ಗ್ರಾಮಸಭೆಯಲ್ಲಿ ದೂರುಗಳ ಸುರಿಮಳೆ

ಕೆಆರ್ ಪುರ,ಜೂ.೧೩- ಗ್ರಾಮ ಪಂಚಾಯತಿ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಕನ್ನಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಹಾಗೂ ಅವರ ಪತಿ ಸರ್ವಾಧಿಕಾರಿಯಾಗಿ ನಡೆದು ಕೊಳ್ಳುತ್ತಿದ್ದಾರೆ ಎಂದು ಗ್ರಾ.ಪ ಸದಸ್ಯರು ದೂರಿದರು.


ಕನ್ನಮಂಗಲ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಶಾಸಕರ ಎದುರು ದೂರುಗಳ ಸುರಿಮಳೆಗೈದರು.


ಅಧಿಕಾರಿಗಳನ್ನು ಕೈ ಗೊಂಬೆ ಮಾಡಿಕೊಂಡು ಗ್ರಾಮ ಪಂಚಾಯಿತಿಯ ಕೋಟ್ಯಾಂತರ ರೂಪಾಯಿಯನ್ನು ದುರುಪಯೋಗ ಮಾಡಿದ್ದಾರೆ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಮನವಿ ಸಲ್ಲಿಸಿದರು.


ಏಳು ತಿಂಗಳಿನಿಂದಲ್ಲೂ ಸಭೆ ನಡೆಸಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕವಾದ ರಸ್ತೆ, ಡಾಂಬರೀಕರಣವಾಗಿಲ್ಲ ಎಂದು ಸದಸ್ಯರು ಆರೋಪಿಸಿದರು.


ಅಧ್ಯಕ್ಷರು ಮಾಡಿರುವ ಹಗರಣಗಳ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯರಾದ ಯಲ್ಲಪ್ಪ,ಚೈತ್ರಾಯೋಗನಂದ್,ಸೋಮಶೇಖರ್ ಮತ್ತಿತರ ಸದಸ್ಯರು ಇಓ ಹಾಗೂ ಶಾಸಕರಿಗೆ ದೂರಿನ ಪ್ರತಿ ನೀಡಿದರು.