ಪೆನ್ ವಿಚಾರಕ್ಕಾಗಿ 5ನೇ ತರಗತಿ ವಿದ್ಯಾರ್ಥಿಗೆ ಕಟ್ಟಿಗೆಯಿಂದ ಕಣ್ಣಿಗೆ ಇರಿದು ಕಣ್ಣಗುಡ್ಡೆ ಒಡೆದ 1ನೇ ತರಗತಿ ವಿದ್ಯಾರ್ಥಿ!

ಮಹಾಲಿಂಗಪುರ:ಸೆ.10: ಪೆನ್ ವಿಷಯಕ್ಕೆ ವಿದ್ಯಾರ್ಥಿಗಳ ನಡುವೆ ಆರಂಭವಾದ ಕ್ಷುಲ್ಲಕ ಜಗಳವೊಂದು ಕಣ್ಣು ಗುಡ್ಡೆ ತಗಿಯುವ ಹಂತಕ್ಕೆ ಹೋಗಿದ್ದು, ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪೆನ್ ವಾಪಸ್ ಕೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಐದನೇ ತರಗತಿ ವಿದ್ಯಾರ್ಥಿ ಸಮರ್ಥ.ತಂದೆ ಕುಮಾರ.ಹಿರಟ್ಟಿ ಹಾಗೂ ಒಂದನೇ ತರಗತಿ ವಿದ್ಯಾರ್ಥಿ ಭಿಮಪ್ಪ ಆನಂದ ಲೋಕುರೆ ನಡುವೆ ಜಗಳ ಉಂಟಾಗಿದೆ. ಆರಂಭದಲ್ಲಿ ವಾಗ್ದಾದ ಸ್ವರೂಪ ಪಡೆದ ಈ ಘಟನೆ ಬಳಿಕ ವಿಕೋಪಕ್ಕೆ ಹೋಗಿದ್ದು, ಸಿಟ್ಟಿಗೆದ್ದ 1ನೇ ತರಗತಿ ವಿದ್ಯಾರ್ಥಿ ಕಟ್ಟಿಗೆಯಿಂದ ಮತ್ತೊಬ್ಬ 5ನೇ ತರಗತಿ ವಿದ್ಯಾರ್ಥಿ ಕಣ್ಣಿನ ಮೇಲೆ ಹಲ್ಲೆ ಮಾಡಿರುವ ಘಟನೆ ಜರುಗಿದೆ.
ಮಹಾಲಿಂಗಪುರ ಮತಕ್ಷೇತ್ರದ ಡವಳೇಶ್ವರ ಗ್ರಾಮದ ಮೊರಬ ವಸತಿ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸದ್ಯ ಕಟ್ಟಿಗೆ ಇರಿತಕ್ಕೆ ಒಳಗಾಗಿರುವ ಬಾಲಕನನ್ನು ಅಥಣಿ
ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಬಲಗಣ್ಣಿಗೆ ಗಂಭಿರವಾದ ಪೇಟ್ಟಾಗಿರುವದರಿಂದ ಚಿಕಿತ್ಸೆ ಮೂಲಕ ಆತನ ಕಣ್ಣ ಗುಡ್ಡೆ ಯನ್ನು ತೆಗೆಯಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಗಾಯಗೊಂಡ ಬಾಲಕನ ತಂದೆ ಕುಮಾರ ಹಿರಟ್ಟಿ ಮಾಹಲಿಂಗಪುರ ಪೆÇಲೀಸ ಠಾಣೆಯಲ್ಲಿ ಪ್ರಕರಣದ ಧಾಕಲು ಮಾಡಿದ್ದಾನೆ.

ಈ ಸಂಬಂಧ ಮುಖ್ಯ ಶಿಕ್ಷಕಿ ಜಯಶ್ರೀ ನಡುವಿನಕೇರಿ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿಗೆ ಪೆÇೀಷಕರು ಮಾಹಿತಿ ನೀಡಿದ್ದರು. ಶಿಕ್ಷಕರು ಗಂಭೀರವಾಗಿ ಪರಿಗಣಿಸದೆ, ಸ್ಥಳಕ್ಕೆ ಭೇಟಿ ನಿಡದೆ ಹಾಗೂ ಸಂಬಂಧ ಯಾವುದೇ ಕ್ರಮಕ್ಕೆ ಕೂಡ ಮುಂದಾಗದಿರುವದಕ್ಕೆ ಇವರ ಬೇಜವಾಬ್ದಾರಿನೆ ಈ ಘಟನೆಗೆ ಕಾರಣ ಎಂದು ಪ್ರಕ್ರಣ ಧಾಕಲು ಮಾಡಿದ್ದಾರೆ.

ಶಿಕ್ಷಕರ ವಿರುದ್ಧ ಪೆÇೀಷಕರ ದೂರು!

ಮಕ್ಕಳ ಜಗಳ ಆಗಾಗ ನಡೆಯುತ್ತಿದ್ದರೂ ಶಿಕ್ಷಕರು ಕ್ರಮವಹಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಸೂಕ್ತ ಕ್ರಮ ವಹಿಸದ ಶಿಕ್ಷಕರ ವಿರುದ್ಧ ದೂರು ದಾಖಲಾಗಿದೆ. ಸ್ಥಳಕ್ಕೆ ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹಾಗೂ ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಲು ಪೆÇೀಷಕರು ಮನವಿ ಸಲ್ಲಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಭರವಸೆ ನೀಡಿದ್ದಾರೆ. ಈ ಘಟನೆ ಸಂಭವಿಸಿದ ಹಿನ್ನೆಲೆ, ಮುಖ್ಯಶಿಕ್ಷಕಿ ಜಯಶ್ರೀ ನಡುವಿನಕೇರಿ, ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿ ವಿರುದ್ಧ ಮಹಾಲಿಂಗಪೂರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.