ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವ ಆಚರಣೆ

ತಾಳಿಕೋಟೆ:ನ.೩: ಪಟ್ಟಣದ ಮಿಣಜಗಿ ಕ್ರಾಸ್‌ನಲ್ಲಿರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ೭೦ ನೇ ಕನ್ನಡ ರಾಜ್ಯೋತ್ಸವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್.ಎಂ. ಸಜ್ಜನ್ ಅವರು ಮಾತನಾಡಿ ಕನ್ನಡ ನಾಡು-ನುಡಿ ಜಲ ಹಾಗೂ ಕನ್ನಡದ ವೈಭವದ ಬಗ್ಗೆ ಹಾಗೂ ದಿವ್ಯ ಪರಂಪರೆಯ ಬಗ್ಗೆ ನಮ್ಮ ಸಂಸ್ಕöÈತಿಯ ಹೆಮ್ಮೆ ಪಡುವಂತಹದ್ದಾಗಿದೆ ಕನ್ನಡ ಭಾಷಾಭಿಮಾನ ಎಂಬುದು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅನ್ಯ ಭಾಷೆಗಳು ಕೇವಲ ಕಲಿಯಲಿಕ್ಕೆ ಮಾತ್ರವಿದ್ದು ಕನ್ನಡ ಭಾಷೆ ನಮ್ಮ ಜೀವನಕ್ಕೆ ರೂಪವನ್ನು ಕೊಡುತ್ತದೆ ಕನ್ನಡ ಭಾಷೆ ಹಾಗೂ ಈ ಒಂದು ಸಂಸ್ಕöÈತಿಯನ್ನು ಯಥೇಚ್ಛವಾಗಿ ಅಳವಡಿಸಿಕೊಂಡು ಭಾಷಾಭಿಮಾನ ಹೆಚ್ಚಿಸಬೇಕೆಂದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ್ ಸಜ್ಜನ್ ಅವರು ಮಾತನಾಡಿ ಸ್ವತಂತ್ರ ನಂತರದ ಭಾರತದಲ್ಲಿ ಕರ್ನಾಟಕ ಹಲವು ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದನ್ನು ಅದನ್ನು ಒಗ್ಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಾಣ ಮಾಡುವಲ್ಲಿ ಕನ್ನಡ ನಾಡಿನ ಹೋರಾಟಗಾರರ ಪಾತ್ರ ತ್ಯಾಗ ಬಲಿದಾನಗಳನ್ನು ಸ್ಮರಿಸುವಂತಹದ್ದಾಗಿದೆ ಕನ್ನಡ ನಾಡಿನ ವೈಭವ ಕುರಿತು ಏಷ್ಟು ಹೊಗಳಿದರೂ ಸಾಲದು ಕರ್ನಾಟಕದ ಇತಿಹಾಸವನ್ನು ಓದಿ ಅರಿತು ಕೊಳ್ಳಬೇಕಾಗಿದೆ ಎಂದರು.
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಶ್ರೀಮತಿ ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣಧೋಳಿ, ಪಿಯು ಕಾಲೇಜ್ ಪ್ರಾಚಾರ್ಯ ಬಿ.ಎಸ್ ಮಾಲಿಪಾಟೀಲ್ ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಶ್ರೀಮತಿ ಜಿ.ಎನ್.ಪಾಟೀಲ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಲೇಶ ಸರ್ ನಿರೂಪಿಸಿದರು.