9 ಮಂದಿ ಸಾಧಕರಿಗೆ ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರದಾನ ಜಿಟಿಡಿ

ಸಂಜೆವಾಣಿ ನ್ಯೂಸ್
ಮೈಸೂರು.ನ10:-
ಕನ್ನಡ ಉಳಿವಿನ ವಿಷಯದಲ್ಲಿ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಶಾಸಕ ಜಿಟಿ ದೇವೇಗೌಡ ಪ್ರತಿಭಾದಿಸಿದರು ಸಂತೆ ಮೈದಾನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡದ ಕೆಲಸವನ್ನು ಯಾರೇ ಮಾಡಿದರು ಬೆಂಬಲ ನೀಡಬೇಕು.


ಈ ವಿಷಯದಲ್ಲಿ ತಾರತಮ್ಯ ಮಾಡಬಾರದು ಎಂದು ಕಿವಿ ಮಾತು ಹೇಳಿದರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಐದು ವರ್ಷಗಳಿಂದ ಕನ್ನಡ ಪರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು ಇದನ್ನು ಇದೇ ನೆಲದಲ್ಲಿ ಮಣ್ಣಾಗುವವರೆಗೂ ಮುಂದುವರಿಸಲಾಗುವುದು ಎಂದರು ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಶಂಭುಲಿಂಗ ಕ್ಷೇತ್ರ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು ಕನ್ನಡಾಂಬೆ ವಾರ್ಷಿಕ ಸಂಚಿಕೆಯನ್ನು ಬಿಜೆಪಿ ಯುವ ಮುಖಂಡ ವಿ ಕವಿಷ್ ಗೌಡ ಲೋಕಾರ್ಪಣೆಗೊಳಿಸಿದರು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ ಮುಖ್ಯ ಅತಿಥಿಯಾಗಿದ್ದರು ನಂಜುಂಡ ಸಂತೋಷ್ ಹೊನ್ನೇಗೌಡ ಸಿಂಧುವಳ್ಳಿ ಶಿವಕುಮಾರ್ ಮಹಾದೇವ್ ಲೋಕೇಶ್ ಗೌತಮ್ ಶ್ರೀನಿವಾಸ್ ಅಮರನಾಥ್ ಕೀ ಕ್ಕೇರಿ ಕುಮಾರ್ ಕಿರಣ್ ವೇದಿಕೆ ಪದಾಧಿಕಾರಿಗಳು ಹಾಜರಿದ್ದರು ವಾತ್ಸಲ್ಯ ಪ್ರಾರ್ಥಿಸಿದರು ಸುಮರಾಜ್ ಕುಮಾರ್ ಕಾರ್ಯಕ್ರಮ ನಿರುಪಿಸಿದರು ಗೂಡ್ಗುಳ್ಳಿಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರುಪ್ರಶಸ್ತಿ ಪುರಸ್ಕೃತರು ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಬಿ ಶಿವರಾಜ್ ಪಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿ ಕೆರೆ ಗೋಪಾಲ್ ಕನ್ನಡ ಸಾಹಿತ್ಯ ಕಲ ಕೂಟದ ಅಧ್ಯಕ್ಷ ಎಂ ಚಂದ್ರಶೇಖರ್ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಯೋಗೇಶ್ ಕರ್ನಾಟಕ ನ್ಯಾಯಪರ ವೇದಿಕೆ ರಾಜ್ಯಾಧ್ಯಕ್ಷರು ಸವಿತಾ ಮೈಸೂರು ತಾಲೂಕಿನ ಶಿರಸ್ತಧಾರ ಕೆ ಎಸ್ ಕುಬೇರ್ ಇಲ್ವಲ್ಲ ಠಾಣೆಯ ಬಿಎಸ್‍ಐ ಮಹೇಂದರ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಚ್ ಎ ಜೈ ರಾಮಯ್ಯ ಅವರಿಗೆ ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು