
ಕುಂದಗೋಳ ಮೇ.೨೪: ತಾಲೂಕಿನ ಸಂಶಿ ಕೆಎಲ್ಇ ಕಾಲೇಜು ಮತ್ತು ಹುಬ್ಬಳ್ಳಿ ಕೆಎಲ್ಇ ಆಸ್ಪತ್ರೆ-ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ನಡೆಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರ ಶಿಬಿರ ಉದ್ಘಾಟಿಸಿದ ಶಾಸಕ ಎಂ ಆರ್ ಪಾಟೀಲ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ÷್ಯ ತೋರದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ ಕೆಎಲ್ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಚೇರ್ಮನ್ ಶಂಕರಣ್ಣ ಮುನವಳ್ಳಿ ಹುಬ್ಬಳ್ಳಿ ಜೆಜಿಎಂಎA ಆಸ್ಪತ್ರೆ ನಿರ್ದೇಶಕ ಡಾ. ಎಂ.ಜಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಶಿ ಕೆಎಲ್ಇ ಕಾಲೇಜು ಸ್ಥಾನಿಕ ಅಧ್ಯಕ್ಷ ಎ ಬಿ ಉಪ್ಪಿನ ಮಾತನಾಡಿ ಸಂಶಿಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿ ಆಗಿದೆ. ಶಿಬಿರಾರ್ಥಿಗಳು ವೈದ್ಯರ ಸಲಹೆಯೊಂದಿಗೆ ಉತ್ತಮ ಚಿಕಿತ್ಸೆ ಪಡೆದು ಗುಣಮುಖರಾದರೆ ಎಂದರು.
ಜೆಜಿಎಂ ಕಾಲೇಜು ಪ್ರಾಚಾರ್ಯೆ ಡಾ.ಶಾರದಾ ಮೆಟಗುಡ, ಜೆಜಿಎಂ ಆಡಳಿತಾಧಿಕಾರಿ ಡಾ. ಅರುಣಕುಮಾರ ಎಮ್, ನಿರ್ದೇಶಕ ಎಚ್ ಎನ್ ಪಾಟೀಲ, ಬಿ.ಬಿ.ಪಾಟೀಲ, ಶಿಕ್ಷಕ ಎಂ. ಎಫ್ ನಧಾಪ್ ಹಾಗೂ ಕಾಲೇಜು ಸಿಬ್ಬಂದಿಯವರಿದ್ದರು.
ಸಂಶಿ ಕಾಲೇಜು ಪ್ರಾಚಾರ್ಯ ಪ್ರೋ. ರಮೇಶ ಅತ್ತಿಗೇರಿ ಸ್ವಾಗತಿಸಿದರು. ಜಿ.ಜೆ.ಕಟಗಿ ವಂದಿಸಿದರು. ಸಿ.ಎಸ್.ಗುರಮಠ ನಿರೂಪಿಸಿದರು.





















