
ಕಲಬುರಗಿ,ಮೇ 24: ಮಹಾತ್ಮ ಜ್ಯೋತಿಬಾ ಫುಲೆ ಅವರ 200ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾಳಗಿ ತಾಲೂಕಿನ ವಚ್ಚಾ ಗ್ರಾಮದಲ್ಲಿ ಎಐಡಿಎಸ್‍ಒ ಸಂಘಟನೆ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ವಚ್ಚಾ ಸ್ಥಳೀಯ ಸಮಿತಿ ವತಿಯಿಂದ ಒಂದು ದಿನದ ಮಕ್ಕಳ ಬೇಸಿಗೆ ಶಿಬಿರ ಮಾಡಲಾಯಿತು.
ಮುಖ್ಯ ಭಾಷಣಕಾರರಾಗಿ ಎಐಡಿಎಸ್‍ಒ ಜಿಲ್ಲಾ ಸಮಿತಿ ಸದಸ್ಯ ದೇವರಾಜ್ ಮಾತನಾಡುತ್ತಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಂದು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿಗಳನ್ನು ಮುಚ್ಚಿ ಬಡ – ಮಧ್ಯಮ ವರ್ಗದ ಮಕ್ಕಳನ್ನು ಸಂಪೂರ್ಣವಾಗಿ ಶಿಕ್ಷಣದಿಂದ ದೂರ ಮಾಡುತ್ತಿವೆ.ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಸಮುದಾಯವು ಮಹಾತ್ಮ ಜ್ಯೋತಿಬಾ ಫುಲೆ ಅವರ ಸಾರ್ವತ್ರಿಕ ಶಿಕ್ಷಣದ ಕೂಗಿನೊಂದಿಗೆ ನಮ್ಮೂರ ಶಾಲೆ ಉಳಿಸಲು ಮುಂದೆ ಬರಬೇಕು ಎಂದು ಹೇಳಿದರು. ಗ್ರಾಮದ ವಿದ್ಯಾರ್ಥಿ ರಮಾ ದೊಡ್ಡಮನಿ ಅವರು ಶಿಬಿರ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಚ್ಚಾ ಗ್ರಾಮದ ಎಸ್ ಡಿ ಎಮ್ ಸಿ ಅಧ್ಯಕ್ಷ ಬಸವರಾಜ್ ಪೂಜಾರಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸ್ಥಳೀಯ ಸಮಿತಿಯ ಅಧ್ಯಕ್ಷ ಶಿವಕುಮಾರ್ ಪೂಜಾರಿ, ಸಂಜು ಕುಮಾರ್ ದೊಡ್ಡಮನಿ, ಕಾಶಿನಾಥ್, ಶ್ರೀನಿವಾಸ್, ಗೋವಿಂದ ಯಳವಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು





















