Home ಜಿಲ್ಲೆ ಕಲಬುರಗಿ ಶಾಲಾ ಮಕ್ಕಳಿಗೆ 5 ಎಸ್ ಜಾಗೃತಿ ಪಾಠ

ಶಾಲಾ ಮಕ್ಕಳಿಗೆ 5 ಎಸ್ ಜಾಗೃತಿ ಪಾಠ

ವಾಡಿ: ಫೆ.13:ಪ್ರತಿಯೊಬ್ಬ ನಾಗರಿಕರಲ್ಲಿ ಶಿಸ್ತು, ಸಂಯಮ, ಸಂಘಟಿತ ಕೆಲಸ, ಉಳಿತಾಯ, ಸ್ವಚ್ಛ ಸಂಸ್ಕøತಿಯ ಮಹತ್ವವನ್ನು ತಿಳಿಸುವುದೇ 5ಎಸ್ ಯೋಜನೆಯ ಉದ್ದೇಶವಾಗಿದೆ ಎಂದು ಎಸಿಸಿ ಅದಾನಿ ಸಿಮೆಂಟ್ ಗುಣಮಟ್ಟ ಸವವ್ಯಸ್ಥಾಪಕರಾದ ಕಮಲ್ ಸಿಂಗ್ ಡಾಂಗಿ ಹೇಳಿದರು.
ಪಟ್ಟಣದ ಹೋರವಲಯದ ನ್ಯೂ ಟಿನ್ ನ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಎಸಿಸಿ ಅದಾನಿ ಫೌಂಡೇಶನ್ ವತಿಯಿಂದ 5ಎಸ್ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು. ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ಪ್ರತಿಯೊಂದು ಮನೆಗಳ ಮುಂದೆ ಇರುವ ಜಾಗವನ್ನು ಸುಂದರ ಹಾಗು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಹಾಗೇ ನಾವು ಮಾಡುವ ಯಾವುದೇ ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ, ಅತ್ಯಂತ ಶಿಸ್ತು ಬದ್ದವಾಗಿ ಮಾಡಿದಾಗ ಯಶಸ್ಸು ನಿಮ್ಮದಾಗುತ್ತದೆ ಎಂದು ತಿಳಿಸಿದರು.

ಎಸಿಸಿ ಸಿಮೆಂಟ್ ವಾಡಿ ಸಾಹಯಕ ನಿರ್ವಹಣಾ ವ್ಯವಸ್ಥಾಪಕರಾದ ಆದರ್ಶ ಕುಮಾರ ಮಾತನಾಡಿ ಪ್ರತಿಯೊಬ್ಬರೂ ನಾವು ವಾಸ ಮಾಡುವ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕ ಎಂದು ವಿದ್ಯಾರ್ಥಿಗಳಿಗೆ ಕರೆಕೋಟ್ಟರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಉದಯ್ ಧರೆಣ್ಣನವರ,ಅದಾನಿ ಸಾಹಯ ನಿರ್ವಹಣಾ ವ್ಯವಸ್ಥಾಪಕಿ ಸರಸ್ವತಿ, ಶಿಕ್ಷಕರಾದ ಶಿರಾಜು ಪಾಟೀಲ್, ಮತ್ತು ಎಸಿಸಿ ಅದಾನಿ ಫೌಂಡೇಶನ್ ಸಿ.ಎಸ್.ಆರ್ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.