
ಗುರುಮಠಕಲ್:ಜ.೨೭: ವ್ಯಾಪಾರ ಮಾಡಲಿಕ್ಕಾಗಿ ಬಂದ ಬ್ರಿಟಿಷ್ ರು ನಮ್ಮ ಭಾರತದೇಶವನ್ನು ಆಳಿದರು, ಆದರೆ ನಮಗೆ ಸ್ವಾತಂತ್ರಸಿಗಬೇಕಾದರೆ ಸುಮ್ಮನೆ ದೊರೆತಿಲ್ಲ, ಅನೇಕ ದೇಶ ಭಕ್ತರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ ಸಿಕ್ಕಿದೆ ಎಂದು ಹೇಳಿದರು. ಸಾರ್ವಜನಿಕ ಧ್ವಜಾರೋಹಣ ಆಚರಣಾ ಸಮಿತಿವತಿಯಿಂದ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ ಜರುಗಿದ ೭೭ ನೇ ಗಣರಾಜ್ಯೋತ್ಸವದ ದಿನಾಚರಣೆ ಅಧ್ಯಕ್ಷ ವಹಿಸಿ ಮಾತನಾಡಿದ ಮತಕ್ಷೇತ್ರದ ಶಾಸಕರು ಶ್ರೀ ಶರಣಗೌಡ ಕಂದಕೂರ ರವರು ಮಾತನಾಡಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಸಾಹೇಬ ಅಂಬೇಡ್ಕರ ಅವರು ಬರೆದಿರುವ ಸಂವಿಧಾನವು ದೇಶದಲ್ಲಿ ಯುವ ಪೀಳಿಗೆಯ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಹಾಗೂ ಧ್ವನಿಇಲ್ಲದವರ, ಬಡವರ ಪಾಲಿಗೆ ಅತ್ಯಂತ ಮಹತ್ವ ಪೂರ್ಣವನ್ನು ಹೊಂದಿದೆ ಎಂದು ಅವರು ಹೇಳಿದರು. ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರರು ಚನ್ನಮಲ್ಲಪ್ಪ ಘಂಟಿ ಮಾತನಾಡಿ ಲಿಖಿತ ರೂಪದಲ್ಲಿರುವ ನಮ್ಮ ಸಂವಿಧಾನ ಪವಿತ್ರ ಗ್ರಂಥದಲ್ಲಿರುವ ರೂಪು ರೇಖೆಗಳನ್ನು ಪ್ರತಿಯೊಬ್ಬರು ಪಾಲಿಸುವದರೊಂದಿಗೆ ಕರ್ತವ್ಯ ಪಾಲನೆ ತಪ್ಪದೆ ಮಾಡಬೇಕು ಹಾಗೂ ವಂದೆ ಮಾತರಂ ೧೫೦ ವರ್ಷಗಳು ತುಂಬಿದ ದಿನವನ್ನು ನೆನಪಿಸಿ ಕೊಂಡರು. ಉಪನ್ಯಾಸ ನೀಡಿದ ಸ. ಬಾ. ಪ. ಪೂ. ಕಾಲೇಜು (ಪ್ರೌಢವಿಭಾಗ) ಗುರುಮಠಕಲ್ ಸಹ ಶಿಕ್ಷಕರು ಭೀಮಪ್ಪ ಮನ್ನೆ ಮಾತನಾಡಿ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೆ ಹಾಗೂ ತಮ್ಮ ಸರ್ವಸ್ವವನ್ನೆ ತ್ಯಾಗ ಮಾಡಿದ ವೀರಪುರುಷರ ವಿಚಾರ ದಾರೆಗಳನ್ನು ತಿಳಿಸುತ್ತ. ಸಂವಿಧಾನ ಮಹತ್ವವನ್ನು ತಿಳಿಸಿ ಹೇಳಿದರು. ಈ ವೇಳೆ ನಾನಾ ರಂಗಗಳಲ್ಲಿ ಸಾದನೆ ನೀಡಿರುವ ಸಾಧಕರಿಗೆ ಸನ್ಮಾನಿಸಿ ಗೌರವ ನೀಡಿದರು. ಪರಮ ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಖಾಸಮಠ ಗುರುಮಠಕಲ್ ದಿವ್ಯ ಸಾನಿಧ್ಯ ವಹಿಸಿದ್ದರು. ಗ್ರೇಟ್ -೨ ತಹಸೀಲ್ದಾರ್ ನರಸಿಂಹಸ್ವಾಮಿ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ್ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಆರಕ್ಷಕ ನಿರೀಕ್ಷಕರು ವೀರಣ್ಣ ಎಸ್, ದೊಡ್ಡಮನಿ, ಮುಖಂಡರಾದ ಪಾಪಣ್ಣ ಮನ್ನೆ, ಸಂತೋಷ ನಿರೇಟಿ, ಬಸಣ್ಣ ದೇವರಹಳ್ಳಿ, ರವಿಗವಿನೋಳ, ಬಾಲಪ್ಪ ದಾಸರಿ,ಶಿಕ್ಷಣ ಸಂಯೋಜಕರು ಪ್ರಕಾಶ್ ವೀರಶಾಸ್ತ್ರಿ, ದ?ಹಿಕ ಶಿಕ್ಷಕರು ಎಸ್ ಪಿ ಮಹೇಶ್, ಕಂದಾಯ ನಿರೀಕ್ಷಕರು ದೊಡ್ಡ ಬಸವರಾಜ,ಹಾಗೂ ಸಮಸ್ತ ಗುರುಮಠಕಲ್ ತಾಲೂಕಿನ ಜನಪ್ರತಿನಿದಿನಗಳು, ಸಂಘಸAಸ್ಥೆಗಳ ಪ್ರತಿನಿಧಿಗಳು, ನಾಗರಿಕರು, ವಿವಿಧ ಇಲಾಖೆಯ ಅಧಿಕಾರಿ ಹಾಗೂ ನೌಕರ ವೃಂದದವರು, ವಿವಿಧ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸರಕಾರಿ ಪ್ರಾಥಮಿಕ ಶಾಲೆ ಕಟಲಗೇರ ಶಾಲಮಕ್ಕಳಿಂದ ಪ್ರಾಥನೆಗೀತೆ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರು ನಾರಾಯಣರೆಡ್ಡಿ ಪೋಲಿಸ್ ಪಾಟೀಲ್ ನಿರೂಪಣೆ ನೀಡಿದರು, ಶಿಕ್ಷಣ ಸಂಯೋಜಕರು ರವೀಂದ್ರ ಸರ್ವರನ್ನು ಸ್ವಾಗತಿಸಿದರು.
























