ಆರ್ಯನ್ ಸಿಬಿಎಸ್‍ಸಿ ಶಾಲೆಯಲ್ಲಿ ವಿಜೃಂಭಣೆಯ ವಾರ್ಷಿಕೋತ್ಸವ

ಕಲಬುರಗಿ,ಡಿ.30: ನಗರದ ಆರ್ಯನ್ ಸಿಬಿಎಸ್‍ಸಿ ಶಾಲೆಯಲ್ಲಿ 27 ನೇಯ ವಾರ್ಷಿಕೋತ್ಸವ ಉಡಾನ್-2025 ವಿಜೃಂಭಣೆಯಿಂದ ಜರುಗಿತು.
ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ, ಗೌರವಾನ್ವಿತ ಅತಿಥಿಗಳಾಗಿ ಶಾಸಕ ಅಲ್ಲಮಪ್ರಭು ಪಾಟೀಲ , ನೀಲಕಂಠರಾವ್ ಮೂಲ್ಗೆ ಮತ್ತು ಯುವರಾಜ ಚಿಂಚೋಳಿ ( ವಾಡಿ ಸಾಹುಕಾರ) ಅವರು ಆಗಮಿಸಿದ್ದರು.ಅಧ್ಯಕ್ಷತೆಯನ್ನು ಮಾಜಿ ಮೇಯರ್ ,ಆರ್ಯನ್ ಶಾಲೆಯ ಕಾರ್ಯದರ್ಶಿ ಸಂಜಯ ಸಿಂಗ್ ಅವರು ವಹಿಸಿದ್ದರು. ಶಾಲೆಯ ಆಡಳಿತ ಅಧಿಕಾರಿ ಅಭಯ ಸಿಂಗ್ ,ಪ್ರಾಂಶುಪಾಲ ಕೊರಮಲ್ಲಿ ರಾಜು ಅವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ನೃತ್ಯ, ನಾಟಕ, ಮೂಕಾಭಿನಯ ಇತ್ಯಾದಿಗಳಲ್ಲಿ ಭಾಗವಹಿಸಿ ಉತ್ಸಾಹದಿಂದ ಪ್ರದರ್ಶನವನ್ನು ನೀಡಿದರು. ಮುಖ್ಯ ಅತಿಥಿಗಳು ಅವರ ಅತ್ಯುತ್ತಮ ಪ್ರದರ್ಶನವನ್ನು ವೀಕ್ಷಿಸಿ ಅವರನ್ನು ಶ್ಲಾಘಿಸಿದರು.