
ಬಳ್ಳಾರಿ,ಅ.೩-ಹೊಸಪೇಟೆಯ ಹೊರವಲಯದಲ್ಲಿ ೫.೨೦ ಕೋಟಿ ಇನ್ಸೂರೆನ್ಸ್ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ನಂತರ ಅದನ್ನು ಅಪಘಾತ ಎಂದು ಬಿಂಬಿಸಿದ ಆರೋಪದ ಮೇಲೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಹೊಸಪೇಟೆಯ ಕೌಲ್‌ಪೇಟೆಯ ನಿವಾಸಿ ಗಂಗಾಧರ್ ಎಂದು ಗುರುತಿಸಲಾಗಿದ್ದು, ಬಂಧಿತ ವ್ಯಕ್ತಿಗಳನ್ನು ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ಅಜಯ್, ರಿಯಾಜ್, ಯೋಗರಾಜ್ ಸಿಂಗ್ ಮತ್ತು ಹುಲಿಗೆಮ್ಮ ಎಂದು ಗುರುತಿಸಲಾಗಿದೆ.
ಮೃತ ಗಂಗಾಧರ್ ಹೆಸರಿನಲ್ಲಿ ೫.೨೦ ಕೋಟಿಗೆ ವಿಮೆ ಮಾಡಿಸಿಕೊಂಡಿದ್ದ ಖದೀಮರು. ಈ ಹಣವನ್ನು ಪಡೆಯಲು ಅವರು ಕೊಲೆಗೆ ಸಂಚು ರೂಪಿಸಿದ್ದರು. ಮೊದಲು ಅವರನ್ನು ಕೊಂದು ನಂತರ ಹೊಸಪೇಟೆಯ ಹೊರವಲಯದಲ್ಲಿರುವ ಜಂಬುನಾಥ್ ಗ್ರಾಮಕ್ಕೆ ಹೋಗುವ ರಸ್ತೆಗೆ ಮೃತ ದೇಹ ತಂದಿದ್ದಾರೆ ನಂತರ ಆರೋಪಿಗಳು ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್ ಬಾಡಿಗೆಗೆ ಪಡೆದು, ಅದರ ಮೇಲೆ ಮೃತದೇಹ ಇಟ್ಟು ಹಾಕಿಕೊಂಡು ಕಾರಿನಿಂದ ಡಿಕ್ಕಿ ಹೊಡೆಸಿದ್ದಾರೆ. ಅಪಘಾತ ಎಂದು ರೂಪಿಸಿ ಪರಾರಿಯಾಗಿದ್ದಾರೆ.
ಮೃತರ ಪತ್ನಿ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಘಾತವಾಗಿದ್ದರೆ ಬೈಕ್ ಬೀಗ ಗಾಡಿಯಲ್ಲಿರಬೇಕು ಇಲ್ಲ, ಕೆಳಗೆ ಬಿದ್ದಿರಬೇಕು. ಆದರೆ ಬೀಗ ಸೈಡ್ ಬ್ಯಾಗ್‌ನಲ್ಲಿದೆ ಎಂದು ಅನುಮಾನಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ೨೪ ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಅಪರಾಧದಲ್ಲಿ ಬಳಸಲಾದ ಕಾರು ಮತ್ತು ಬೈಕ್ ಸಹ ವಶಪಡಿಸಿಕೊಂಡಿದ್ದಾರೆ.


































