
ನವದೆಹಲಿ,ಫೆ.೧- ಬೆಂಗಳೂರು- ಚೆನ್ನೈ, ಬೆಂಗಳೂರು- ಹೈದರಾಬಾದ್ ಸೇರಿದಂತೆ ದೇಶದಲ್ಲಿ ೭ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಪ್ರಸ್ತಾವಿತ ಮಾರ್ಗಗಳಲ್ಲಿ ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಸೇರಿವೆ.
೨೦೨೫-೨೭ ನೇ ಸಾಲಿನ ಮುಂಗಡ ಪತ್ರ ಮಂಡಿಸಿದ ಅವರು ೭ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಿದೆ. ಇದರಿಂದ ದೇಶದಲ್ಲಿ ಸಂಕರ್ಪ ಸುಧಾರಣೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ನಗರಗಳನ್ನು ಸಂಪರ್ಕಿಸಲು ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಸ್ತಾಪಿಸಿದ್ದು
ಪ್ರಮುಖ ನಗರ ಮತ್ತು ಆರ್ಥಿಕ ಕೇಂದ್ರಗಳಲ್ಲಿ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯೊಂದಿಗೆ ಪರಿಸರ ಸ್ನೇಹಿ ಪ್ರಯಾಣಿಕ ಸಾರಿಗೆಗೆ ಪ್ರಮುಖ ಒತ್ತು ನೀಡಲಾಗಿದೆ ಎಂದಿದ್ದಾರೆ.
ಈ ಕಾರಿಡಾರ್‌ಗಳು ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತವೆ, ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತವೆ, ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ ಎಂದಿದ್ದಾರೆ
ಒಟ್ಟಾಗಿ, ಅವು ಭಾರತದ ಹಣಕಾಸು ಕೇಂದ್ರಗಳು, ತಂತ್ರಜ್ಞಾನ ಕೇಂದ್ರಗಳು, ಉತ್ಪಾದನಾ ಸಮೂಹಗಳು ಮತ್ತು ಉದಯೋನ್ಮುಖ ನಗರಗಳನ್ನು ವೇಗವಾದ ಮತ್ತು ಸ್ವಚ್ಛ ಚಲನಶೀಲತೆಯೊಂದಿಗೆ ಸಂಪರ್ಕಿಸುತ್ತವೆ.
“ಪರಿಸರ ಸುಸ್ಥಿರ ಪ್ರಯಾಣಿಕ ವ್ಯವಸ್ಥೆಗಳನ್ನು ಉತ್ತೇಜಿಸುವ ಸಲುವಾಗಿ, ನಾವು ನಗರಗಳ ನಡುವೆ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಬೆಳವಣಿಗೆಯ ಸಂಪರ್ಕಗಳಾಗಿ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿವೆ ಎಂದಿದ್ದಾರೆ.
ಮುಂಬೈ ನಿಂದ ಪುಣೆ, ಪುಣೆ ನಿಂದ ಹೈದರಾಬಾದ್, ಹೈದರಾಬಾದ್ ನಿಂದ ಬೆಂಗಳೂರು, ಹೈದರಾಬಾದ್ ನಿಂದ ಚೆನ್ನೈ, ಚೆನ್ನೈ ನಿಂದ ಬೆಂಗಳೂರು. ದೆಹಲಿಯಿಂದ ವಾರಣಾಸಿ, ವಾರಣಾಸಿ ನಿಂದ ಸಿಲಿಗುರಿ” ಎಂದು ಹೇಳಿದ್ದಾರೆ.




























