ಜಿಮ್ಸ್ ಆಸ್ಪತ್ರೆಯಲ್ಲಿ 69ನೇ ಮಹಾಪರಿನಿರ್ವಾಣ ದಿನಾಚರಣೆ

ಕಲಬುರಗಿ,ಡಿ.7-ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನವನ್ನು ನಗರದ ಜಿಮ್ಸ್ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರವರ ಕೊಠಡಿಯಲ್ಲಿ ಆಚರಿಸಲಾಯಿತು. ಡಾ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶ್ರದ್ಧಾಭಕ್ತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.
ಸ್ಥಳೀಯ ವೈದ್ಯಧೀಕಾರಿಗಾಳದ ಡಾ.ನಾಗರಾಜ ಪಾಟೀಲ್, ಡಾ.ಓಂ ಪ್ರಕಾಶ್ ಅಂಬುರೆ, ಡಾ.ವಿನೋದ ಕುಮಾರ, ಡಾ.ರಘುನಾಥ್ ಕುಲಕರ್ಣಿ, ಡಾ.ಶಾಲಾನಿ ಸಜ್ಜನಶೆಟ್ಟಿ, ಡಾ.ಪ್ರತಿಭಾ ಹಾಗೂ ಸಹಾಯಕ ಆಡಳಿತ ಅಧಿಕಾರಿಗಳಾದ ವೀರಣ್ಣ ಶಿವಪುರ, ಮಲ್ಲಿಕಾರ್ಜುನ ಸಂಗೋಳಾಗಿ, ಹಿರಿಯ ರೆಡಿಯಾಲೋಜಿ ಇಮ್ಯಾಜಿಂಗ್ ಅಧಿಕಾರಿ ಮಲ್ಲರೆಡ್ಡೆಪ್ಪ ಬಡಿಗೇರ, ಫಿಜಿಯೋಥೆರಪಿಸ್ಟ್ ಜೈಶೀಲನಾಥ, ಬಾಳಪ್ಪ, ಫಕೀರಪ್ಪ ದೊಡ್ಡಮನಿ, ಮಂಜುನಾಥ ಕಂಬಾಳಿಮಠ, ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ರಾಚಾಪ್ಪ ಬಿಸಗೊಂಡ, ನಸಿರ್ಂಗ್ ಆಫೀಸರಗಳಾದ ಮಿಥುನ್, ಸಿದ್ಧಾರ್ಥ, ಎಂಡಿ ಖಾಜಾ, ಗ್ರೂಪ್ ಡಿ ಶಶಿಧರ್ ಹಾಗೆ ಅಧಿಕಾರಿಗಳು ಮತ್ತು ನಸಿರ್ಂಗ್ ಅಫೀಸರ್ಸ್ ಜಿಮ್ಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.