ಆರೋಗ್ಯ ಪೂರ್ಣ ಸಮಾಜ ಕೋಡುಗೆಗೆ ಕರೆ

ಕೆಂಗೇರಿ.ಜೂ೩:ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಯೋಗ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಆರೋಗ್ಯವಂತರಾಗುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾಸಿಎನ್. ಮಂಜುನಾಥ್ ಕರೆ ನೀಡಿದರು.


ಮಾಗಡಿ ಮುಖ್ಯ ರಸ್ತೆ ಬ್ಯಾಡರಹಳ್ಳಿ ಶ್ರೀ ವಿದ್ಯಾಲಕ್ಷ್ಮಿ ಇಂಟರ್ನ್ಯಾಷನಲ್ ಸ್ಕೂಲ್ ಸಮೀಪ ದಿ ಅರ್ನವ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದವರು ಪರಿಸರ ಮಾಲಿನ್ಯ, ನಗರದ ಒತ್ತಡ ಜೀವನ ಶೈಲಿಯ ಪರಿಣಾಮದಿಂದ ನಾಗರಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತಿ ಮಂಜಮ್ಮ ಜೋಗತಿ ಮಾತನಾಡಿ ಬಡತನದ ನೆಪವಿಟ್ಟು ಮಕ್ಕಳನ್ನು ಮಧ್ಯದಲ್ಲಿಯೇ ಶಾಲೆ ತೊರೆಯುವಂತಾಗಬಾರದು ಸರ್ಕಾರದ ಸೌಲಭ್ಯ ಪಡೆದು ಉತ್ತಮ ಶಿಕ್ಷಣ ಕೊಡಿಸಬೇಕು.

ಬಾಲ್ಯದಿಂದಲೇ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮಕ್ಕಳಿಗೆ ರೂಢಿಸಬೇಕು’ ಎಂದು ಸಲಹೆ ನೀಡಿದರು.ನಾವು ಹೇಗಿದ್ದರೂ ಜನ ಮಾತಾಡುತ್ತಾರೆ. ಜನರ ಬಗ್ಗೆ ತಲೆಕೆಡಿಸಿಕೊಳ್ಳದೆ ಅಂದುಕೊಂಡ ಗುರಿಯ ಕಡೆಗೆ ಮುಂದೆ ಸಾಗಬೇಕು. ನನ್ನನ್ನು ಎಲ್ಲೆಲ್ಲಿ ಕೀಳಾಗಿ ಕಂಡು ಅವಮಾನ, ಕಣ್ಣೀರು ಹಾಕಿಸಿದ್ದರೋ ಅದೇ ಜಾಗದಲ್ಲಿ ನನಗೆ ಸನ್ಮಾನ ಗೌರವ ಲಭಿಸಿದೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದರು ಅರ್ನವ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಸಂತ ಕುಮಾರಿ ಹಾಗೂ ವಿನುತ ಇವರು ಸಾವಿರಾರು ಮಕ್ಕಳಿಗೆ ದಾರಿದೀಪವಾಗಲಿ ಎಂದು ಹಾರೈಸಿದರು


ಗ್ಯಾರೆಂಟಿ ನ್ಯೂಸ್ ಮುಖ್ಯಸ್ಥೆ ರಾಧಾ ಹಿರೇಗೌಡ ಮಾತನಾಡಿ ಪ್ರಾಥಮಿಕ ಹಂತದಲ್ಲಿಯೇ ಅನಾರೋಗ್ಯದ ಬಗ್ಗೆ ತಪಾಸಣೆಗೆ ಒಳಪಡಿಸಿಕೊಂಡು ಉತ್ತಮ ಚಿಕಿತ್ಸೆ ಪಡೆದುಕೊಂಡರೆ ಅನಾರೋಗ್ಯ ದಿಂದ ಮುಕ್ತರಾಗಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಟ್ರಸ್ಟ್ ನ ಅಧ್ಯಕ್ಷೆ ವಸಂತಕುಮಾರಿ ಮಾತನಾಡಿ ನಮ್ಮ ಪ್ರಯತ್ನ, ಶ್ರಮದಿಂದ ಮಾತ್ರ ಮೇಲೆ ಬರಲು ಸಾಧ್ಯ ಎಂದು ತಿಳಿಸಿದರು.


ನಿರಂತರ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್,ದಿ ಅರ್ನವ್ ಚಾರಿಟೇಬಲ್ ಟ್ರಸ್ಟ್ ಉಚಿತ ಸಂಯುಕ್ತಾ ಆಶ್ರಯದಲ್ಲಿ ಆರ್. ಆರ್. ನಗರದ ಎ. ಎಸ್. ಸ್ಪರ್ಶ ಆಸ್ಪತ್ರೆ ಮತ್ತು ಸ್ಪಂದನ ಲಯನ್ಸ್ ಕ್ಲಬ್ ಸೆಂಟೆನಿಯಲ್ ರವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ಪುರುಷರು, ಮಹಿಳೆಯ ರು ಬಿ ಪಿ, ಶುಗರ್, ಕಣ್ಣಿನ ತಪಾಸಣೆ ಹಾಗೂ ಸಾಮಾನ್ಯ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದುಕೊಂಡರು. ಹಾಗೂ ೧೦೦ ಕ್ಕೂ ಹೆಚ್ಚು ಕಣ್ಣಿನ ತಪಾಸಣೆಗೆ ಒಳಪಟ್ಟವರಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.


ಟ್ರಸ್ಟಿನ ಕಾರ್ಯದರ್ಶಿ ವಿನುತ, ಖಜಾಂಚಿ ತಿಮ್ಮೇಗೌಡ, ಉಪಾಧ್ಯಕ್ಷೆ ಜೈ ಲಕ್ಷ್ಮಿ, ವಾಸುದೇವ ನಾಯಕ್, ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಬಡಾವಣೆಯ ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು