80ನೇ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹನೂರು ಜ 14 :
– ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಆಗ್ರಹಿಸಿ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ವಡಕೆಹಳ್ಳ ಗ್ರಾಮದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ರೈತರ ಆಹೋರಾತ್ರಿ ಧರಣಿ ಪ್ರತಿಭಟನೆ 79 ದಿನಗಳನ್ನು ಪೂರೈಸಿ 80 ನೇ ದಿನ. ಬುಧವಾರಕ್ಕೆ ಕಾಲಿಟ್ಟಿದೆ.


ದಿನಾಂಕ : 27-10-2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು , ಮಕ್ಕಳು,ಅಹೋರಾತ್ರಿ ಧರಣಿ ನಡೆಸುತ್ತಿದ್ದು 79 ದಿನ ಕಳೆದರೂ ಈ ಭಾಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶಾಸಕರು, ಸಂಸದರು ಜಿಲ್ಲಾಡಳಿತ ಮತ್ತು ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿ ಧಿಕ್ಕಾರ ಕೂಗುತ್ತಾ ದಂಟಳ್ಳಿ ಏತ ನೀರಾವರಿ ಯೋಜನೆಗೆ ಡಿ.ಪಿ.ಆರ್ ಮಾಡಿ ಗುದ್ದಲಿ ಪೂಜೆ ಆಗುವ ತನಕ ಅಹೋ ರಾತ್ರಿ ಧರಣಿ ಕೈ ಬಿಡುವುದಿಲ್ಲ ಎಂದು ಧರಣಿ ಮುಂದುವರಿಸಿದರು.
ಮಾಜಿ ಯೋಧರಾದ ಮರಿಯಾ ಜೋಸೆಫ್ ಮಾತನಾಡುತ್ತಾ ಅಹೋರಾತ್ರಿ ಧರಣಿಯ ಮೊದಲನೇ ದಿನ ಬಂದ ಶಾಸಕರು ಸಂಕ್ರಾಂತಿ ಒಳಗೆ ಡಿ.ಪಿ.ಆರ್ ಮಾಡಿಕೊಡುವುದಾಗಿ ಹೇಳಿದ್ದರು. ನಂತರದ ದಿನಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ಸಂಸದರು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಪೆÇೀಲೀಸ್ ಗೆ ದೂರು ನೀಡಿದ ನಂತರ ಬಂದ ಜಿಲ್ಲಾಧಿಕಾರಿಗಳು ಸಂಕ್ರಾಂತಿ ಹಬ್ಬದ ಒಳಗೆ ಡಿ.ಪಿ.ಆರ್ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದ್ದರು.


ಆದರೆ ಭರವಸೆ ಸುಳ್ಳಾಯಿತು ಶಾಸಕರು ನಾನು ಹೇಳಿದ ದಿನದೊಳಗೆ ಡಿ.ಪಿ.ಆರ್ ಮಾಡಿಸಲು ಆಗದಿದ್ದಲ್ಲಿ ನಾನು ಕೂಡ ನಿಮ್ಮ ಜೊತೆ ಅಹೋರಾತ್ರಿ ಧರಣಿಯಲ್ಲಿ ಕೂರುವುದಾಗಿ ಹೇಳಿದ್ದರು ಆದ್ದರಿಂದ ಮಾತಿಗೆ ತಪ್ಪದೆ ಶಾಸಕರು ರೈತರ ಬೆಂಬಲಕ್ಕೆ ಧರಣಿ ಕೂರಬೇಕು ಮತ್ತು ಮುಂದೆ ನಡೆಯುವ ಉಗ್ರ ಹೋರಾಟಗಳಿಗೆ ಸರ್ಕಾರವೇ ಹೊಣೆಯಾಗಲಿದೆ.
ರೈತರು ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ ಚಾಮರಾಜನಗರ ಕೇಂದ್ರ ಸ್ಥಾನಗಳಲ್ಲಿ ನಮಗಾಗುತ್ತಿರುವ ಅನ್ಯಾಯದ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ನಮಗೆ ಅಂತರ್ಜಲ ಅಭಿವೃದ್ಧಿಗಾಗಿ ಹಾಗೂ ಕುಡಿಯುವ ನೀರಿಗಾಗಿ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಯೋಜನೆ ಜಾರಿ ಮಾಡುವತನಕ ರೈತರು ಮಲೈ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗುತ್ತದೆ.


ಮಾದಪ್ಪನ ಭಕ್ತರು,ಪಾದಯಾತ್ರಿಗಳು, ಮಲೈ ಮಹದೇಶ್ವರ ಬೆಟ್ಟಕ್ಕೆ ಬರುವ ತಮ್ಮ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಿಕೊಳ್ಳುವಂತೆ ಕೋರಲಾಗುವುದು ಹಾಗೂ ಆರು ಜಿಲ್ಲೆಗಳಲ್ಲಿ ಕರಪತ್ರಗಳನ್ನು ಹಂಚಿ ನಾಗರೀಕರಿಗೆ ಮನವಿ ಮಾಡಿಕೊಂಡು ಅಹೋರಾತ್ರಿ ಧರಣಿಯನ್ನು ಅಹೋರಾತ್ರಿ ಧರಣಿ ರಸ್ತೆತಡೆ ಕಾರ್ಯಕ್ರಮವನ್ನಾಗಿ ಮಾರ್ಪಾಡು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆರ್ ಅರ್ಪುದರಾಜ್ , ಸೆಲ್ವ ರಾಜ್ ,ಜಂಬರ್ ಮಾದಯ್ಯ, ಸೂಸೈರಾಜ್, ಮಂಜುನಾಥ್, ಸವರಿ, ಫ್ರಾನ್ಸಿಸ್, ಮಾದೇವಪ್ಪ,, ಲೂರ್ದುಸ್ವಾಮಿ, ವಲ್ಲಬದಾಸ್ ಸೇರಿದಂತೆ ಇನ್ನಿತರರು ಇದ್ದರು.