
ನವಲಗುಂದ,ಜ24: ಕಲಿಕಾ ಹಬ್ಬವು ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೆರೇಪಿಸುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸ್ಥಳೀಯ ಸಮೂಹ ಸಂಪನ್ಮೂಲ ಕೇಂದ್ರ 1ರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1 ರಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು
ಸಮೂಹ ಸಂಪನ್ಮೂಲ ವ್ಯಕ್ತಿ ಶಿವಯೋಗಿ ಜಂಗಣ್ಣವರ, ಎನ್ ವಿ ಕುರವತ್ತಿಮಠ, ಎಸ್ ಎಫ್ ನೀರಲಗಿ, ಎಸ್ ಕೆ ಕುರಹಟ್ಟಿ, ಮಾಬುಸಾಬ ಯರಗುಪ್ಪಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಈರಣ್ಣ ಬೆಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು.
ಎಸ್ ಎಂ ಬೆಂಚಿಕೇರಿ ಎನ್ ವೈ ಕಳಸಾಪುರ, ಎನ್ ಸಿ ತಾಳಿಕೋಟಿಮಠ, ಎನ್ ಎನ್ ಹಾಲಿಗೇರಿ, ಎಂ ಎನ್ ವಗ್ಗರ, ನಾಗಭೂಷನ ಕಮ್ಮಾರ, ಎಸ್ ಎಂ ತಲಬಟ್ಟಿ, ಮುತ್ತಣ್ಣ ಬಿಸಾನಾಳ ಅಡಿವೆಪ್ಪ ಶಿರಸಂಗಿ, ಕಾಸಿಮಸಾಬ ಮಚಲಿಬಂದರ, ಮಹಮ್ಮದಲಿ ಮಿರ್ಜಿ ಇತರರು ಭಾಗವಹಿಸಿದ್ದರು.



























