
ಬೀದರ:ಡಿ.26:ನಗರದ ಪ್ರಸಿದ್ಧ ಗುರು ನಾನಕ ಝಿರಾ ಫೌಂಡೇಶನ ಪೂರ್ವ ಅಧ್ಯಕ್ಷರಾಗಿದ್ದ ಸ್ವರ್ಗಿಯ ಪಂತ ರತ್ನ ಸರದಾರ ಜೋಗಾಸಿಂಗ್ ಅವರ 93ನೇ ಜನ್ಮ ದಿನಾಚರಣೆಯನ್ನು ಜೋಗಾಸಿಂಗ್ ಸ್ಮಾರಕ ಉದ್ಯಾನದಲ್ಲಿ ಗುರುವಾರದಂದು ಬೆಳಿಗ್ಗೆ 8:30 ಕ್ಕೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನಾನಕ ಝಿರಾ ಸಾಹೇಬ್‍ನ ಅಧ್ಯಕ್ಷ, ಅವರ ಪುತ್ರÀ ಡಾ. ಸರದಾರ ಬಲಬೀರಸಿಂಗ್ ಮತ್ತು ಗುರು ನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ ಅಲ್ಲದೆ ಅವರ ಅಪಾರ ಬಂಧು ಮಿತ್ರರು ಮತ್ತು ಗುರು ನಾನಕ ಗ್ರುಪ್ ಆಫ್ ಇಂನ್ಸಿಟಿಟುಷನ್ಸನ ಸಿಬ್ಬಂದಿ ವರ್ಗದವರು ಸ್ಮಾರಕ್ಕೆ ಪುಷ್ಪಗುಚ್ಚ ವಿರಿಸಿ ನಮನ ಸಲ್ಲಿಸಿದರು.
ಸ್ವರ್ಗಿಯ ಪಂತ ರತ್ನ ಶಿರೋಮಣಿ ಸರದಾರ ಜೋಗಾಸಿಂಗರ ನೆನಪಾರ್ಥ ಗುರು ನಾನಕ ಝಿರಾ ಸಾಹೇಬ ಗುರುದ್ವಾರದಲ್ಲಿ ಅಖಂಡ ಪಾಠ ಆಯೋಜನೆ ಮತ್ತು ಲಂಗರ್ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸರದಾರ ಸರದಾರ ಪುನಿತ್ ಸಿಂಗ್, ಸರದಾರ ಪವಿತ್ ಸಿಂಗ್ ಮತ್ತು ಅಪಾರ ಬಂಧು ಮಿತ್ರರರು ಉಪಸ್ಥಿತರಿದ್ದರು.




























