ಬೀದರ ಜಿಲ್ಲಾ ಸಹಕಾರ ಯುನಿಯನ್‌ನ ೬೩ನೇ ವಾರ್ಷಿಕ ಮಹಾಸಭೆ

ಬೀದರ :ಸೆ.೧೦:ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ಇದರ ೨೦೨೪-೨೫ನೇ ಸಾಲಿನ ೬೩ನೇ ವಾರ್ಷಿಕ ಮಹಾಸಭೆೆ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ಅಭಿಶೇಕ ಆರ್. ಪಾಟೀಲ ಇವರ ಘನ ಅಧ್ಯಕ್ಷತೆಯಲ್ಲಿ ಡಿ.ಸಿ.ಸಿ ಬ್ಯಾಂಕ್ ಆರ್ ಸೆಟ್ ಸಂಸ್ಥೆ ಪ್ರತಾಪನಗರ, ಬೀದರ ಸಭಾಭವನದಲ್ಲಿ ನಡೆಸಲಾಯಿತು. ಬೀದರ ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರುಗಳೆಲ್ಲರೂ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು.

 ಬೀದರ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ಅಭಿಶೇಕ ಆರ್. ಪಾಟೀಲ  ಇವರು ಮೊದಲಿಗೆ ಅಧ್ಯಕ್ಷರು ಆಗಮಿಸಿದ ಸದಸ್ಯ ಸಂಘದ ಸದಸ್ಯರೆಲ್ಲರಿಗೂ ಸ್ವಾಗತ ಕೋರುತ್ತಾ ಆಡಳಿತ ಮಂಡಲಿಯವರು ಮತ್ತು ಸಿಬ್ಬಂದಿ ವರ್ಗದವರು ಸ್ಭೆರಿ ಕೆಲಸ ನಿರ್ವಹಿಸಬೇಕು. ಅಂದಾಗ ಮಾತ್ರ ಸಹಕಾರ ವ್ಯವಸ್ಥೆ ಬೆಳವಣಿಗೆ ಸಾಧ್ಯವಾಗುತ್ತದೆ. ಕೇಂದ್ರದಲ್ಲಿ ಸಹಕಾರ ಸಚಿವಾಲಯ ಸ್ಥಾಪನೆಯಾದ ನಂತರ ಸಹಕಾರ ಸಂಘಗಳು ಬಹುಸೇವಾ ಕೇಂದ್ರಗಳನ್ನಾಗಿಸಿ ಅಭಿವೃದ್ದಿ ಹೊಂದಲು ಸಾಧ್ಯವಾಗಿದೆ. ಕೇಂದ್ರ ಸರ್ಕಾರ ೨೦೨೫ರ ವರ್ಷವನ್ನು ಸಹಕಾರ ವರ್ಷವೆಂದು ಘೋಷಿಸಿದೆ. ಸಹಕಾರ ಸಂಸ್ಥೆಗಳಿಗೆ ಉತ್ತಮವಾಗಿ ಬೆಳವಣಿಗೆ ಹೊಂದುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿವೆ. ನಮ್ಮ ಮಹಾಮಂಡಳದ ಮಾರ್ಗದರ್ಶನದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸಮಾಜದ ಬೆಳವಣಿಗೆಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಮಾತೃ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ತರಬೇತಿ ಮತ್ತು ಪ್ರಚಾರ ಇದರ ಮುಖ್ಯ ಉದ್ದೇಶವಾಗಿದೆ. ತಮಗೆಲ್ಲ ಅನುಕೂಲವಾಗುವಚಿತಹ ತರಬೇತಿಗಳನ್ನು ಹಮ್ಮಿಕೊಂಡು ಮಾಹಿತಿ ನೀಡಲು ಯೂನಿಯನ್ನಿನ ಆಡಳಿತ ಮಂಡಲಿ ಹಾಗೂ ಸಿಬ್ಬಂದಿ ವರ್ಗ ಸದಾ ಸಿದ್ದವಾಗಿರುತ್ತದೆ ಎಂದು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

ಬೀದರ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಮಂಜುಳಾ ಎಸ್. ಮಾತನಾಡುತ್ತಾ ಬೀದರ ಜಿಲ್ಲೆಯು ಸಹಕಾರ ಕ್ಷೇತ್ರದಲ್ಲಿಯೇ ಮುಂದುವರೆದ ಜಿಲ್ಲೆಯಾಗಿದೆ. ಸಹಕಾರ ಸಂಘಗಳು ಸ್ಥಾಪನೆ ಮಾಡುವುದಲ್ಲದೆ ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು ಮತ್ತು ಬೀದರ ಜಿಲ್ಲಾ ಸಹಕಾರ ಯೂನಿಯನ್ ನಿ., ಬೀದರ ವತಿಯಿಂದ ತರಬೇತಿ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸಹಕಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ತುಂಬಾ ಪ್ರಯತ್ನಿಸುತ್ತಿದ್ದಾರೆ ಎಂದರು. ಪ್ರತಿಯೊಂದು ಸಹಕಾರ ಸಂಘಗಳು ನಿಗದಿತ ಸಮಯದೊಳಗೆ ಎಲ್ಲರೂ ಸೆಪ್ಟೆಂಬರ್ ೨೫ರ ಒಳಗಾಗಿ ವಾರ್ಷಿಕ ಮಹಾಸಭೆಯನ್ನು ಜರುಗಿಸಬೇಕು. ಜಿಲ್ಲಾ ಸಹಕಾರ ಯೂನಿಯನ್ ಯಾವತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರ್ತಾ ಇದೆ. ಅಧ್ಯಕ್ಷರು, ನಿರ್ದೇಶಕರಿಗೆ, ಕಾರ್ಯದರ್ಶಿಗಳಿಗೆ ಯಾವುದೇ ರೀತಿಯ ತರಬೇತಿಗಳು ಬೇಕಾದಲ್ಲಿ ಯೂನಿಯನ್ನಿನ ಆಡಳಿತ ಮಂಡಲಿ ಸದಾ ಸಿದ್ದವಾಗಿರುತ್ತದೆ. ಮುಕ್ತವಾಗಿ ಚರ್ಚಿಸಿ ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸಂಸ್ಥೆಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಎಲ್ಲಾ ತರಹದ ಸಹಕಾರ ಸಂಘಗಳ ಅಧ್ಯಕ್ಷರೂ, ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೂ, ಮಹಾಮಂಡಳದ ಆಡಳಿತ ಮಂಡಲಿ ಸದಸ್ಯರಿಗೂ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಿಬಂಧಕರು, ಬೆಂಗಳೂರು, ಗುಲಬರ್ಗಾ ಪ್ರಾಂತದ ಸಂಯುಕ್ತ ನಿಬಂಧಕರಿಗೆ, ಬೀದರನ ಉಪನಿಬಂಧಕರು, ಸಹಾಯಕ ನಿಬಂಧಕರಿಗೆ, ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರಿಗೆ ಆಭಾರಿಯಾಗಿರುತ್ತೇವೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲಾ ಸಹಕಾರಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಹೆಚ್. ಆರ್ ಮಲ್ಲಮ್ಮ ಇವರು ವರದಿ ವಾಚನದಲ್ಲಿ ಹೇಳಿದರು.

ಜಿಲ್ಲಾ ಸಹಕಾರ ಯೂನಿಯನ್ನಿನ ಜಿಲ್ಲಾ ಸಹಕಾರ ಶಿಕ್ಷಕರಾದ ಶ್ರೀ ಮಾರುತಿ ಇವರು ಮಹಾಸಭೆಗೆ ಆಗಮಿಸಿದ ಎಲ್ಲ ಸದಸ್ಯ ಸಹಕಾರ ಸಂಘÀದಿAದ ಆಗಮಿಸಿದ ಸದಸ್ಯರಿಗೆ ಸ್ವಾಗತವನ್ನು ಮತ್ತು ವಂದನಾರ್ಪಣೆ ಮಾಡಿದರು. ಮಹಾಸಭೆಯಲ್ಲಿ ಯೂನಿಯನ್ನಿನ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಎಲ್ಲಾ ತರಹದ ಸಹಕಾರ ಸಂಘದ ಸುಮಾರು ೨೦೦ ಕ್ಕಿಂತ ಹೆಚ್ಚು ಸದಸ್ಯರೆಲ್ಲರೂ ಪಾಲ್ಗೊಂಡು ವಾರ್ಷಿಕ ಮಹಾಸಭೆಯನ್ನು ಯಶಸ್ವಿಗೊಳಿಸಿರು.