Home ಜಿಲ್ಲೆ ಸಂತ ಸೇವಾಲಾಲರ ಆದರ್ಶ ಅಳವಡಿಸಿಕೊಳ್ಳಲು ಕರೆ

ಸಂತ ಸೇವಾಲಾಲರ ಆದರ್ಶ ಅಳವಡಿಸಿಕೊಳ್ಳಲು ಕರೆ

ಲಕ್ಷ್ಮೇಶ್ವರ,ಫೆ16: ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಸಂತ ಸೇವಾಲಾಲರ ಜಯಂತಿ ಆಚರಿಸಲಾಯಿತು.

ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ತಹಶಿಲ್ದಾರ ಧನಜಂಯ ಎಂ. ಮತ್ತು ಬಂಜಾರ ಸಮಾಜದ ಮುಖಂಡರು ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ತಹಶೀಲ್ದಾರ್ ಧನಂಜಯ ಎಂ ಅವರು ಸೇವಾಲಾಲರ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಅವರನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು’ ಎಂದರು.
ಮುಖಂಡರುಗಳಾದ ದೀಪಕ ಲಮಾಣಿ, ಥಾವರಪ್ಪ ಲಮಾಣಿ, ರಾಮಣ್ಣ ಲಮಾಣಿ ಮಾತನಾಡಿ, ಸಂತರು, ಶರಣರು ನಡೆದಾಡಿದ ಭಾರತ ದೇಶ ಸಂಸ್ಕಾರದ ಕಾರಣಕ್ಕೆ ಜಗತ್ತಿಗೆ ಹೆಸರು ವಾಸಿವಾಗಿದೆ. ಅಂಥ ಮಹಾನ್ ವ್ಯಕ್ತಿಗಳ ಜಯಂತಿಯನ್ನು ನಾವುಗಳು ಕೇವಲ ಆಚರಣೆಗೆ ಮಾತ್ರ ಸಿಮೀತ ಮಾಡಬಾರದು ಎಂದು ಹೇಳಿದರು. ಸಂತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.

ಶರಣರ, ಸಂತರ ಸಂದೇಶಗಳು ಶಾಂತಿ, ಸಾಮರಸ್ಯದ ನಾಡು ಕಟ್ಟಬೇಕೆಂಬುದಾಗಿದೆ. ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಸರ್ಕಾರಿ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಸಮಾಜದವರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ , ಗ್ರೇಡ್ 2 ತಹಶಿಲ್ದಾರ ಮಂಜುನಾಥ ಅಮಾಸಿ, ವೈದ್ಯಾಧಿಕಾರಿ ಶ್ರೀಕಾಂತ್ ಕಾಟೇವಾಲ್, ದೀಪಕ ಲಮಾಣಿ, ರಾಮಣ್ಣ ಲಮಾಣಿ, ಗಣೇಶ ಲಮಾಣಿ, ಧರ್ಮಣ್ಣ ಲಮಾಣಿ, ಗಣೇಶ ಲಮಾಣಿ, ಕೀರಣ ಲಮಾಣಿ, ತುಕಾರಾಮ ಪೂಜಾರ, ಗೇಮಪ್ಪ ಲಮಾಣಿ,ಶೇಖಪ್ಪ ಲಮಾಣಿ, ಸುರೇಶ ಮಾಳಗಿಮನಿ, ಪರಮೇಶ ಲಮಾಣಿ, ಮಂಜುನಾಥ ವಾಲ್ಮೀಕಿ, ಶ್ರೀಕಾಂತ, ಪ್ರವೀಣ ಬೋಮಲೆ ಭೀಮಣ್ಣಣ ಯಂಗಾಡಿ ಉಪತಾಹಸಿಲ್ದಾರ ಸಂತೋಷ ಕಂದಾಯ ನಿರೀಕ್ಷಕ ನದಾಫ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.