್ತ, ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣ ರಸ್ತೆ, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಜನತಾ ಚೌಕ್, ನಾಗಾವಿ ಚೌಕ್, ಒಂಟಿ ಕಮಾನ್ ಮುಖಾಂತರ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಮಂದಿರದ ಆವರಣದಲ್ಲಿ ತಲುಪಿದ ನಂತರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ಈ ಬಾರಿ ವಿವಿಧ ಸಾಂಸ್ಕøತಿಕ, ಜಾನಪದ ಕಲಾತಂಡಗಳ ಕಲೆ ನೋಡುಗರ ಕಣ್ಮನ ಸೆಳೆಯಿತು. ಚೆನ್ನೈ ಮೂಲದ ಕಾವಡಿ ಡ್ಯಾನ್ಸ್, ಪುಣೆ ಮೂಲದ ಡೊಳ್ಳು ತಾಷಾ, ಮಹಾರಾಷ್ಟ್ರ ಮೂಲದ ಸೈನಿಕರ ತಂಡ, ತುಳಜಾಪುರದಿಂದ ಗೊಂದಲ ಹಾಕುವವರು, ಬಂಜಾರ ಸಮಾಜದ ನೃತ್ಯ, ಭಜನೆ, ಡಿಜೆ ಸೇರಿದಂತೆ ವಿವಿಧ ಸಂಸ್ಕೃತಿ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು.
ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಕಳೆದ 2000 ವರ್ಷದಲ್ಲಿ ಪ್ರಾರಂಭವಾದ ನವರಾತ್ರಿ ಉತ್ಸವ ಇಂದು 25 ನೇ ವರ್ಷಕ್ಕೆ ಕಾಲಿಟ್ಟಿದೆ. ಹೀಗಾಗಿ ಈ ಬಾರಿ ಬೆಳ್ಳಿ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಡಿ ಚವ್ಹಾಣ ತಿಳಿಸಿದ್ದಾರೆ.
ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಜಗದಂಬಾ ದೇವಸ್ಥಾನ ಹತ್ತಿರ 9 ದಿವಸ ನಿತ್ಯ ಪೂಜೆ ಪುನಸ್ಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಾಯಕರಾದ ರವಿ ಭೀಮಾ ನಾಯಕ, ಕಿಶನ್ ರೂಪಲಾ ನಾಯಕ, ಲಕ್ಷ್ಮಣ್ ವಿಠಲ್ ನಾಯಕ, ಮೋತಿಲಾಲ್ ಬಾಬು ನಾಯಕ, ಚಂದರ್ ಭೀಕು ನಾಯಕ, ಪೆÇಮ್ಯಾ ಸುಬ್ಬು ನಾಯಕ, ತಾರಾನಾಥ ನಾಯಕ, ಚಂದು ಲಚ್ಚು ನಾಯಕ, ಮುಖಂಡರಾದ ಪೆÇೀಮು ಚವ್ಹಾಣ ಪೂಜಾರಿ, ಗೋಪಾಲ ರಾಠೋಡ, ಭೀಮಸಿಂಗ್ ಚವ್ಹಾಣ, ಜಗದೀಶ್ ಚವ್ಹಾಣ, ವಿನೋದ್ ಪವಾರ, ಚಂದರ್ ಚವ್ಹಾಣ, ದೇವಿದಾಸ್ ಚವ್ಹಾಣ, ರವಿ ಜಾಧವ, ಪ್ರವೀಣ್ ಪವಾರ, ಚಂದು ಜಾಧವ, ಕುಮಾರ್ ಚವ್ಹಾಣ ಸೇರಿದಂತೆ ಬಂಜಾರ ಸಮಾಜದ ಸಾವಿರಾರು ಜನ ಮುಖಂಡರು, ಮಹಿಳೆಯರು, ಯುವಕರು ಇದ್ದರು.
ಪಿಎಸ್‍ಐ ಶ್ರೀಶೈಲ್ ಅಂಬಾಟಿ ಅವರು ಸೂಕ್ತ ಪೆÇಲೀಸ್ ಬಂದೋಬಸ್ತ್ ಒದಗಿಸಿದ್ದರು.

























