Home ಜಿಲ್ಲೆ ಕಲಬುರಗಿ ಸಾಂಸ್ಕøತಿಕ ಸಂಭ್ರಮ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಸಾಂಸ್ಕøತಿಕ ಸಂಭ್ರಮ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕಲಬುರಗಿ,ಮೇ.24-ಹೈದ್ರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕøತಿಕ ನೃತ್ಯ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ಶನಿವಾರ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಭರತನಾಟ್ಯ, ಜಾನಪದ ನೃತ್ಯ, ಡೊಳ್ಳು ಕುಣಿತ, ಸುಗಮ ಸಂಗೀತ ಜರುಗಿದವು. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಜನರಿಗೆ ಸಾಧಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಸುರೇಶ್ ಶರ್ಮಾ, ಡಾ.ಅಮರೇಶ್ವರ ಬಾಬುರಾವ್ ಚಿಂಚನಸೂರು, ನೀಲಕಂಠರಾವ ಮೂಲಗೆ, ಅಭಿಷೇಕ್ ಬಾಲಾಜಿ, ವಿಜಯ್ ಕುಮಾರ್ ಕಟ್ಟಿಮನಿ, ಎಂ.ಎ. ಸಿದ್ಧಗಿ, ಡಾ.ಸಂಪತ್ ಹಿರೇಮಠ ಹಾಗೂ ಇನ್ನಿತರ ಎಂದು ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕೃತಿಕ ನೃತ್ಯ ಸಂಘದ ಅಧ್ಯಕ್ಷರಾದ ಗುರು ಬಂಡಿ ತಿಳಿಸಿದ್ದಾರೆ.