
ಕಲಬುರಗಿ:ಅಪ್ಪಾ ಪಬ್ಲಿಕ್ ಶಾಲೆಯ ಸರಣಿ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಶನಿವಾರರಂದು 5ನೆಯ ತರಗತಿಯ ವಿದ್ಯಾರ್ಥಿಗಳ ಸರದಿಯಾಗಿತ್ತು. ಇವರ ಸ್ಪರ್ಧೆಯು ಕೂಡ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರು ಪ್ರಾಚಾರ್ಯರು, ಸಂಯೋಜಕರು ಮತ್ತು ಸಹಪಾಠಿಗಳೊಂದಿಗೆ ಜ್ಯೋತಿ ಪ್ರಜ್ವಲಿಸಿಚಾಲನೆ ನೀಡಿದರು.
5ನೆಯ ತರಗತಿಯ 305 ವಿದ್ಯಾರ್ಥಿಗಳು ಮೂರೂ ಸುತ್ತಿನ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗರಿಷ್ಟ ಸರಾಸರಿ ಪಡೆದ 52 ವಿದ್ಯಾರ್ಥಿಗಳನ್ನು ಮೌಖಿಕ ಸುತ್ತಿಗೆ ಆಯ್ಕೆಯಾದರು. ಕಿರಿಯರ ಆ ಉತ್ಸಾಹವನ್ನು 5ನೇ ತರಗತಿಯ ವಿದ್ಯಾರ್ಥಿಗಳು ಕೂಡ ಮುಂದುವರಿಸಿದರು.
ಎಲ್ಲಾ ವಿಷಯಗಳ ಪಠ್ಯಪುಸ್ತಕದಿಂದ 1500 ಶಬ್ದಗಳನ್ನು ಆಯ್ದುಕೊಂಡು 2ನೇ ಹಂತದ ಸ್ಪರ್ಧೆ ಏರ್ಪಡಿಸಲಾಯಿತು.ಕೊಟ್ಟಂತಹ ಪದಗಳ ಸರಿಯಾದ ಉಚ್ಚಾರ ಮತ್ತು ಸರಿಯಾದ ಸ್ಪೆಲ್ಲಿಂಗ್ ಹೇಳಿದ ವಿದ್ಯಾರ್ಥಿಗಳು ಮುಂದಿನ ಸುತ್ತಿಗೆ ಅರ್ಹರಾದರು, ಸರಿಯಾಗಿ ಉತ್ತರಿಸದ ವಿದ್ಯಾರ್ಥಿಗಳು ಸ್ಪರ್ಧೆಯಿಂದ ಹೊರಗಾದರು. ಹೀಗೆ ನೆಡೆದ 17 ಸುತ್ತುಗಳಲ್ಲಿ ಅಂತಿಮ 3 ಸ್ಪರ್ಧಾಳುಗಳನ್ನು ಗುರುತಿಸಲಾಯಿತು.
ವಿದ್ಯಾರ್ಥಿಗಳು ಉಚ್ಚಾರಕರ ಮಾತುಗಳನ್ನು ತೀವ್ರ ಗಮನದಿಂದ ಆಲಿಸಿ, ಪದವನ್ನು ಅತ್ಯಂತ ಜಾಗರೂಕತೆಯಿಂದ ಹೇಳುವ ದೃಶ್ಯ ನೋಡಲು ಬಲು ರೋಚಕವಾಗಿತ್ತು. ನಂತರ ನೆಡೆದ ಅತ್ಯಂತ ರೋಚಕವಾದ ರಾಪಿಡ್ ಫೈರ್ (ವೇಗದ) ಸುತ್ತಿನಲ್ಲಿ ವಿಜೇತರು ಹೊರಹೊಮ್ಮಿದರು. ಪ್ರಥಮ ಸ್ಥಾನ ಕುಮಾರ ಶಿವಂ ಬಸವಪ್ರಭು ಬಿರಾದಾರ್ ಪಾಲಾದರೆ ದ್ವಿತೀಯ ಸ್ಥಾನ ಕುಮಾರ ಸಿದ್ದ್ ಅರುಣ್ ಅವಟಿ ಮತ್ತು ತೃತೀಯ ಸ್ಥಾನ ಕುಮಾರ ವಿವೇಕ್ ಶ್ರೀನಾಥ್ ಕಣ್ಣಿ ಇವರ ಪಾಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಪಾರಿತೋಷಕ ನೀಡಿ ಗೌರವಿಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಎಸ. ಅಪ್ಪಾ ಇವರು ಗೌರಿಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಸಂಸ್ಥೆ, ವಿದ್ಯಾರ್ಥಿಗಳು ಹಾಗೂ ಪೆÇೀಷಕರ ಸಮುದಾಯವು ಇಂತಹ ಭಾಷಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರಯತ್ನಗಳನ್ನು ಮೆಚ್ಚಿ, ನಮ್ಮ ಮಕ್ಕಳು ಯಾರಿಗಿಂತಲೂ ಕಡಿಮೆ ಇಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿ ಆಶೀರ್ವಾದ ತಿಳಿಸಿದರು.























