ಸೇಡಂ, ಆ, 08: ಭಾರತದಾದ್ಯಂತ (2025ರ ಆಗಸ್ಟ್ 15, ರಂದು)79 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಸಡಗರದಿಂದ ಆಚರಿಸಲು ಸಿದ್ಧತೆಗೊಳ್ಳಲಾಗುತ್ತಿದ್ದು ತಾಲೂಕಿನಲ್ಲಿಯೂ ಸ್ವಾತಂತ್ರ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಣೆಗೆ ಸಿದ್ದರಾಗೋಣ ಎಂದು ತಹಸಿಲ್ದಾರ್ ಶ್ರೇಯಾಂಕ್ ಧನುಶ್ರೀ ಹೇಳಿದರು.
ಪಟ್ಟಣದ ತಾಲೂಕಾ ಆಡಳಿತ ಸೌಧದ ಕಾರ್ಯಾಲಯದಲ್ಲಿ 79ನೆಯ ಸ್ವತಂತ್ರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿರುವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದು ತಾಲೂಕಿನ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಯ ಮುಂದೆ ಸ್ವಾತಂತ್ರ ದಿನಾಚರಣೆ ಆಚರಿಸಿದ ನಂತರ ತಾಲೂಕ ಕ್ರೀಡಾಂಗಣಕ್ಕೆ ತಪ್ಪದೆ ಬರಬೇಕು ಒಂದು ವೇಳೆ ಅಧಿಕಾರಗಳು ತಪ್ಪಿದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿರುವುದನ್ನು ಕಂಡು ಇಲಾಖೆಯ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.ಈ ವೇಳೆಯಲ್ಲಿ ತಾಪಂ ಇಓ ಚನ್ನಪ್ಪ ರಾಯಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜುರಾತಿ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ, ಉಪ ತಹಶೀಲ್ದಾರ್ ಶರಣಗೌಡ ಪಾಟೀಲ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜೀವ ಪಾಟೀಲ್,ಪಶು ಆಸ್ಪತ್ರೆಯ ಸಹಾಯಕ ನಿರ್ದೆಶಕರಾದ ಡಾ. ಇಮ್ರಾನ್ ಮನಿಯಾರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವರಾಜ ಕೊಡಸಾ, ಎಪಿಎಂಸಿ ಸಿಬ್ಬಂದಿ ಅಶೋಕ ಪುಜಾರಿ, ತಾಪಂ ಅಧಿಕಾರಿಗಳಾದ ರವಿಕುಮಾರ್, ಅರಣ್ಯ ಇಲಾಖೆಯ ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಎ ಪಿ ಎಮ್ ಸಿ, ಸಿಡಿಪಿಒ, ಬಿಸಿಎಮ್, ಕೆ ಆರ್. ಐ ಡಿ, ಪಿಎಮ್ ,ಜೆ ವೈ ಎಸ್, ಸಣ್ಣ ನೀರಾವರಿ ಇಲಾಖೆ, ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ಸಭೆಗೆ ಗೈರು ಹಾಗಿರುವ ಅಧಿಕಾರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಶ್ರೇಯಾಂಕ್ ಧನುಶ್ರೀ ತಹಸಿಲ್ದಾರ್ ಸೇಡಂ






















