
ಕಲಬುರಗಿ,ಜ.1: ಅಕ್ಕಮಹಾದೇವಿ ಮಹಿಳಾ ವಿದ್ಯಾವರ್ಧಕ ಸಂಘ ವೃದ್ಧಾಶ್ರಮದಲ್ಲಿ ಕಾಯಕಯೋಗಿ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೇದರನಾಥ ಅವರು ತಮ್ಮ ಸಂಸ್ಥೆಯ 6 ನೆಯ ವಾರ್ಷಿಕೋತ್ಸವವನ್ನು ವೃದ್ಧಾಶ್ರಮದಲ್ಲಿ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ದಿನಾ ಬೆಳಿಗ್ಗೆ 5:30 ರಿಂದ 7 ಗಂಟೆವರೆಗೂ ಸುಮಾರು ವರ್ಷಗಳಿಂದ ಅನಾಥರು ನಿರ್ಗತಿಕರಿಗೆ ಊಟ ನೀಡುವುದು ಇವರ ಕಾಯಕವಾಗಿದೆ. ಆರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅನಾಥಾಶ್ರಮದ ಒಂದು ದಿನದ ಊಟದ ವ್ಯವಸ್ಥೆ ಹೆಣ್ಣು ಮಕ್ಕಳಿಗೆ ಸೀರೆಗಳು ಹಾಗೂ ಪುರುಷರಿಗೆ ಉಡುಪುಗಳನ್ನು ಹಾಗೂ ಹಣ್ಣುಗಳನ್ನು ನೀಡಿ ಅವರನ್ನು ಸತ್ಕರಿಸಿದರು . ಇನ್ನು ನಾಲ್ಕು ಅನಾಥಾಶ್ರಮಗಳಲ್ಲಿಯೂ ಕೂಡ ಅವರ ಸಂಸ್ಥೆಯ ಮೂಲಕ ಸೇವೆ ಮಾಡಿದರು. ಹಿರಿಯ ಜೀವಿಗಳು ವೃದ್ಧಾಶ್ರಮದಲ್ಲಿ ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದಾಗ ಅವರು ಪಟ್ಟ ಕಷ್ಟ ಮಕ್ಕಳಗಾಗಿ ಅವರು ಮಾಡಿದಂತಹ ಜೀವಮಾನದ ಶ್ರಮ ಎಲ್ಲವನ್ನು ನೆನೆದು ತುಂಬಾ ಭಾವುಕರಾಗಿ ತಮ್ಮ ನೋವು ಗಳನ್ನು ಹೇಳಿಕೊಳ್ಳುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರಮೇಶ್ ಮೇಳಕುಂದ, ರಾಚಪ್ಪ ಜಂಬಗಿ , ನಂದಿನಿ ಸುರೇಂದ್ರ ಸನಬಾಳ ,ಜಿ ಸತೀಶ್, ಜಗನ್ನಾಥ್ ನಾಗುರ್, ಹರೀಶ್ ಹಂಗರಗಿ, ಸಿದ್ದು ರಾಥೋಡ್, ಕನಸು ಸೇವಾ ಸಂಸ್ಥೆಯ ಅಧ್ಯಕ್ಷ ಸಂತೋಷ್ ಹಾಗೂ ಹುಸೇನಿ ಪಾಳಾ ಭಾಗಿಯಾಗಿದ್ದರು.























