ಡ್ರೂಜ್, ಬೆಡೋಯಿನ್ ಹಿಂಸಾಚಾರಕ್ಕೆ 600 ಸಾವು


ವಾಲ್ಘಾ,ಜು.೨೦- ಕದನ ವಿರಾಮ ಘೋಷಣೆಯ ಹೊರತಾಗಿಯೂ ಸಿರಿಯಾದ ಡ್ರೂಜ್ ಮತ್ತು ಬೆಡೋಯಿನ್ ಬುಡಕಟ್ಟು ಸಮುದಾಯಗಳ ನಡುವಿನ ಹಿಂಸಾಚಾರ, ಘರ್ಷಣೆಗಳು ಭುಗಿಲೆದ್ದಿವೆ. ಈವರೆಗೆ ೯೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಸೇನಾ ಪಡೆಗಳು ಡ್ರೂಜ್ ಮೇಲಿನ ದಾಳಿಯಲ್ಲಿ ಈವರೆಗೆ ಹಿಂಸಾಚಾರದಲ್ಲಿ ೯೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ನೂರಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾg.

ಕಳೆದ ವಾರದಿಂದ ಅಲ್ಪಸಂಖ್ಯಾತ ಡ್ರೂಜ್ ಸಮುದಾಯದ ಹೋರಾಟಗಾರರು ಸುವೈದಾ ಪ್ರಾಂತ್ಯದಲ್ಲಿ ಸಶಸ್ತ್ರ ಬೆಡೋಯಿನ್‌ಗಳೊಂದಿಗೆ ಹೋರಾಡುತ್ತಿದ್ದಾರೆ, ಎರಡೂ ಕಡೆಯವರು ದೌರ್ಜನ್ಯದ ಆರೋಪ ಹೊರಿಸುತ್ತಿದ್ದು ಶಾಂತಿ ಕಾಪಾಡಲು ಆದ್ಯತೆ ನೀಡಲಾಗಿದೆ.

ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಪರಿಸ್ಥಿತಿ ತಡೆಯಲು ಸೇನಾ ಪಡೆಗಳನ್ನು ನಿಯೋಜನೆ ಮಾಡಿದ್ದಾರೆ. ಈ ವಾರದ ಆರಂಭದಲ್ಲಿ ಡ್ರೂಜ್‌ಗೆ ಇಸ್ರೇಲ್ ಬೆಂಬಲ ಘೋಷಿಸಿದ್ದು ರಾಜಧಾನಿ ಡಮಾಸ್ಕಸ್‌ನಲ್ಲಿರುವ ಸರ್ಕಾರಿ ಪಡೆಗಳು ಮತ್ತು ರಕ್ಷಣಾ ಸಚಿವಾಲಯದ ಕಚೇರಿಯ ಮೇಲೆ ದಾಳಿ ನಡೆದಿದೆ.

ಘರ್ಷಣೆ ಕೊನೆಗೊಳಿಸಲು ಸಿರಿಯನ್ ಭದ್ರತಾ ಪಡೆಗಳನ್ನು ಸುವೈದಾಗೆ ನಿಯೋಜಿಸಿದ್ದು ಇದರ ನಡುವೆ ಕದನ ವಿರಾಮವನ್ನು ಘೋಷಿಸಿದ್ದು ಈ ಒಪ್ಪಂದ ಇಸ್ರೇಲಿ ಸೇನಾ ದಾಳಿ ನಿಲ್ಲಿಸುವುದಾಗಿ ಹೇಳಿದ್ದರೂ ಮತ್ತೆ ದಾಳಿ ನಡೆದಿz.

ಎರಡು ಸಮುದಾಯಗಳ ನಡೆಯುವ ಸಂಘರ್ಷ ಮತ್ತು ಹೋರಾಟವನ್ನು ನಿಲ್ಲಿಸಲು ಹೆಚ್ಚಿನ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಹಲವು ಕಡೆ ಚೆಕ್ ಪೋಸ್ಟ್ ತೆರೆದು ಎಲ್ಲೆಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ.

ಸಾಮಾಜಿಕ ಮಾಧ್ಯಮ ಪೊ?ಸ್ಟ್‌ನಲ್ಲಿ, ಗಿಡಿಯಾನ್ ಸಾರ್ ಸಿರಿಯಾದಲ್ಲಿ ಅಲ್ಪಸಂಖ್ಯಾತರ ಭಾಗವಾಗಿರುವುದು “ತುಂಬಾ ಅಪಾಯಕಾರಿ”. “ಕಳೆದ ಆರು ತಿಂಗಳುಗಳಲ್ಲಿ ಮತ್ತೆ ಮತ್ತೆ ಸಾಬೀತಾಗಿದೆ” ಎಂದು ಹೇಳಿದ್ದಾg.

ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್‌ನಲ್ಲಿ ವಾಸಿಸುವವರೊಂದಿಗಿನ ಸಂಬಂಧಗಳಿಂದಾಗಿ ಸಿರಿಯಾದಲ್ಲಿ ಡ್ರೂಜ್‌ಗೆ ಹಾನಿಯಾಗದಂತೆ ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಸುವೈಡಾದಲ್ಲಿ ಡ್ರೂಜ್ ಮತ್ತು ಬೆಡೋಯಿನ್ ಬುಡಕಟ್ಟು ಜನಾಂಗದವರ ನಡುವೆ ದೀರ್ಘಕಾಲದಿಂದ ನಡೆಯುತ್ತಿದ್ದ ಉದ್ವಿಗ್ನತೆ ಕಳೆದ ವಾರ ಮಾರಕ ಪಂಥೀಯ ಘರ್ಷಣೆ ಭುಗಿಲೆದ್ದಿದೆ.ರಾಜಧಾನಿ ಡಮಾಸ್ಕಸ್‌ಗೆ ಹೋಗುವ ಹೆದ್ದಾರಿಯಲ್ಲಿ ಡ್ರೂಜ್ ನಲ್ಲಿ ಹಿಂಸಾಚಾರ ಹೆಚ್ಚಾಗಿದೆ.

ಇಸ್ರೇಲ್ ಮತ್ತು ಸಿರಿಯಾ ನಡುವಿನ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಿದೆ ಎಂದು ಸಿರಿಯಾದಲ್ಲಿರುವ ಅಮೆರಿಕದ ವಿಶೇಷ ರಾಯಭಾರಿ ಟಾಮ್ ಬರಾಕ್ ಘೋಷಿಸಿದ್ದಾರೆ.