ಲಕ್ಷ್ಮೇಶ್ವರ,ಅ10: ಕಲ್ಮಲಾ ಶಿಗ್ಗಾಂವ್ ರಾಜ್ಯ ಹೆದ್ದಾರಿ ಈಗ ಹೆದ್ದಾರಿಯಾಗಿಯೇ ಉಳಿದಿಲ್ಲ ಇಡಿ ರಸ್ತೆಯ ತುಂಬಾ ಗುಂಡಿ ತಗ್ಗು ಹಾಳಾದ ರಸ್ತೆಯ ದರ್ಶನ ಮಾತ್ರ ನಿತ್ಯ ಜನರ ಗೋಳು…!
ಇದೇ ರಸ್ತೆ ಪಟ್ಟಣದ ಸವಣೂರು ಕ್ರಾಸನಿಂದ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಹಾದು ಹೋಗಿರುವ ಈ ರಸ್ತೆಯಲ್ಲಿ ಒಂದು ಯಮ ಗುಂಡಿ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿಯವರೆಗೆ ಆಗಲಿ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕಾಗಲಿ ಬಂದೆ ಇಲ್ಲ ಎಂದರೆ ಅಚ್ಚರಿ ಅಲ್ಲವೇ
ಪ್ರತಿನಿತ್ಯ ಈ ರಸ್ತೆಯ ಮೇಲೆ ಜನ ಪ್ರತಿನಿಧಿಗಳು ಅಧಿಕಾರಿಗಳು ಅಡ್ಡಾಡುತ್ತಿದ್ದರು ಈ ರಸ್ತೆ ಗುಂಡಿ ಯಾರಿಗೂ ಕಾಣದಿರುವುದು ಸೂಜಿಗ. ಇದೇ ರೀತಿ ಗುಂಡಿಗಳನ್ನು ತುಂಬಲು ಡಿಸೆಂಬರ್ ಮತ್ತು ಮಾರ್ಚನಲ್ಲಿ ಅನುದಾನ ಬಂದಿತ್ತು ಆದರೆ ಈ ಗುಂಡಿಗೆ ಮಾತ್ರ ಅನುದಾನ ಲಭ್ಯವಾಗಿಲ್ಲ..! ಲಕ್ಷ್ಮೇಶ್ವರ ಹುಬ್ಬಳ್ಳಿ ಮಧ್ಯ ಪ್ರತಿನಿತ್ಯ ಬಸ್ಸು ಕಾರು ಟಿಪ್ಪರು ಲಾರಿ ಮೊಟರ್ ಸೈಕಲು ಹೀಗೆ ನೂರಾರು ವಾಹನಗಳು ಈ ಯಮ ಗುಂಡಿ ದರ್ಶನ ಪಡೆದು ಎಡಗೈ ಮುಷ್ಟಿಯಲ್ಲಿ ಜೀವ ಹಿಡಿದುಕೊಂಡು ಸಾಗುತ್ತಿದ್ದಾರೆ.
ನಗರ ಮಧ್ಯದಲ್ಲಿಯೇ ಈ ಬೃಹತ್ ಗುಂಡಿ ನಿರ್ಮಾಣವಾಗಿದ್ದರೂ ಈ ಗುಂಡಿಗಾಗಿಯೇ ಪ್ರತಿಭಟನೆ ಮಾಡಬೇಕೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
























