5ನೇ ವೈಜ್ಞಾನಿಕ ರಾಜ್ಯ ಮಟ್ಟದ ಸಮ್ಮೇಳನಸುರೇಶ ಚನ್ನಶೆಟ್ಟಿ ಅವರಿಗೆ ಡಾ ಎಚ್ ಎನ್ ಪ್ರಶಸ್ತಿ,ಡಾ ಉಮಾ ದೇಶಮುಖ ಅವರಿಗೆ ಚೈತನ್ಯ ಶ್ರೀ ಪ್ರಶಸ್ತಿಗಾಗಿ ಆಯ್ಕೆ

ಬೀದರ:ಡಿ.28:ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು (ರಿ) ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಮಾನವ ಬಂಧುತ್ವ ವೇದಿಕೆ, ವಿವಿಧ ಜಿಲ್ಲಾ ಸಂಘಟನೆಗಳ ಸಹಯೋಗದೊಂದಿಗೆ ಡಿಸೆಂಬರ್ 28, 29 ಮತ್ತು 30 ರಂದು ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಯಾದಗಿರಿಯ ಜಿಲ್ಲಾ ಕ್ರೀಡಾಂಗಣ ದಲ್ಲಿ ಆಯೋಜಿಸಿದೆ.

ಪತ್ರಕರ್ತರು, ಸಾಹಿತಿಗಳಾದ ವಿಶ್ವರಾಧ್ಯ ಸತ್ಯಂಪೇಟೆ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ವೈಜ್ಞಾನಿಕ, ವೈಚಾರಿಕ ಗೋಷ್ಠಿಗಳಿದ್ದು, ಜಷ್ಟಿಸ್ ನಾಗಮೋಹನದಾಸ, ಇಸ್ರೊದ ಮಾಜಿ ಅಧ್ಯಕ್ಷರಾದ ಡಾ. ಎ. ಎಸ್. ಕಿರಣಕುಮಾರ, ಅನುಭಾವಿಗಳು, ಸಚಿವರಾದ ಶರಣ ಬಸವಪ್ಪ ದರ್ಶನಾಪುರ, ಸತೀಶ ಜಾರಕಿಹೊಳಿ, ಎನ್. ಎಸ್. ಭೋಸರಾಜ ಹಾಗೂ ಸ್ಥಳೀಯ ಶಾಸಕರು, ಸಂಶೋಧಕರು, ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ.

ಕನ್ನಡ-ಬಸವ ಸೇವೆ ತಮ್ಮ ಬದುಕಿನ ಉಸಿರಾಗಿಸಿ ಕೊಂಡ ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿಯವರಿಗೆ, ಡಾ ಎಚ್. ಎನ್. ಪ್ರಶಸ್ತಿ ಹಾಗೂ ಆರೋಗ್ಯದ ಸೇವೆ ಜೊತೆಗೆ ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ಸೇವೆಯಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಡಾ ಉಮಾ ದೇಶಮುಖ ಅವರನ್ನು ಚೈತನ್ಯ ಶ್ರೀ ಪ್ರಶಸ್ತಿ ಗೆ ಕಾರ್ಯಕಾರಿ ಮಂಡಳಿಯು ಆಯ್ಕೆ ಮಾಡಿದೆ.

ಇಂದು ಅಧಿಕೃತವಾಗಿ ಡಾ ಉಮಾ ದೇಶಮುಖ ಹಾಗೂ ಸುರೇಶ ಚನ್ನಶೆಟ್ಟಿ ಅವರಲ್ಲಿಗೆ ತೆರಳಿ ಆಮಂತ್ರಣ ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿ ಡಾ ಸತೀಶ ಮುಡಬಿ, ಬಸವರಾಜ ದೇಶಮುಖ, ಶಿವಶಂಕರ ಟೋಕರೆ, ಡಾ ಬಸವರಾಜ ಬಲ್ಲೂರ, ಶಿವಕುಮಾರ ಕಟ್ಟೆ, ಸಿದ್ಧಾರೂಢ ಭಾಲ್ಕೆ, ಅಶೋಕ ದಿಡಗೆ ಮೊದಲಾದವರು ಉಪಸ್ಥಿತರಿದ್ದರು

ಜಿಲ್ಲೆಯ ಪ್ರಗತಿಪರ ಚಿಂತಕರು, ವೈಜ್ಞಾನಿಕ ಮನೋಭಾವನೆಯ ವಿಚಾರವಾದಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ವೈಜ್ಞಾನಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದಾನಿ ಬಾಬು ಹಾಗೂ ದೇವಿಪ್ರಸಾದ ಕಲಾಲ ಕೋರಿದ್ದಾರೆ.