ನಮ್ಮ ಕರುನಾಡ ರಕ್ಷಣಾ ವೇದಿಕೆ ವತಿಯಿಂದ ಎಪ್ಪತ್ತನೇ ಕರ್ನಾಟಕ ರಾಜ್ಯೋತ್ಸವ

ಯಾದಗಿರಿ :ನ.೨೪: ೭೦ ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಡಿಸೆಂಬರ್ ತಿಂಗಳ ೦೬ ನೇ ದಿನಾಂಕದAದು ಯಾದಗಿರಿಯಲ್ಲಿ ನಮ್ಮ ಕರುನಾಡ ರಕ್ಷಣಾ ವೇದಿಕೆ ವತಿಯಿಂದ
ಸ್ವಾಭಿಮಾನಿ ಕನ್ನಡಿಗರ ಗಡಿನಾಡ ಹಬ್ಬ ಹಾಗೂ ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ ಎಂದು ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರವಿ. ಕೆ ಮುದ್ನಾಳ ಹೇಳಿದರು.
ಈ ಕುರಿತು ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಾದಗಿರಿ ನಗರದ ಸ್ಟೇಷನ್ ರಸ್ತೆಯ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ೭೦ ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿ ಖಾಸಾ ಮಠ ಗುರುಮಿಠಕಲ್ , ಶಹಾಪುರ ತಾಲೂಕಿನ ಮಹಲ್ ರೋಜಾ ಶ್ರೀಗಳಾದ
ಮಲ್ಲಿಕಾರ್ಜುನ್ ಮುತ್ಯಾ ವಹಿಸಲಿದ್ದು,
ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ಕೈಗಾರಿಕ,ಸಾರ್ವಜನಿಕ ಉದ್ದಿಮೆಗಳ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ
ಶರಣಬಸಪ್ಪ ಗೌಡ ದರ್ಶನಾಪೂರ , ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ, ಬಿಜೆಪಿ ಹಿರಿಯ ಮುಖಂಡ ರಾಚನ ಗೌಡ ಮುದ್ನಾಳ, ನಮ್ಮ ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ. ಎ . ಶಂಕರೇಗೌಡ್ರು ನೆರವೇರಿಸುವರು.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರುತ್ವಿಕ್ ಶಂಕರ್ ಕಾರ್ಯಕ್ರಮದ ಜ್ಯೋತಿ ಬೆಳಗುವರು, ನಗರ ಸಭೆ ಅಧ್ಯಕ್ಷೆ ಲಲಿತಾ ಅನಪುರ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ, ಕಲಾ ತಂಡಗಳಿಗೆ ಚಾಲನೆ ನೀಡಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ
ರವಿ. ಕೆ. ಮುದ್ನಾಳ ವಹಿಸುವರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನನಿತರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ವಿವಿಧ ಪಕ್ಷ ಸಂಘಟನೆಗಳ ಪ್ರಮುಖ ಮುಖಂಡರು ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ,
ಅಧಿಕಾರಿಗಳು, ಸೇರಿದಂತೆ ಇನ್ನಿತರ ಪ್ರಮುಖ ಮುಖಂಡರು ಭಾಗವಹಿಸಲಿದ್ದು, ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ರತ್ನ ಪ್ರಶಸ್ತಿ ಗೌರವ ನೀಡಲಿದೆ.
ಉತ್ತರ ಕರ್ನಾಟಕದ ಹೆಸರಾಂತ ಗಾಯಕರು, ಹಾಸ್ಯ ಕಲಾವಿದರಿಂದ
ಜವಾರಿ ಜಾನಪದ ಹಾಗೂ ಜೂನಿಯರ್ ಕಲಾವಿದರಿಂದ ಹಾಸ್ಯಭರಿತ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ ಕಾರ್ಯಕ್ರಮದ ನಿರೂಪಣೆ ಮಲ್ಲಯ್ಯ ಸ್ವಾಮಿ ಇಟಗಿ,ವಂದನಾರ್ಪಣೆಯನ್ನು ರಾಜೇಶ್ ಪ್ಯಾಟೆ ನೆರವೇರಿಸುವರು ಕಾರ್ಯಕ್ರಮಕ್ಕೆ ಕನ್ನಡಭೀಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಈ ವೇಳೆಯಲ್ಲಿ ಜಿಲ್ಲಾ ಉಪಾಧ್ಯಕ್ಷ
ಶಂಕರ್ ಗೌಡ ಯಲಸತ್ತಿ,
ಪ್ರಧಾನ ಕಾರ್ಯದರ್ಶಿ ತಿರುಪತಿ ಚವ್ಹಾಣ,
ಕಾರ್ಯಾಧ್ಯಕ್ಷ ವಿಶ್ವನಾಥ ಎಸ್ ತಂಗಡಗಿ, ಗುರುಮಠಕಲ್ ತಾಲೂಕ ಅಧ್ಯಕ್ಷ ಅಶೋಕ್ ರೆಡ್ಡಿ ವಂಕಸAಬ್ರ, ಯಾದಗಿರಿ ತಾಲೂಕ ಅಧ್ಯಕ್ಷ ಸಿದ್ದು ಸಾಹುಕಾರ, ಜಿಲ್ಲಾ ಸಂಚಾಲಕ ಬನ್ನಪ್ಪ ಪೂಜಾರಿ, ತಿಪ್ಪಯ್ಯ ವಂಕಸAಬ್ರ, ಮಂಜುನಾಥ ಗೌಡ ಮಾಧ್ವರ, ಭರತ ಮಾಧ್ವಾರ , ವಸಂತ ಯಲಸತ್ತಿ, ರಫೀಕ್ ತುರುಕನದೊಡ್ಡಿ , ಅಂಬರೀಶ್ ಅಲಿಪುರ, ಇದ್ದರು.