
ಸಂಜೆವಾಣಿ ನ್ಯೂಸ್
ಚಾಮರಾಜನಗರ. ನ.03-ಚಾಮರಾಜನಗರ ಎಡಬೆಟ್ಟದ ಸಮೀಪದಲ್ಲಿ ಇರುವ ಶಿವು ಜನ್ನಸ್ನೇಹಿ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಟ್ರಸ್ಟ್ ಅಧ್ಯಕ್ಷರಾದ ಶಿವು ಆಂಬುಲೆನ್ಸ್ ಅವರು ಕನ್ನಡ ಭಾವುಟವನ್ನು ಹಾರಿಸುವ ಮೂಲಕ ಉದ್ಘಾಟನೆ ಮಾಡಿ ಕನ್ನಡ ನಮ್ಮ ನಾಡಿನ ಹೆಮ್ಮೆಯ ಭಾಷೆ ಈ ಭಾಷೆಯಿಂದ ಹಲವಾರು ಭಾಷೆಗಳಿಗೆ ತಾಯಿಯಾಗಿದೆ. ಚಾಮರಾಜನಗರ ಜಿಲ್ಲೆಯು ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿ ಇದೆ. ನೆರೆ ರಾಜ್ಯದವರನ್ನು ಪ್ರೀತಿಯಿಂದ ಕಾಣುವ ಜನರು ಕನ್ನಡಿಗರು. ಇಂತಹ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸಗಾಪುರ ಬಿ. ಸ್ವಾಮಿ, ಮುತ್ತಿಗೆ ಪ್ರಕಾಶ್, ಬಸವನಪುರ ಮಂಜುನಾಥ್, ಶಿವು ಜನ್ನಸ್ನೇಹಿ ಟ್ರಸ್ಟ್‍ನ ಸ್ನೇಹಿತರು ಹಾಜರಿದ್ದರು.

































