ಬೀಗ ಮುರಿದು 82 ಸಾವಿರ ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಜ.23: ನಗರದ ಹಳೆಯ ಜೇವರಗಿ ರಸ್ತೆಯ ಮನೆಯೊಂದರ ಬೀಗ ಮುರಿದ ಕಳ್ಳರು 82 ಸಾವಿರ ಮೌಲ್ಯದ ನಗನಾಣ್ಯ ದೋಚಿಕೊಂಡು ಘಟನೆ ಜರುಗಿದೆ
ಶಿವರಾಜ ವೀರಪ್ಪ ಅವಂಟಿ ಎಂಬುವವರ ಮನೆ ಕಳುವಾಗಿದ್ದು, ಅವರು ಮನೆಗೆ ಬೀಗ ಹಾಕಿಕೊಂಡು ಪರವೂರಿಗೆ ಹೋದಾಗ ಕಳ್ಳತನ ನಡೆದಿದೆ.
66 ಸಾವಿರ ಮೌಲ್ಯದ ಚಿನ್ನ ಹಾಗೂ 16 ಸಾವಿರ ರೂ ನಗದು ಕಳುವಾಗಿದೆ ಎಂದು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.