
ವಾಷಿಂಗ್ಟನ್, ಮೇ ೨೪- ಅಮೆರಿಕದ ಶ್ವೇತಭವನದ ಚೆಕ್‌ಪಾಯಿಂಟ್‌ನಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ರಹಸ್ಯ ಸೇವಾ ಸಿಬ್ಬಂದಿ ಪೊಲೀಸರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಅಮೆರಿಕದಲ್ಲಿ ಇತ್ತೀಚೆಗೆ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಭದ್ರತಾ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಶ್ವೇತಭವನದ ಬಳಿಯ ೧೭ ನೇ ಬೀದಿ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿರುವ ಚೆಕ್‌ಪೋಸ್ಟ್ ಸಮೀಪಿಸಿ, ತನ್ನ ಬಳಿ ಇದ್ದ ಬಂದೂಕಿನಿಂದ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ, ತಕ್ಷಣ ಸೀಕ್ರೆಟ್ ಸರ್ವೀಸ್ ಪೊಲೀಸರು ಆರೋಪಿಯ ವಿರುದ್ಧ ಗುಂಡಿನ ದಾಳಿ ನಡೆಸಿದ್ದಾರೆ, ತೀವ್ರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಶಂಕಿತ ಆರೋಪಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಆಗುಂತುಕ ಪೊಲೀಸರ ಮೇಲೆ ಗುಂಡು ಹಾರಿಸುವ ವೇಳೆ ರಸ್ತೆಯಲ್ಲಿದ್ದು ವ್ಯಕ್ತಿಗೆ ಗುಂಡು ತಗುಲಿದೆ ಎಂದು ತಿಳಿಸಿದ್ದಾರೆ
ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಭಾವನಾತ್ಮಕವಾಗಿ ತೊಂದರೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರು ತಿಳಿಸಿದ್ದು ಆತನ ಪೂರ್ವಾಪರ ಕಲೆ ಹಾಕುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ
ಗುಂಡಿನ ದಾಳಿಯಲ್ಲಿ ನಾಗರಿಕ ಗಾಯಗೊಂಡಿರುವುದನ್ನು ಬಿಟ್ಟರೆ ಯಾವುದೇ ಕಾನೂನು ಜಾರಿ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ, ಘಟನೆಯ ಸಮಯದಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ
ಶ್ವೇತಭವನದ ವರದಿಗಾರರ ಸಂಘದ ಭೋಜನಕೂಟವನ್ನು ಆಯೋಜಿಸಿದ್ದ ಹೋಟೆಲ್ ಒಳಗೆ ಗುಂಡು ಹಾರಿಸಿದ ಸುಮಾರು ಒಂದು ತಿಂಗಳ ನಂತರ ಗುಂಡಿನ ದಾಳಿ ನಡೆದಿದೆ.
























