ಎಸ್.ಎಸ್.ವಿದ್ಯಾ ಸಂಸ್ಥೆಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ

ತಾಳಿಕೋಟೆ:ನ.೩: ಪಟ್ಟಣದ ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ವಿಜೃಂಬಣೆಯಿAದ ಆಚರಿಸಲಾಯಿತು.
ಕನ್ನಡಾಂಬೆಯ ಭಾವ ಚಿತ್ರಕ್ಕೆ ಎಸ್.ಎಸ್.ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು ಕಿರಣಗೌಡ ಪಾಟೀಲ ಅವರು ಪೂಜೆಸಲ್ಲಿಸಿದರು.
ಸಂಗಮೇಶ್ವರ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಎಸ್.ವಿ.ಜಾಮಗೊಂಡಿಯವರು ಕನ್ನಡ ನಾಡು, ನುಡಿ ಮತ್ತು ಜಲದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ ಕಟ್ಟಿ, ಬಿಪಿಇಡಿ ಕಾಲೇಜಿನ ಪ್ರಚಾರ್ಯ ಶಿವಕುಮಾರ ನಾಯಕ, ಪ ಪೂ ಕಾಲೇಜಿನ ಎಸ್.ಬಿ.ಮಂಗ್ಯಾಳ, ಪದವಿ ಮಹಾ ವಿದ್ಯಾಲಯದ ಶ್ರೀಮತಿ ಗಾಯತ್ರಿ ಪತಾರ, ಆಂಗ್ಲ ಮಾದ್ಯಮ ಶಾಲೆಯ ಗುರುಮಾತೆ ಶ್ರೀಮತಿ ಮೀರಾ ದೇಶಪಾಂಡೆ, ಡಿ.ಎಚ್.ಐ. ವಿಭಾಗದ ಜೆ.ಸಿ.ಪಾಟೀಲ, ಐ.ಟಿ.ಐ.ವಿಭಾಗದ ವಿರೇಶ ಕನಕ, ಎಸ್.ಎಸ್.ವಿದ್ಯಾಸಂಸ್ಥೆಯ ಸಮಸ್ತ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿ ವಂದಿಸಿದರು.