ಜಿಲ್ಲೆಯಾದ್ಯಂತ ನ.24 ರಿಂದ ಡಿ.9 ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ

ಬೀದರ, ನ.21: ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ನ.24 ರಿಂದ ಡಿ.9 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಆಂದೋಲನವನ್ನು ಯಶಸ್ವಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಸೂಚಿಸಿದರು.
ಅವರು ಗುರುವಾರ ಸಂಜೆ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಯಾವುದೇ ವ್ಯಕ್ತಿಗಳಿಗೆ ಕುಷ್ಠರೋಗ ಲಕ್ಷಣಗಳಾದ ಸ್ಪರ್ಶ ಜ್ಞಾನ ನೋವು ನವೆ ಇಲ್ಲದ ತಿಳಿ ಬಿಳಿ ತಾಮ್ರ ಬಣ್ಣದ ಮಚ್ಚೆಗಳು, ಕೈ ಕಾಲು ಜೋಮು ಉಂಟಾಗುವುದು, ಮಚ್ಚೆಯ ಜಾಗದಲ್ಲಿ ಕೂದಲುಗಳು ಉದುರುವಿಕೆ ಇವು ಕುಷ್ಠರೋಗದ ಲಕ್ಷಣಗಳಾಗಿವೆ ಇದು ಒಂದು ನರ ಮತ್ತು ಚರ್ಮದ ಕಾಯಿಲೆಯಾಗಿದು ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಬಗ್ಗೆ ನೆರೆ-ಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಿ, ಅವಶ್ಯಕ ಚಿಕಿತ್ಸೆ ನೀಡುವಾಗ ಬೇಧ-ಬಾವ ಮಾಡದೇ ಗೌರವಯುತವಾಗಿ ಉಪಚರಿಸಿ, ರೋಗಿ ಗುಣಮುಖ ಹೊಂದಲು ಸಹಕರಿಸಿ ಸಮಾಜದಲ್ಲಿ ರೋಗದ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಪ್ರಾರಂಭದ ಹಂತದಲ್ಲೆ ರೋಗ ಪತ್ತೆ ಮಾಡಿ ಬಹು ಔಷಧಿ ಚಿಕಿತ್ಸೆ üಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗುವುದಲ್ಲದೆ, ಮುಂದಾಗಬಹುದಾದ ವಿಕಲಾಂಗತೆಯನ್ನು ಕೂಡ ತಡೆಗಟ್ಟಬಹುದು, ಇದಕ್ಕೆಲ್ಲಾ ಮಿಗಿಲಾಗಿ ಸಮಾಜದಲ್ಲಿರುವ ನಾವೆಲ್ಲರು ಒಗ್ಗಟ್ಟಾಗಿ ಈ ದಿಸೆಯಲ್ಲಿ ಕೆಲಸ ಮಾಡಿದರೆ ಗಾಂಧೀಜಿಯವರ ಕನಸು “ಕುಷ್ಠರೋಗ ಮುಕ್ತ ಭಾರತವನ್ನು” ನಿರ್ಮಿಸಬಹುದಾಗಿದೆ ಎಂದರು.
ಬೀದರ ಜಿಲ್ಯಾದ್ಯಂತ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಂದೋಲನ್‍ದಲ್ಲಿ ಒಟ್ಟು 564 ತಂಡಗಳಿದ್ದು, ಇದರಲ್ಲಿ 1128 ಸದಸ್ಯರಿರುತ್ತಾರೆ. 56 ಮೇಲ್ವಿಚಾರಕರು ಕೆಲಸ ನಿರ್ವಹಿಸಲ್ಲಿದ್ದು, ಒಟ್ಟು 158005 ಮನೆಗಳಿಗೆ ಬೇಟಿ ನೀಡಿ 839128 ಜನರಿಗೆ ಪರೀಕ್ಷೆ ಮಾಡಲಿದಾರೆ. ಪ್ರತಿ ತಂಡಗಳ ಒಬ್ಬ ಮಹಿಳಾ ಮತ್ತು ಪುರುಷ ಸದಸ್ಯರುತ್ತಾರೆ. ಬೀದರ ಜಿಲ್ಲೆಯಲ್ಲಿ 66 ಕುಷ್ಠರೋಗಿಗಳು ಬಹು ಔಷಧಿ ಚಿಕಿತ್ಸೆ ಪಡೆಯುತ್ತಿದ್ದಾರೆಂದರು.
ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು ಯಾವುದೇ ಶಾಪ ಪಾಪ ದಿಂದ ಬರುವುದಿಲ್ಲ ಈ ಕಾಯಿಲೆ ಮೈಕೋ ಬ್ಯಾಕ್ಟ್ರೀಯಾ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ ,ಈ ಬ್ಯಾಕ್ಟ್ರೀಯಾಗಳು ಬಹು ಔಷಧಿ ಚಿಕಿತ್ಸೆ ಪಡೆಯದೇ ಇದ್ದ ಸೋಂಕಿತ ವ್ಯಕ್ತಿ ಸೀನಿದಾಗ ಕೆಮ್ಮಿದಾಗ ಹೊರಬರುವ ತುಂತುರ ಹನಿಗಳ ಮೂಲಕ ರೋಗಾಣುಗಳು ಗಾಳಿಯಲ್ಲಿ ಸೇರಿಕೊಂಡು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಕಾಯಿಲೆಯಿಂದ ಹೆದರ ಬೇಕಾಗುವುದಿಲ್ಲಾ. ಅದನು ಗುಪ್ತವಾಗಿಡದೆ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳ ಗಮನಕ್ಕೆ ತಂದು, ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಬಹು ಔಷಧಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಎಂದರು.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮದಡಿಯಲಿ ಕುಷ್ಠ ರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದ್ದು, ಈ ಕಾರ್ಯಕ್ರಮವನ್ನು ಭಾರತ ಸರ್ಕಾರದಿಂದ ಮರು ನೇಮಕ ಮಾಡಿದ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ಈ ಕಾರ್ಯಕ್ರಮವನ್ನು ಅಂತರ್ ಇಲಾಖಾ ಸಮನ್ವಯದೊಂದಿಗೆ, ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಹಮ್ಮಿಕೊಳ್ಳಬೇಕಾಗಿರುತ್ತದೆ. ದಿನಾಂಕ:-24-11-2025 ರಿಂದ 09-12-2025ರ ವರೆಗೆ ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆಗಳಿಲ್ಲಿ ಸಂಬಂಧಪಟ್ಟ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕುಷ್ಠರೋಗ ನಿವಾರಿಸಲು ಗ್ರಾಮದಲ್ಲಿ ಟಂಟಂ ಮಾಡಿಸಿ ಜನರಲ್ಲಿ ಜಾಗ್ರತಿ ಮೂಡಿಸಿ ಸಮ್ಮಿಕ್ಷೆ ಮಾಡುವ ಸಿಭಂದಿಗಳಿಗೆ ಸಹಕಾರ ನೀಡುವದರೋಂದಿಗೆ ಕುಷ್ಠರೋಗಕೆ ಸಂಬಂದಿಸಿದಂತೆ ಸಮಾಜದಲ್ಲಿನ ಕಳಂಕವನ್ನು ಹಾಗೂ ಮಾಹಿತಿಯನ್ನು ಜನಸಾಮಾನ್ಯರಿಗೆ ಜನಪ್ರತಿನಿಧಿಗಳ ಮುಖಾಂತರ ತಿಳಿಸಬೇಕು ಜಿಲ್ಲಾ ಮಟ್ಟದಲ್ಲಿ ತಾಲ್ಲೂಕು ಮಟ್ಟದಲ್ಲಿ ಮತ್ತು ಗ್ರಾಮ ಮಟ್ಟದಲ್ಲಿ ಐಇಸಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಹೆಚ್ಚಿನ ಅರಿವು ಮೂಡಿಸಬೆಕೇಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಕುಷ್ಠ ರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ಭಿತ್ತಿಪತ್ರಗಳು ಹಾಗೂ ಬ್ಯಾನರಗಳನ್ನು ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಧ್ಯಾನೇಶ್ವರ ನಿರಗುಡಿ, ಜಿಲ್ಲಾ ಕುಷ್ಠರೋಗ ನೀರ್ಮೂಲನೆ ಅಧಿಕಾರಿ ಡಾ.ಕಿರಣ.ಎಮ್.ಪಾಟೀಲ್, ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ಶಂಕ್ರೆಪ್ಪಾ ಬೊಮ್ಯಾ, ಡಾ.ಶಿವಶಂಕರ ಬಿ, ಡಾ.ರಾಜಶೇಖರ ಪಾಟೀಲ್, ಡಾ.ದೀಲಿಪ್ ಡೋಂಗ್ರೆ, ಡಾ.ಅನೀಲ್ ಚಿಂತಾಮಣಿ, ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ,ಸಂಗಾರಡ್ಡಿ, ಸಂಗಪ್ಪ ಕಾಂಬ್ಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಸಂಗೀತಾ, ಡಾ.ರೇಣುಕಾ, ವೀರಶೆಟ್ಟಿ ಚನ್ನಶೆಟ್ಟಿ, ಬಸವರಾಜ ರಾಜಕುಮಾರ, ಭಮರಾಂಬದೇವಿ, ಜ್ಯುಓತಿ, ಇಮ್ಮಾನ್ಯೂವಲ್, ಶಾಮರಾವ, ಅಬ್ದುಲ್‍ಹೈ, ಅಫ್ಜಲೋದಿನ್, ಅರವಿಂದ, ಗೋರಕನಾತ್ ಸೇರಿದಂತೆ ವಿವಿಧ ಇಲಾಖೆಯಗಳು ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.