Home ಜಿಲ್ಲೆ ಬೆಂಗಳೂರು ಹಸಿರುಮನೆ ಅನಿಲ ಹೊರಸೂಸುವಿಕೆ ಶೇ. ೬೭ರಷ್ಟು ಕಡಿತ

ಹಸಿರುಮನೆ ಅನಿಲ ಹೊರಸೂಸುವಿಕೆ ಶೇ. ೬೭ರಷ್ಟು ಕಡಿತ

ಕೋಲಾರ, ಅ. ೧೭: ಕೋಲಾರ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯ ಮತ್ತು ಅಂತರ್ಜಲ ಕುಸಿತವನ್ನು ತಡೆಯಲು ೨೦೫೦ರ ವೇಳೆಗೆ ಶೇಕಡಾ ೬೭ರಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಬೃಹತ್ ಡಿಕಾರ್ಬನೈಸೇಶನ್ ಮಾರ್ಗಸೂಚಿಯನ್ನು ಸಿದ್ಧಪಡಿಸ ಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದರು.


ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಎಂಪಿಆರ್‌ಐ,ಎನ್.ಐ.ಟಿ. ಸುರತ್ಕಲ್ ಹಾಗೂ ವಸುಧಾ ಫೌಂಡೇಶನ್ ವತಿಯಿಂದ ಸಿದ್ಧಪಡಿಸ ಲಾದ ಕೋಲಾರ ಜಿಲ್ಲೆಯ ಡಿಕಾರ್ಬನೈಸೇಶನ್ ಮಾರ್ಗ ಸೂಚಿಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕೃಷಿ ವಲಯದಲ್ಲಿಯೂ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲಿದ್ದು, ಕೃಷಿ ಯಂತ್ರೋಪಕರಣಗಳ
ವಿದ್ಯುದ್ದೀಕರಣ, ಜಾನುವಾರುಗಳಿಗೆ ಮೀಥೇನ್-ನಿರೋಧಕ ಆಹಾರ ಪೂರೈಕೆ ಹಾಗೂ ಸಾವಯವ ಗೊಬ್ಬರ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.


ಸಭೆಯಲ್ಲಿ ಎಂಪ್ರಿ, ಎನ್.ಐ.ಟಿ. ಸುರತ್ಕಲ್ ಹಾಗೂ ವಸುಧಾ ಫೌಂಡೇಶನ್ ಸಂಸ್ಥೆಯ ತಜ್ಞರು, ಪರಿಸರ, ಕೃಷಿ, ಸಾರಿಗೆ, ಕೈಗಾರಿಕೆ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳ ವಿವಿಧ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.