Home ಜಿಲ್ಲೆ ಕಲಬುರಗಿ ಮುಡಬೂಳ ಬಳಿಯ ಮೃಗಾಲಯ ಶೀಘ್ರದಲ್ಲೇ ಉದ್ಘಾಟನೆ

ಮುಡಬೂಳ ಬಳಿಯ ಮೃಗಾಲಯ ಶೀಘ್ರದಲ್ಲೇ ಉದ್ಘಾಟನೆ

ಕಲಬುರಗಿ,ಮೇ 9: ಚಿತ್ತಾಪುರ ತಾಲೂಕಿನ ಮುಡಬೂಳ ಗ್ರಾಮದ ಬಳಿ 6.33 ಎಕರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಿನಿ ಮೃಗಾಲಯ ಹಾಗೂ ಮಕ್ಕಳ ಉದ್ಯಾನವನ ಅತೀ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 38(1) ಅಡಿಯಲ್ಲಿ ಮೃಗಾಲಯ ಸ್ಥಾಪನೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿದೆ ಎಂದರು.
ಹೊಸ ಮೃಗಾಲಯದಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣಗಳು ನಿರ್ಮಾಣವಾಗಲಿವೆ.
ನಿಶಾಚರ ಪ್ರಾಣಿಗಳು 6,ಭಾರತೀಯ ಪಕ್ಷಿಗಳು – 10,ಸಣ್ಣ ಪಕ್ಷಿಗಳು – 6.ಫೀಸಂಟ್ – 6,ಸಸ್ತನಿಗಳು-10
ಪ್ರೈಮೇಟ್‍ಗಳು -4,ಶಾಕಾಹಾರಿ ಪ್ರಾಣಿಗಳು -6,ಉಭಯಚರ/ಸರೀಸೃಪಗಳು -8ಆಮೆ, ಘರಿಯಾಲ್, ಮೊಸಳೆ, ಚುಕ್ಕೆ ಜಿಂಕೆ, ಗೋಲ್ಡನ್ ಜಾಕಲ್, ಹುಲಿ, ಸಿಂಹ, ಸ್ತೋತ್ ಕರಡಿ, ಜೀಬ್ರಾ, ಬಬೂನ್, ಲಂಗೂರು ಹಾಗೂ ವಿವಿಧ ಪಕ್ಷಿಗಳಿಗಾಗಿ ಒಟ್ಟು 23 ಆವರಣಗಳು ಪೂರ್ಣಗೊಂಡಿವೆ.
ಹೊಸ ಮೃಗಾಲಯಕ್ಕೆ ಈಗಾಗಲೇ ಆಮೆ, ಮೊಸಳೆ, ಇಮು, ಸಿಲ್ವರ್ ಫೀಸಂಟ್, ಗಿಳಿಗಳು, ನವಿಲುಗಳು, ಜಾಕಲ್, ಕಪ್ಪು ಗಿಡುಗಗಳು, ಲಂಗೂರು, ಕಪ್ಪು ಜಿಂಕೆ.ಸ್ಥಳಾಂತರಗೊಂಡಿವೆ ಮುಂದೆ ಸಿಂಹ, ಸಾಂಬರ್, ರೆಡ್ ಜಂಗಲ್ ಫೌಲ್, ಪೈಥಾನ್ ಹುಲಿ, ಬಬೂನ್, ಸ್ತೋತ್ ಕರಡಿ, ಕಿಂಗ್ ಕೋಬ್ರಾ ಜೀಬ್ರಾ, ಘರಿಯಾಲ್ ಹಾಗೂ ಇತರೆ ಪಕ್ಷಿ ಮತ್ತು ಸರೀಸೃಪ ಜಾತಿಗಳು ಸ್ಥಳಾಂತರಗೊಳ್ಳಲಿವೆ ಎಂದರು
ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ್ ,ಎಂ ಎಲ್ ಸಿಗಳಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಜೆಸ್ಕಾಂ ಚೇರ್ ಮನ್ ಪ್ರವೀಣ್ ಹರವಾಳ, ಕುಡಾ ಅಧ್ಯಕ್ಷ ಮಹಜರ್ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ ಶಿಂಧೆ, ಸುಮಿತ್ ಪಾಟೀಲ್ ಸೇತರಿದಂತೆ ಹಲವರಿದ್ದರು.