
ಬೀದರ ,ಮೇ 24: ನಗರದ ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಶಾಹೀನ್ ನಾಲೆಜ್
ಸಿಟಿಯಲ್ಲಿ 18-25 ವರ್ಷದ ಮಹಿಳೆಯರಿಗಾಗಿ ವಿಶೇಷವಾಗಿ ಎಐ ಶೀ ಸಮೀಟ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಮಾರಂಭವು ಕೃತಕ ಬುದ್ಧಿಮತ್ತೆ , ಸೈಬರ್ ಕ್ರೈಮ್ ಜಾಗೃತಿ, ಡಿಜಿಟಲ್‍ಸುರಕ್ಷತೆ ಹಾಗೂ ಮಹಿಳಾ ರಕ್ಷಣೆಗೆ ಸಂಬಂಧಿಸಿದ ಂI ಮೊಬೈಲ್ ಅಪ್ಲಿಕೇಶನ್‍ಗಳ ಕುರಿತುಕೇಂದ್ರೀಕೃತವಾಗಿತ್ತು. ಕಾರ್ಯಕ್ರಮದ ಅಂಗವಾಗಿ ಎಐ ಕ್ವಿಜ್,ಪೇಪರ್ ಪ್ರೆಜೆಂಟೇಷನ್ ವiತ್ತು ಎಐ ವಿಡಿಯೋ ಮೇಕಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಯಿತು.
ಬೆಳಗಿನ ಅಧಿವೇಶನದಲ್ಲಿ ಮಲ್ಲಾರೆಡ್ಡಿ ವಿಶ್ವ ವಿದ್ಯಾಪೀಠದ ಉಪಾಧ್ಯಕ್ಷರಾದ ಡಾ.ಪ್ರೀತಿ ರೆಡ್ಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದಪೆÇ್ರ. ಮುಸ್ತಫಾ ಬಸ್ತಿಕೋಡಿ, ಅಕ್ಕಪಡೆ ಸಂಸ್ಥೆಯ ಮುಖ್ಯ ಸಲಹೆಗಾರ್ತಿ ಶೈನಿ ಪ್ರದೀಪ್‍ಗುಂಟಿ ಹಾಗೂ ಸ್ಟ್ಯಾಂಡರ್ಡ್ ಟಚ್ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯ ತಾಂತ್ರಿಕ
ಅಧಿಕಾರಿ ಹಂಝಾ ಮೌಝಂ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಂಜೆಯ ಅಧಿವೇಶನದಲ್ಲಿ “ಹೊಸ ಶಿಕ್ಷಣ ನೀತಿ 2020” ಕುರಿತ ಸ್ಟೂಡೆಂಟ್ಸ್‍ಪಾರ್ಲಿಮೆಂಟ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಹೀನ್ ಗ್ರೂಪ್ ಆಫ್‍ಇನ್ಸ್ಟಿಟ್ಯೂಷನ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಹಸೀಬ್, ಕಾರ್ಯನಿರ್ವಾಹಕನಿರ್ದೇಶಕ ಅಬ್ದುಲ್ ಮುಖೀತ್, ಅಕಾಡೆಮಿಕ್ ನಿರ್ದೇಶಕಿ ಶೈಸ್ತಾ ನಾಝ್, ಆಡಳಿತ
ನಿರ್ದೇಶಕಿ ಜಮೀಲಾ ವಫಾ ಹಾಗೂ ದಿ ಹೆಚ್ ಆರ್ ಎಸ್ ಶೋ ಸಂಸ್ಥಾಪಕರಾದ ಹಬೀಬ್ ಉರ್‍ರಹ್ಮಾನ್ ಶಹಾಬಾದಿ ಅತಿಥಿಗಳಾಗಿ ಭಾಗವಹಿಸಿದರು.
ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷÀ ಡಾ. ಅಬ್ದುಲ್ ಖದೀರ್ ಅವರುಬೆಳಗ್ಗೆ ಮತ್ತು ಸಂಜೆ ಎರಡೂ ಅಧಿವೇಶನಗಳಿಗೆ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲರಾದ ಅಫ್ರಾನಾಝ್ ಅವರು ಎಲ್ಲಾ ಅತಿಥಿಗಳನ್ನು ಹಾಗೂ ಭಾಗವಹಿಸಿದವರನ್ನುಸ್ವಾಗತಿಸಿದರು.ಎಐ ಕ್ವಿಜ್ ನಲ್ಲಿ ಚನ್ನಬಸವೇಶ್ವರ ಗುರುಕುಲ, ಭಾಲ್ಕಿಯ ವರ್ಷಾ ಶೆಕೋಬಾ ಮತ್ತುಭಾಗ್ಯಶ್ರೀ ಭೂರೆ ಪ್ರಥಮ ಬಹುಮಾನ ಪಡೆದರು. ಕರ್ನಾಟಕ ಡಿಗ್ರಿ ಕಾಲೇಜು, ಬೀದರಿನಅನಿಜಲ್ ಮತ್ತು ವರ್ಷಿಣಿ ದ್ವಿತೀಯ ಬಹುಮಾನ ಹಾಗೂ ಹುಮ್ನಾಬಾದ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಲಜೀನಾ ಬೇಗಂ ಮತ್ತು ಸೈಯದಾ ಫಾತಿಮಾ ತೃತೀಯ ಬಹುಮಾನ ಪಡೆದರು.ಎಐ ವಿಡಿಯೋ ಮೇಕಿಂಗ್ ಸ್ಪರ್ಧೆಯಲ್ಲಿ ಗುರುನಾನಕ್ ಫಸ್ಟ್ ಗ್ರೇಡ್ ಕಾಲೇಜ್ ಅಂಡ್‍ಎಂಜಿನಿಯರಿಂಗ್, ಬೀದರಿನ ಮದಿಹಾ ಫಾತಿಮಾ ಮತ್ತು ಯುಮ್ನಾ ಪ್ರಥಮ ಸ್ಥಾನ ಪಡೆದರು.ಗುರುನಾನಕ್ ಫಸ್ಟ್ ಗ್ರೇಡ್ ಕಾಲೇಜಿನ ಸಂಜನಾ ಜೋಶಿ ಮತ್ತು ಚಂದ್ರಕಲಾ ದ್ವಿತೀಯ
ಬಹುಮಾನ ಪಡೆದರೆ, ಅಲ್ ಅಮೀನ್ ಡಿಗ್ರಿ ಕಾಲೇಜಿನ ಹುನೈನ್ ಹಜೇರಾ ಮತ್ತು ಸೈಯದಾ
ಫಾತಿಮಾ ಬೇಗಂ ತೃತೀಯ ಬಹುಮಾನ ಪಡೆದರು.ಪಿಪಿಟಿ ಪೇಪರ್ ಪ್ರೆಜೆಂಟೇಷನ್ ಸ್ಪರ್ಧೆಯಲ್ಲಿ ಬಸವಕಲ್ಯಾಣದ ಇಕ್ರಾ ಇಂಡಿಪೆಂಡೆಂಟ್‍ಪ್ರೀ-ಯೂನಿವರ್ಸಿಟಿ ಕಾಲೇಜಿನ ಜೈನಬ್ ಶೇಖ್ ಮತ್ತು ಜುನೆರಾ ಕಶಾಫ್ ಪ್ರಥಮ ಬಹುಮಾನಪಡೆದರು. ಬೀದರಿನ ಜ್ಞಾನ ಸುಧಾ ಡಿಗ್ರಿ ಕಾಲೇಜಿನ ಕೀರ್ತಿ ಪಂಚಾಲ್ ದ್ವಿತೀಯ ಬಹುಮಾನಹಾಗೂ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಅಮ್ತುಲ್ ಅಜೀಜ್ ತೃತೀಯ ಬಹುಮಾನ ಪಡೆದರು.





















