
ಹಾರೋಹಳ್ಳಿ.ಮೇ೨೪: ಶಿಕ್ಷಣದಿಂದ ಮಾತ್ರ ಒಂದು ಮಗುವಿನ ಜೀವನವನ್ನು ರೂಪಿಸಲು ಸಾಧ್ಯವೆಂದು ತಿಳಿದು ಪ್ರತಿವರ್ಷ ನಮ್ಮ ಕಂಪನಿಯು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ ಎಂದು ಪಗಾರಿಯಾ ಫುಡ್‌ಪ್ರಾಡಕ್ಟ್ಸ್‌ಪ್ರವೇಟ್‌ಲಿಮಿಟೆಡ್ ಮ್ಯಾನೆಜಿಂಗ್‌ಡೈರೆಕ್ಟರ್ ನರೇಶ್‌ಪಗಾರಿಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಪಗಾರಿಯಾ ಫುಡ್‌ಪ್ರಾಡಕ್ಟ್ಸ್ ಪ್ರವೇಟ್‌ಲಿಮಿಟೆಡ್‌ನ ಕ್ವಾಲಿಟಿ ವಿದ್ಯಾಧನ್ ಸಿ.ಎಸ್.ಆರ್‌ನಿಧಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
ಶಿಕ್ಷಣದ ಪ್ರಾಮುಖ್ಯತೆಯನ್ನು ಅರಿತಿರುವ ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ತಮ್ಮ ಮಕ್ಕಳಿಗೆ ಬಡತನದಲ್ಲೂ ಸಹ ಶಿಕ್ಷಣವನ್ನು ಕೊಡಿಸುತ್ತಾ ಬಂದಿದ್ದಾರೆ ಇಂತಹ ಅಗತ್ಯವುಳ್ಳವರನ್ನು ಎನ್.ಜಿ.ಒ ಮೂಲಕ ಗುರುತಿಸಿ ನಮ್ಮ ಕಂಪನಿಯು ಪ್ರತಿವರ್ಷ ವಿದ್ಯಾರ್ಥಿವೇತನವನ್ನು ನೀಡುತ್ತ ಸಣ್ಣ ಮಟ್ಟದಲ್ಲಿ ಸಹಾಯ ಮಾಡುತ್ತ ಬಂದಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸುವ ಗುರಿಯನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಇಲ್ಲಿಯವರೆಗೆ ನಮ್ಮ ಕಂಪನಿಯ ಕಾರ್ಮಿಕರ ಮಕ್ಕಳನ್ನು ಪ್ರೋತ್ಸಾಹಿಸಿಕೊಂಡು ಬರಲಾಗುತಿತ್ತು, ಹಾರೋಹಳ್ಳಿ ಸುತ್ತಮುತ್ತಲ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿ ಬಡ ಮಕ್ಕಳನ್ನು ಪ್ರೋತ್ಸಾಹಿಸುವ ಅಂಗವಾಗಿ ಮುಡೇನಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಉನ್ನತೀಕರಣದ ಅಂಗವಾಗಿ ಶಾಲಾ ಕಾಂಪೌಂಡ, ಜೊತೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಬೇಕಾಗುವ ಅಗತ್ಯ ಪರಿಕರಗಳನ್ನು ನೀಡಲಾಗುತ್ತಿದೆ ಹಾಗೆಯೇ ಇದೇವರ್ಷ ಇನ್ನು ಎರಡು ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಈ ಮಣ್ಣಿನ ಋಣ ತೀರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಜೊತೆಗೆ ನಿಮ್ಮೆಲ್ಲರ ಪರಿಶ್ರಮದಿಂದ ನಮ್ಮ ಕಂಪನಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸಿಎಫ್‌ಬಿಟಿ ಎನ್.ಜಿ.ಒ ವ್ಯವಸ್ಥಾಪಕರಾದ ಮುರಳಿಯವರು ಮಾತನಾಡಿ ಪಗಾರಿಯ ಫುಡ್‌ಪ್ರಾಡಕ್ಟ್ಸ್‌ಪ್ರವೇಟ್‌ಲಿಮಿಟೆಡ್‌ತಮ್ಮೊಟ್ಟಿಗೆ ಸಮಾಜವು ಸಹ ಬೆಳೆಯಬೇಕೆಂಬ ಚಿಂತನೆಯನ್ನು ಹೊಂದಿದ್ದು ಅದರ ಅಂಗವಾಗಿ ಮುಡೇನಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಲ್ಲಿನ ವಿದ್ಯಾರ್ಥಿಗಳ ಅಗತ್ಯತೆಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನದ ಜೊತೆಗೆ ಮಕ್ಕಳಿಗೆ ಬೇಕಾದ ಎಲ್ಲಾ ಪರಿಕರಗಳನ್ನು ನೀಡುತ್ತಿದೆ ಇದಿಷ್ಟು ಮಾತ್ರವಲ್ಲದೆ ಹಾರೋಹಳ್ಳಿ ಸುತ್ತಮುತ್ತಲು ಇರುವ ೩ ಸರ್ಕಾರಿ ಶಾಲೆಗಳ ಮೂಲ ಭೂತ ಅವಶ್ಯಕತೆಗಳನ್ನು ಈಗಾಗಲೇ ಮನಗಂಡು ನೆರವು ನೀಡುತಿದ್ದಾರೆ ಇವರೊಟ್ಟಿಗೆ ನಾವೂ ಸಹ ಕೆಲಸ ಮಾಡಲು ಸಂತೋಷವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಂಪನಿಯ ಉದ್ಯೋಗಿಗಳಾದ ರೂಪ, ಆರ್ಷಿತಾ, ಸುಜಾತಾ, ಪವಿತ್ರ., ನಂದಿನಿ, ಜಯಲಕ್ಷ್ಮಮ್ಮ, ಶುಭಂ, ಶ್ಯಾಮಲ, ಶೋಭಾ., ಚನ್ನಯ್ಯ, ಗೌತಮ್ಮ ಕುಮಾರ್, ಸಂತೋಷ್, ಉಮೇನ್, ಪೂಜಾ, ಮಹದೇವಮ್ಮ, ನೀಲಾ, ಮೂರ್ತಿ, ಉದಯ್, ಧೃವಕುಮಾರ್, ಕನಕಪ್ರಸಾದ್ ಒಳಗೊಂಡ ವಿದ್ಯಾರ್ಥಿಗಳ ಪೋಷಕರಿಗೆ ೮ಲಕ್ಷ ಹಣವನ್ನು ವಿದ್ಯಾರ್ಥಿ ವೇತನವಾಗಿ ನರೇಶ್‌ಪಗಾರಿಯಾ ಹಾಗೂ ಸಚ್ಚಿನ ಪಗಾರಿಯಾ ವಿತರಿಸಿದರು.
ಕಾರ್ಯಕ್ರಮದ . ನಿರ್ವಹಣೆಯನ್ನು ರಮೇಶ್‌ಶೆಟ್ಟಿ ನಡೆಸಿಕೊಟ್ಟರು. ನಿರೂಪಣೆಯನ್ನು ವೈಭವ್‌ಮಾಡಿದರು. ಸಿಎಫ್‌ಬಿಟಿ ಮುಖ್ಯ ವ್ಯವಸ್ಥಾಪಕರಾದ ಸಂತೋಷ್ ಸೇರಿದಂತೆ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
























