
ಸಂಜೆವಾಣಿ ನ್ಯೂಸ್
ಮೈಸೂರು: ನ.06:– ಕಷ್ಟ ಭಂಜನ (ಕಷ್ಟನಾಶಕ) ಭೈರವ ಜನ್ಮಾಷ್ಟಮಿ ಪ್ರಯುಕ್ತ ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ನವೆಂಬರ್ 5 ರಿಂದ 12 ರವರೆಗೆ ಪುರಭವನದ ಆವರಣದಲ್ಲಿ ಕೃಷ್ಣಗಿರಿ ಪೀಠಾಧಿಪತಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ 1008 ಆಚಾರ್ಯ ಶ್ರೀ ವಸಂತ ವಿಜಯಾನಂದಗಿರಿಜೇ ಮಹಾರಾಜ್ ರವರ ಸನ್ನಿಧಿಯಲ್ಲಿ 8 ದಿನಗಳ ಕಷ್ಟ ಭಂಜನ ಭೈರವ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಲಿದೆ.
ಪ್ರತಿದಿನ ಬೆಳಗ್ಗೆ 10 ರಿಂದ ವಿಶೇಷ ಭೈರವ ಆರಾಧನೆ, ಮಧ್ಯಾಹ್ನ 3 ರಿಂದ ಕಷ್ಟಭಂಜನ ಮಹಾಯಜ್ಞ, ಸಂಜೆ 8 ರಿಂದ ಭೈರವ ಮಹಾಪುರಾಣ ಮಹಾಕಥ ಕಾರ್ಯಕ್ರಮಗಳು ನಡೆಯಲಿದೆ. ಬುಧವಾರ 5 ನವೆಂಬರ್ 2025 ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರು ಅರಮನೆಯ ಕೋಟೆ ಆಂಜನೇಯ ದೇವಸ್ಥಾನದಿಂದ ಪೂಜ್ಯ ವಸಂತವಿಜಯಾನಂದಗಿರಿಜೀ ಮಹಾರಾಜ್ ರವರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಪುರಭವನದ ಆವರಣಕ್ಕೆ ತಲುಪಿ, ನಂತರ ಮಹಾಯಜ್ಞ ಕಾರ್ಯಕ್ರಮವು ಪ್ರಾರಂಭವಾಗುವುದು
ಕಾಶಿಯಲ್ಲಿ ಮತ್ತು ಗಂಗಾ ನದಿಯ ತೀರದಲ್ಲಿ ಹಾಗು ಗುಹೆಗಳಲ್ಲಿ, ಶ್ರೀಕ್ಷೇತ್ರ ಕೃಷ್ಣಗಿರಿಯಲ್ಲಿ ಸುಮಾರು 30 ವರ್ಷಗಳಿಂದ ಅನೇಕ ಬಾರಿ ನಿರಂತರ ಮೌನ ಹಾಗು ಉಪವಾಸಗಳೊಂದಿಗೆ ಧ್ಯಾನಸಾಧನೆ ಯಲ್ಲಿ ತೊಡಗಿರುವ ಗುರೂಜಿ, ಮಂತ್ರ ಸಾಧನೆಗಳಲ್ಲಿ ವಿಶಾರದರಾದ ಪೂಜ್ಯಪಾದರು ವಿಶ್ವಾದ್ಯಂತ ಅನೇಕ ಸ್ಥಳಗಳಲ್ಲಿ ಸಾವಿರಾರು ಲಕ್ಷಾಂತರ ಜನರಿಗಾಗಿ ವಿಭಿನ್ನ ಪೂಜಾ, ಭಕ್ತಿ, ಯಜ್ಞ ಕಾರ್ಯಕ್ರಮಗಳುನ್ನು ಆಯೋಜಿಸಿ ಜನಗಳ ಉತ್ತಮ ಆರೋಗ್ಯಕ್ಕಾಗಿ ಹಾಗು ಐಶ್ವರ್ಯಕ್ಕಾಗಿ ಶಿಬಿರಗಳನ್ನು ಆಯೋಜಿಸಿರುತ್ತಾರೆ.
ಈ ಬಾರಿ ಪ್ರಪ್ರಥಮ ಬಾರಿಗೆ ಮೈಸೂರು ನಗರದಲ್ಲಿ ನವೆಂಬರ್ 5 ರಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಮೈಸೂರಿನ ಮಹಾಪ್ರಜೆಗಳು ಯಾವುದೇ ಜಾತಿ, ಪಂಥ ಭೇದಭಾವಗಳಿಲ್ಲದೆ ಭಾಗ ವಹಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಜೈನ ಸಮಾಜ ರಾಷ್ಟ್ರೀಯ ಮುಖಂಡರಾದ ಶ್ರೀ ಬಿ.ಎ.ಕೈಲಾಶಚಂದ್ ಜೈನ, ಭಾರತೀಯ ಜೈನ ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೀಪಕ್ ಬೊಹರಾ, ಆಡಿಟರ್ ಬಿ.ಕೆ.ಚಂದನ್ ಕುಮಾರ್ ಜೈನ, ಕೃಷ್ಣಗಿರಿ ಶಕ್ತಿಪೀಠದ ಕಾರ್ಯಕರ್ತ ಭರತ್ ಜೈನ, ಪ್ರಗತಿ ಪ್ರತಿಷ್ಠಾನದ ಅಧ್ಯಕ್ಷರಾದ ಅಜಯ್ ಕುಮಾರ್ ಜೈನ, ಅಭಿನವ್ ಜೈನ, ನಮನ್ ಜೈನ, ಕರ್ಮರಾಮ್ ಸೀರ್ವಿ, ಅಮರಾರಾಮ್ ಸೀರ್ವಿ, ಮಾಂಗಿಲಾಲ್ ಹಾಮಬಡ, ಸೀರ್ವಿ ಸ್ಪೋಟ್ರ್ಸ್ ಕ್ಲಬ್ ನ ಅಧ್ಯಕ್ಷರಾದ ಗೋಪಾರಾಮ್, ಪ್ರಕಾಶ್, ಧರ್ಮಿಚಂದ್ ಗೆಹಲೋತ್, ಕಲ್ಯಾಣರಾಮ್ ಮುಂತಾದವರು ಸೇವೆಯಲ್ಲಿ ತೊಡಗಿದ್ದಾರೆ.



























