
ಕಾಳಗಿ : ನ.2:ಇಲ್ಲಿಯ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಪಂಕಜಾ ಎ ಅವರು ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆಗೈದು, ಕನ್ನಡಮ್ಮಳಿಗೆ ಭಕ್ತಿಭಾವದಿಂದ ನಮಿಸಿ,
1956 ನವೆಂಬರ್ 1 ರಂದು ಕನ್ನಡ ಭಾಷೆ ಪ್ರದೇಶಗಳನ್ನು ಏಕರೂಪಗೊಳಿಸುವ ಮೂಲಕ ಮೈಸೂರು ರಾಜ್ಯ ರಚನೆ ಹೊಂದಿದ್ದು, ನಂತರ 1973 ರಲ್ಲಿ “ಕರ್ನಾಟಕ” ಎಂಬ ಹೆಸರಿನಲ್ಲಿ ರಾಜ್ಯ ಪರಿವರ್ತನೆ ಕಂಡಿರುವ ಸವಿ ನೆನಪಿಗಾಗಿ ಈ ಕನ್ನಡದ ಹಬ್ಬ ಆಚರಿಸುತ್ತಿರುವುದರಿಂದ
ಈ ದಿನದ ಆಚರಣೆ ಭಾಷೆ-ಸಂಸ್ಕøತಿ, ನೆಲೆಮೇಲೆ ಕನ್ನಡಿಗರ ಏಕತೆಯನ್ನು ಪ್ರತಿನಿಧಿಸುತ್ತದೆ ಎಂದರು.
ಪಪಂ.ಕೌನ್ಸಿಲರ್ ಗಳು, ಕನ್ನಡಪರ ಸಂಘಟನಾಕಾರರು, ಪಟ್ಟಣದ ಪ್ರಮುಖ ಗಣ್ಯರು, ಶಾಲಾ ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಹಸೀಲ್ದಾರ, ತಾಪಂ ಕಛೇರಿ, ಶಾಲಾ-ಕಾಲೇಜುಗಳು ಸೇರಿ ಸರಕಾರಿ ವಿವಿಧ ಇಲಾಖೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ನಿರ್ಲಕ್ಷ್ಯ ನೆಲಕ್ಕೂರುಳಿದ ರಾಷ್ಟ್ರಧ್ವಜ:
ಇಲ್ಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸಿ, ಮನೆಗೆ ತೆರಳಿದ ಶಿಕ್ಷರು, ಧ್ವಜ ಅವರೋಹಣ ಜವಾಬ್ದಾರಿ ಯಾರಿಗೆ ಹೊರೆಯಿಸಿದರೋ ಏನೋ ಗೊತ್ತಿಲ್ಲ.
ಶಾಲಾ ಮೈದಾನದಲ್ಲಿ ಆಟವಾಡಲು ಬಂದಿರುವ ಮಕ್ಕಳ ಕಿಟಲೆಯಿಂದ ರಾಷ್ಟ್ರಧ್ವಜ ಕೆಳಗೆ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಸುದ್ದಿ ತಿಳಿದ ಕನ್ನಡಪರ ಸಂಘಟಕರು ಸ್ಥಳಕ್ಕೆ ಆಗಮಿಸಿ,
ಸಂಬಂದಿಸಿರುವ ಅಧಿಕಾರಿಗಳಿಗೆ ವಿಷಯ ತಿಳಿಸಿದರು.
ತಕ್ಷಣ ಆಗಮಿಸಿರುವ ಶಾಲಾ ಸಿಬ್ಬಂದಿಗಳು, ಕನ್ನಡಪರ ಸಂಘಟಕರೊಂದಿಗೆ ಸೇರಿಕೊಂಡು ಮತ್ತೆ ಧ್ಜಜಾರೋಹಣ ಮಾಡಿದರು.
ಇಲ್ಲಿಯ ಸರಕಾರಿ ಪ್ರೌಢಶಾಲೆಯ ಸಿಬ್ಬಂದಿಗಳ ಬೆಜಾವಾಬ್ದಾರಿಯಿಂದ ನೆಲಕ್ಕೂರುಳಿದ ರಾಷ್ಟ್ರಧ್ವಜ ಬೇಜವಾಬ್ದಾರಿ ನಡೆತೆಗೆ ಯುವ ಕರ್ನಾಟಕ ರಕ್ಷಣಾ ಸೇನೆ ಖಂಡಿಸಿದ್ದು, ಬೇಜವಾಬ್ದಾರಿ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು.
ಪರಮೇಶ್ವರ ಕಟ್ಟಿಮನಿ
ಯುವ ಕರ್ನಾಟಕ ರಕ್ಷಣಾ ಸೇನೆ ಗೌರವಾಧ್ಯಕ್ಷ























