ಕಲಬುರಗಿ,ಜೂ.10-ನಗರದ ಸಬ್ ಅರ್ಬನ್ ಪೆÇಲೀಸ್ ಠಾಣೆ ಹಾಗೂ ವಿಶ್ವವಿದ್ಯಾಲಯ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಜನ ಆರೋಪಿಗಳನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಂಧಿಸಿರುವ ಪೊಲೀಸರು ಬೀದರ್ ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರಿಸಿದ್ದಾರೆ. 5 ಜನ ಆರೋಪಿತರ ವಿರುದ್ಧ 3 ಪ್ರತ್ಯೇಕ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, 2 ಜನರ ವಿರುದ್ದ ಪಿಎಆರ್ ಪ್ರಕರಣ ದಾಖಲಿಸಿ ಮುಂಜಾಗೃತ ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ.
ನಗರದ ಬುಲಂದ್ ಪರ್ವೇಜ್ ಕಾಲೋನಿಯ ಮಿರ್ಜಾ ಸಲ್ಮಾನ್ ಬೇಗ್ ತಂದೆ ಮಿರ್ಜಾ ಮಜರ್ ಬೇಗ್, ಮಿರ್ಜಾ ಸರ್ಫರಾಜನನ್ನು ಬಂಧಿಸಿ 4 ತಲ್ವಾರ್ ಜಪ್ತಿ ಮಾಡಿದ್ದಾರೆ. ಮಿರ್ಜಾ ಸಲ್ಮಾನ್ ಬೇಗ್ ರೌಡಿಶೀಟರ್ ಆಗಿದ್ದು, ಹಮಾಲವಾಡಿಯ ಖಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಸುಲಿಗೆ, ದರೋಡೆ ಮಾಡುವ ಪ್ರವೃತ್ತಿ ಪ್ರವೃತ್ತಿವುಳ್ಳವನಾಗಿದ್ದು, ರೌಡಿಶೀಟರ್ ಮಿರ್ಜಾ ಸಲ್ಮಾನ್ ಬೇಗ್ ಮತ್ತು ಆತನ ಸಹೋದರರು ಮಾರಕಾಸ್ತ್ರ ಬಳಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ 3 ಜನ ಆರೋಪಿಗಳ ವಿರುದ್ಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಭಾರತೀಯ ಆಯುಧ ಕಾಯ್ದೆ 1959ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇತ್ತಿಹಾದ ಕಾಲೋನಿಯ ಹತ್ತಿರದ ಮಿರ್ಜಾ ಕೌಸರ್ ಬೇಗ್ ತಂದೆ ಮಿರ್ಜಾ ತೌಫಿಕ್ ಬೇಗ್ (44) ಎಂಬಾತನಿಂದ 1.5 ಫೀಟ್ ಉದ್ದದ ಡ್ರ್ಯಾಗನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ರೌಡಿಶೀಟರ್ ಆಗಿದ್ದು, ಹಮಾಲವಾಡಿಯ ಖಲೀಲ್ ಕೊಲೆಯ ಆರೋಪಿಯಾಗಿದ್ದಾನೆ. ಈತ ಮಾರಕಾಸ್ತ್ರ ಬಳಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಆರೋಪಿ ವಿರುದ್ಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಹಾಗರಗಾ ಕ್ರಾಸ್‍ನ ಸರ್ವತ್ ಅಲಿ ತಂದೆ ಕಾಸಿಂ ಅಲಿ ತರನಳ್ಳಿ (39) ಎಂಬಾತನನ್ನು ಬಂಧಿಸಿ ಆತನಿಂದ ಒಂದು ಹರಿತವಾದ ಡ್ರ್ಯಾಗನ್‍ನನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯು ರೌಡಿಶೀಟರ್ ಆಗಿದ್ದು, ಮಾರಕಾಸ್ತ್ರ ಬಳಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಆತನ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೂರು ಪ್ರಕರಣಗಳಲ್ಲಿನ 5 ಜನ ಆರೋಪಿಗಳು ರೌಡಿಶೀಟರ್‍ಗಳಾಗಿದ್ದು, ಖಲೀಲ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಕೊಲೆ, ಸುಲಿಗೆ, ದರೋಡೆ ಮಾಡುವ ಪ್ರವೃತ್ತಿಯುಳ್ಳುವರಾಗಿರುವುದರಿಂದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ತಿಳಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಗರದ ಹಬೀ ಫಂಕ್ಷನ್ ಹಾಲ್ ಹತ್ತಿರವಿರುವ ಎಟಿಎಂ ಹತ್ತಿರ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬುಲಂದ ಪರ್ವೇಜ್ ಕಾಲೋನಿಯ ಮಿರ್ಜಾಕೈಫ್ ಬೇಗ್ ತಂದೆ ಮಿರ್ಜಾ ಮಜರ್ ಬೇಗ್ (20) ಮತ್ತು ಮಾಲಗತ್ತಿ ಕ್ರಾಸ್ ಮಿಜುಗುರಿ ನಗರದ ಮೊಹ್ಮದ್ ಅಹ್ಮದ್ ತಂದೆ ಮೊಹ್ಮದ್ ಜನಿಮಿಯಾ (33) ಎಂಬುವವರನ್ನು ಬಂಧಿಸಲಾಗಿದೆ. ಇವರು ಸಂಜ್ಞೆಯ ಮತ್ತು ಸ್ವತ್ತಿನ ಅಪರಾಧಗಳು ಮಾಡುವ ಸಾಧ್ಯತೆ ಇರುವುದರಿಂದ ಇಬ್ಬರು ಆರೋಪಿಗಳ ವಿರುದ್ಧ ಬಿಎನ್‍ಎಸ್‍ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.