
ಯಾದಗಿರಿ,ಅ.೨೫: ದಿವ್ಯದರ್ಶನ ಕುಟುಂಬದ ವತಿಯಿಂದ ಅಕ್ಟೋಬರ್ ೧೯ರಿಂದ ಆರಂಭಗೊAಡಿರುವ ‘ಭಕ್ತಿ ಸಂಜೀವನ ಕೂಟ’ ಆಧ್ಯಾತ್ಮಿಕ ಕಾರ್ಯಕ್ರಮವು ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಮುಖ ಆದ್ಯತೆ ನೀಡಿಕೊಂಡು ವಿವಿಧ ಸಭೆಗಳಲ್ಲಿ ವಿಜೃಂಭಣೆಯಿAದ ನಡೆಯುತ್ತಿದೆ. ಪ್ರತಿದಿನ ಎರಡು ಸಭೆಗಳಲ್ಲಿ ಕೂಟಗಳನ್ನು ಆಯೋಜಿಸುವ ಮೂಲಕ ದೇವರ ವಾಕ್ಯದ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.
ದೇವರ ಮಹಾ ಕರುಣೆಯ ಪ್ರದರ್ಶನ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಮಿಷನ್ ಕಾರ್ಯಕ್ರಮದ ಅಂಗವಾಗಿ ಯಾದಗಿರಿ ಜಿಲ್ಲೆಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ ೨೩ರಂದು ವಿಶೇಷ ಭಕ್ತಿ ಸಂಜೀವನ ಕೂಟವನ್ನು ಆಯೋಜಿಸಲಾಯಿತು. ಇದೇ ದಿನ ಮೆಥೋಡಿಸ್ಟ್ ಚರ್ಚ್, ಕೋಟಗೇರಾ ಸೇರಿದಂತೆ ಎರಡು ಸಭೆಗಳಲ್ಲಿ ಭಕ್ತಿ ಸಂಜೀವನ ಕೂಟಗಳನ್ನು ನಡೆಸಲಾಯಿತು.
ಕಾರ್ಯಕ್ರಮಗಳಲ್ಲಿ ಪ್ರಾರ್ಥನೆ, ಭಕ್ತಿ ಆರಾಧನೆ ಹಾಗೂ ದೇವರ ವಾಕ್ಯದ ಸಂದೇಶದ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ದೇವರ ಕರುಣೆ, ಪ್ರೀತಿ ಮತ್ತು ಆಶೀರ್ವಾದದ ಸಂದೇಶವನ್ನು ಜನರಿಗೆ ತಲುಪಿಸುವುದರ ಜೊತೆಗೆ, ನಂಬಿಕೆಯನ್ನು ಬಲಪಡಿಸಿ ಆಧ್ಯಾತ್ಮಿಕ ಜೀವನದ ಅರಿವು ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಕೆ. ಹೊಸಹಳ್ಳಿ ಚರ್ಚ್ನ ಸಭಾಪಾಲಕರಾದ ರೆವ್. ಪಾಸ್ಟರ್ ರಾಜರತ್ನ ಹಾಗೂ ಸಭೆಯ ಉಸ್ತುವಾರಿಗಳು ಕಾರ್ಯಕ್ರಮದ ಆಯೋಜನೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ದಿವ್ಯದರ್ಶನ ಮಿನಿಸ್ಟ್ರೀಸ್ ವತಿಯಿಂದ ನಡೆಯುತ್ತಿರುವ ಈ ಆಧ್ಯಾತ್ಮಿಕ ಸೇವೆಯಲ್ಲಿ ರೆವ್. ರವೀಂದ್ರ ಸಿ. ಗೌಡೆಲ್ಲರ್ ಮತ್ತು ರೆವ್. ಪ್ರಕಾಶ್ ಸೈಮನ್ ಅವರ ಸೇವೆಯೂ ಪ್ರಮುಖವಾಗಿದೆ.ಕಲ್ಯಾಣ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಕ್ತಿ ಸಂಜೀವನ ಕೂಟಗಳನ್ನು ಆಯೋಜಿಸುವ ಮೂಲಕ ಆಧ್ಯಾತ್ಮಿಕ ಸಂದೇಶವನ್ನು ಹರಡುವುದು ಹಾಗೂ ಜನರಲ್ಲಿ ದೇವರ ಮೇಲಿನ ನಂಬಿಕೆ, ಪ್ರೀತಿ ಮತ್ತು ಭರವಸೆಯನ್ನು ಬಲಪಡಿಸುವುದು ಈ ಮಿಷನ್ನ ಆಶಯವಾಗಿದೆ.





















