
ಅಥಣಿ :ಫೆ.೧೭: ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ೬೬ನೇ ಹುಟ್ಟುಹಬ್ಬದ ಅಂಗವಾಗಿ, ಇಲ್ಲಿನ ಮಹಾತ್ಮಾ ಗಾಂಧಿ ಮಾರ್ಕೆಟ್‌ನ ‘ಲಕ್ಷ್ಮಣ ಸವದಿ ಅಭಿಮಾನಿ ಬಳಗ’ದ ವತಿಯಿಂದ ಸಾರ್ವಜನಿಕರಿಗೆ ಅನ್ನ ಪ್ರಸಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ನೇತೃತ್ವ ವಹಿಸಿದ ಮುಖಂಡ ರಾಮನಗೌಡ ಪಾಟೀಲ ಮಾತನಾಡಿ “ನಮ್ಮ ನೆಚ್ಚಿನ ನಾಯಕರಾದ ಲಕ್ಷ್ಮಣ ಸವದಿ ಸಾಹುಕಾರರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಅಭಿಮಾನಿ ಬಳಗದ ವತಿಯಿಂದ ಈ ಅನ್ನ ಪ್ರಸಾದ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಅವರು ಶತಾಯುಷಿಗಳಾಗಿ ಬಾಳಲಿ ಹಾಗೂ ನಾಡಿನ ಜನತೆಯ ಸೇವೆ ಮಾಡಲು ಅವರಿಗೆ ಹೆಚ್ಚಿನ ಅಧಿಕಾರ ಮತ್ತು ಅವಕಾಶಗಳು ದೊರೆಯಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ,” ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜು ಬುಲಬುಲೆ, ನಿತಿನ್ ಗೊಂಗಡಿ, ಮಾಲಾರಾಮ್ ಪರಮಾರ್, ರಾಜು ಮಾಳಿ, ಹನುಮಂತ್ ಕಲಮಡಿ, ವಿಜಯಸಿಂಗ್ ರಜಪೂತ್, ಮಂಜು ಯಕ್ಕುಂಡಿ. ಬಸು ಮಾದಗುಡಿ, ಆನಂದ ಮಾದಗುಡಿ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮಾರ್ಕೆಟ್ ಆವರಣದಲ್ಲಿ ನಡೆದ ಈ ಅನ್ನದಾಸೋಹದಲ್ಲಿ ನೂರಾರು ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು
























