ವಿಘ್ನನಿವಾರಕನಿಗೆ ಸಂಭ್ರಮದ ವಿದಾಯ : ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದ ಯುವಕರು

ಔರಾದ್ : ಸೆ.5:ಗಣೇಶ ಚತುರ್ಥಿಗೆ ಪ್ರತಿಷ್ಠಾಪನೆಗೊಂಡು ಸತತವಾಗಿ ಒಂಬತ್ತು ದಿನಗಳ ಕಾಲ ಭಕ್ತರಿಂದ ಆರಾಧಿಸಲ್ಪಟ್ಟ ವಿಘ್ನ ನಿವಾರಕ ಗಣೇಶನಿಗೆ ಗುರುವಾರ ರಾತ್ರಿ ಸಡಗರ ಸಂಭ್ರಮದಿಂದ ವಿಸರ್ಜಿಸಲಾಯಿತು.

ಪಟ್ಟಣದಲ್ಲಿ ಇದೆ ಮೊದಲ ಬಾರಿಗೆ ತಹಸೀಲ್ದಾರ ಮಹೇಶ ಪಾಟೀಲ, ಸಿಪಿಐ ರಘವೀರಸಿಂಗ ಠಾಕೂರ್ ಅವರ ಸಾರಥ್ಯದಲ್ಲಿ ಹಾಗೂ ಎಲ್ಲ ಗಣೇಶ ಮಂಡಳಿಗಳ ಸಹಕಾರದಿಂದ 9 ದಿನಗಳ ಗಣೇಶ ವಿಸರ್ಜನೆ ಮಾಡುವ ನಿರ್ಧಾರ ಕೈಗೊಂಡರು. ಅದರಂತೆ ಗುರುವಾರ ರಾತ್ರಿ ಪಟ್ಟಣದ ಎಲ್ಲ ಬಡಾವಣೆಗಳ ಗಣೇಶ ಮಂಡಳಿಗಳು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಿವಿಧ ವಾದ್ಯಮೇಳಗಳ, ಡಿಜೆ ಹಾಗೂ ಧ್ವನಿವರ್ಧಕಗಳ ಅಬ್ಬರದ ಸಂಗೀತದ ಹಿಮ್ಮೇಳದೊಂದಿಗೆ ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಚನ್ನಬಸವೇಶ್ವರ ವೃತ್ತ, ಎಪಿಎಂಸಿ, ತಾಪಂ ಕಚೇರಿ,. ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಗಾಂಧಿ ಚೌಕ, ಮಾರ್ಗವಾಗಿ ಪಟ್ಟಣದ ಹೊರ ವಲಯದ ಕೆರೆಗೆ ವಿಸರ್ಜನೆಗೆ ತೆರಳಿದವು.

ವಿಶೇಷವಾಗಿ ಬಸವೇಶ್ವರ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ವೇದಿಕೆ ಹಾಕಲಾಗಿತ್ತು, ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತ ಬರುತ್ತಿದ್ದಂತೆ ಮೆರವಣಿಗೆ ರಂಗೇರುತ್ತಿತ್ತು. ಲೀಡಕರ ಕಾಲೋನಿ ಗಣೇಶ ಮೆರವಣಿಗೆ ನೋಡುಗರ ಗಮನ ಸೆಳೆಯಿತು. ಸುಮಾರು 30 ಜನರ ವಾದ್ಯ ಮೇಳದ ಕುಣಿತ ನೋಡಲು ಜನ ಕಿಕ್ಕಿರಿದು ನಿಂತಿದ್ದು ಕಂಡು ಬಂತು, ಡಬಲ್ ಸೌಂಡ್, ಹತ್ತಾರು ಅಡಿ ಉದ್ದದ ಪಟಾಕಿ ಸರಗಳನ್ನು ಸುಟ್ಟು, 15- 20 ನಿಮಿಷಗಳ ಕಾಲ ಸಿಳ್ಳೆ, ಕೇಕೆ ಹಾಕಿ ಯುವಕರು ಕುಣಿದು ಕುಪ್ಪಳಿಸಿದರು. ಬಳಿಕ ಗಾಂಧಿ ಚೌಕ ಮಾರ್ಗವಾಗಿ ಕೆರೆಗೆ ತಲುಪಿ, ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.


ಮೆರಗು ತಂದ ಮೆರವಣಿಗೆ ಕಣ್ತುಂಬಿಕೊಂಡ ಜನ ಸಾಗರ:

ಈ ಬಾರಿ ಗಣೇಶೋತ್ಸವ ಮೆರವಣಿಗೆ ವೀಕ್ಷಣೆಗೆ ಎಲ್ಲಿ ನೋಡಿದರೂ ಜನಜಂಗುಳಿ ಕಂಡುಬಂತು ಪಟ್ಟಣದ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ಎಲ್ಲ ಗಣೇಶ ಮೂರ್ತಿಗಳು ಎಪಿಎಂಸಿ ಯಿಂದ ಬಸವೇಶ್ವರ ವೃತ್ತದ ವರೆಗೆ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು, ಹಿರಿಯರು ಕಿರಿಕಿಯರು, ಹೆಣ್ಣು ಗಂಡು ಎನ್ನದೇ ಎಲ್ಲ ವಯೋಮಾನದವರು ಮೆರವಣಿಗೆ ವೀಕ್ಷಣೆಗೆ ಬಂದಿದ್ದರು. ತಡರಾತ್ರಿ ವರೆಗೆ ನಡೆದ ಮೆರವಣಿಗೆಯಲ್ಲಿ ಸಾಗಿ ಬಂದ ವಿನಾಯಕ ಮೂರ್ತಿಗಳನ್ನು ಕಣ್ಣುಂಬಿಕೊಂಡರು.


ಗಣೇಶ ಮೂರ್ತಿಗಳಿಗೆ ಭವ್ಯ ಸ್ವಾಗತ

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಆಗಮಿಸಿದ ಗಣೇಶ ಮೂರ್ತಿಗಳಿಗೆ ತಹಸೀಲ್ದಾರ ಮಹೇಶ ಪಾಟೀಲ, ಸಿಪಿಐ ರಘವೀರಸಿಂಗ ಠಾಕೂರ್, ಸುನೀಲಕುಮಾರ ದೇಶಮುಖ, ಶರಣಪ್ಪ ಪಂಚಾಕ್ಷರಿ, ಬಂಡೆಪ್ಪ ಕಂಟೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ರವೀಂದ್ರ ಮೀಸೆ, ಪ್ರಕಾಶ ಘುಳೆ, ಶರಣಪ್ಪ ಚೀಟ್ಮೆ ಸೇರಿದಂತೆ ಇನ್ನಿತರರು ಗಣೇಶ ಮೂರ್ತಿಗಳಿಗೆ ಭವ್ಯ ಸ್ವಾಗತ ಕೋರಿದರು. ಮಂಡಳಿಯ ಪ್ರಮುಖರಿಗೆ ಪ್ರಶಂಸೆ ಪತ್ರ ನೀಡಿ ದೇಶಮುಖ ಅವರಿಂದ ಸನ್ಮಾನಿಸಲಾಯಿತು.


ಬಿಗಿ ಪೆÇಲೀಸ್ ಬಂದೋಬಸ್ತ್

ಇದೇ ಮೊದಲ ಬಾರಿಗೆ ಸಾಮೂಹಿಕ ಗಣೇಶ ವಿಸರ್ಜನೆ ನಡೆಯುತ್ತಿದ್ದು ಪಟ್ಟಣದಾದ್ಯಂತ ಗಣೇಶ ವಿಸರ್ಜನೆ ನಿಮಿತ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು, ಗಣೇಶ ಉತ್ಸವ ನೋಡಲು ಜನಜಂಗುಳಿ ಸೇರಿತ್ತು ಸಿಪಿಐ ರಘವೀರಸಿಂಗ ಠಾಕೂರ್, ಪಿಎಸ್‍ಐ ವಸೀಂ ಪಟೇಲ ಅವರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.