
ತಾಳಿಕೋಟೆ : ಎಲ್ಲಿ ಪರಮಾತ್ಮ ಇರುತ್ತಾನೋ ಅಲ್ಲಿ ವಿಜಯ ಎಂಬುದು ಕಟ್ಟಿಟ್ಟ ಬುತ್ತಿಯಾಗಲಿದೆ ಅಂತಹ ಕಾರ್ಯ ಈ ಹಿಂದಿನ ಇತಿಹಾಸವಾದಂತಹ ಕೌರವ ಪಾಂಡವರ ಇತಿಹಾಸದಲ್ಲಿ ಗೋಚರಿಸಿದೆ ಎಂದು ಖ್ಯಾತ ಜ್ಯೋತಿಷ್ಯ ಶಾಸ್ತç ಪರಿಣಿತರಾದ ವೇ.ವಸಂತಬಟ್ ಜೋಶಿ ಅವರು ನುಡಿದರು.
ಸೋಮವಾರರಂದು ಸ್ಥಳೀಯ ಶ್ರೀ ಕೃಷ್ಣ ಮಂದಿರದಲ್ಲಿ ಭಗವದ್ಗೀತಾ ಸಮಿತಿಯವರ ವತಿಯಿಂದ ಏರ್ಪಡಿಸಲಾದ ೫೪ ನೇ ವರ್ಷದ ಗೀತಾ ಪ್ರವಚನಕ್ಕೆ ಚಾಲನೆ ನೀಡಿ ಒಂದನೇ ಅದ್ಯಾಯದಿಂದ ನಾಲ್ಕನೇ ಅಧ್ಯಾಯದವರೆಗೆ ಪ್ರವಚನದ ಸಾರಾಂಶವನ್ನು ಭಕ್ತ ಸಮೂಹಕ್ಕೆ ವಿವರಿಸಿದ ಅವರು ಭಕ್ತರಿಗೆ ಶ್ರೀಕೃಷ್ಣ ಪರಮಾತ್ಮ ಸಾರಥಿ ವೇಷಧರಿಸಿ ಪಾಂಡವರ ಯೋಗ ಕ್ಷೇಮಕ್ಕೆ ಮುಂದಾಗುತ್ತಾನೆ ಯುದ್ದಕ್ಕೆ ಸಜ್ಜಾದ ಪಾಂಡವರ ಹಾಗೂ ಕೌರವರ ಸೈನ್ಯದಲ್ಲಿ ಶ್ರೀಕೃಷ್ಣ ಪರಮಾತ್ಮ ಯರ‍್ಯಾರು ಇದ್ದಾರೆಂಬುದನ್ನು ಅರ್ಜುನ ತಿಳಿದುಕೊಂಡಿದ್ದನ್ನು ಅರ್ಥೈಸಿಕೊಂಡ ಶ್ರೀಕೃಷ್ಣ ಪರಮಾತ್ಮ ಕೌರವರ ಸೈನಿಕರಲ್ಲಿ ನಿನ್ನ ಗುರುಗಳು ಇದ್ದಾರೆ ಹಾಗೂ ಸಹೋದರರೂ ಇದ್ದಾರೆ ಇದನ್ನು ನೀನು ಅರಿತುಕೊಂಡು ಯುದ್ದದಲ್ಲಿ ಹಿಂಜರಿಯುವದು ಬೇಡಾ ಎಂದು ಭಕ್ತಿಯೋಗ ಕುರಿತು ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಅಥೈಸುತ್ತಾನೆಂದು ಜೋಶಿ ಅವರು ನುಡಿದರು.
ಯುದ್ದದಲ್ಲಿ ಹಿಂದೆ ಸರಿಯದೇ ಮುನ್ನಗ್ಗಬೇಕೆಂದು ಅರ್ಜುನನಿಗೆ ಅರ್ಥೈಸಿದ ಶ್ರೀಕೃಷ್ಣ ಪರಮಾತ್ಮ ಈ ಹಿಂದೆ ಪಾಂಡವರಿಗೆ ತೊಂದರೆ ನೀಡಿದಂತಹ ಕೌರವರು ನೀಡಿದ ತೊಂದರೆಗಳ ಕುರಿತು ಏಳೆ ಏಳೆಯಾಗಿ ಅರ್ಥೈಸಿದಾಗ ಅರ್ಜುನನಿಗೆ ಧೈರ್ಯ ತುಂಬುತ್ತಾನಲ್ಲದೇ ಹಿಂದಕ್ಕೆ ಸರಿಯುವಂತಹ ಕಾರ್ಯ ಕ್ಷತ್ರೀಯ ಧರ್ಮದ ಪದ್ದತಿಯಲ್ಲಾ ಅಂದಾಗ ದೇಹ ಭಾವಬಂದಾಗ ಸುಃಖ ದುಃಖಗಳು ಬರುತ್ತವೆ ಆದರೆ ಆತ್ಮ ಎನ್ನುವದನ್ನು ಯಾರಿಗೂ ಕೊಲ್ಲಲಾಗದು ಚಿಂತೆ ಮಾಡಬೇಡಾ ಆತ್ಮ ಎನ್ನುವದನ್ನು ಶಸ್ತçಗಳಿಂದಲೂ ಕತ್ತರಿಸಲಾಗದು ಧರ್ಮ ಸಂಸ್ಥಾಪನೆ ಮಾಡಿದವನೇ ಶ್ರೀಕೃಷ್ಣ ಪರಮಾತ್ಮ ಎಂಬುದನ್ನು ಅರ್ಜುನನು ಅರ್ಥೈಸಿಕೊಳ್ಳುತ್ತಾನೆಂದರು. ಯಾವುದೇ ಮಾತಿನಲ್ಲಿ ಪ್ರೀತಿ ಎಂಬುದು ಇರಬೇಕು ಧರ್ಮ ಒಡೆಯುವ ಕಾರ್ಯವಾಗಬಾರದು ಮತ ಸ್ಥಾಪನೆ ಧರ್ಮ ಸ್ಥಾಪನೆಗೂ ಬಹಳೇ ವ್ಯತ್ಯಾಸವಿದೆ ಎಂದು ಅರ್ಥೈಸಿದ ಜೋಶಿ ಅವರು ಆತ್ಮ ಎನ್ನುವದಕ್ಕೆ ಹುಟ್ಟು ಇಲ್ಲಾ ದೇಹಕ್ಕೆ ಹುಟ್ಟು ಎಂಬುದು ಇದೆ ಎಲ್ಲವನ್ನು ಅನುಭವಿಸುವದೇ ದೇಹ ಆಗಿದ್ದು ಭಾಗ್ಯಶಾಲಿಯಾದ ಕ್ಷತ್ರೀಯನಿಗೆ ಯುದ್ದದ ಸಮಯವೆಂಬುದು ಬರುತ್ತದೆ ಆದರೆ ಹಿಂಜರಿಯಬಾರದೆAದು ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಉಪದೇಶಿಸಿದ್ದರ ಕುರಿತು ಭಕ್ತ ಸಮೂಹಕ್ಕೆ ಮನವರಿಕೆ ಮಾಡಿದ ಜೋಶಿ ಅವರು ಕರ್ಮ ಮಾಡುವ ಕಾರ್ಯವಷ್ಠೆ ನಮ್ಮದಾಗಬಹುದು ಆದರೆ ಅದರ ಫಲಾಪೇಕ್ಷೆ ಎಂಬುದು ಬರುವದಿಲ್ಲಾವೆಂಬ ಮಾತುಗಳನ್ನೂ ಸಹ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಉಪದೇಶಿಸಿದಾಗ ಪ್ರಜ್ಞೆ ಎಂದರೇನು ಎಂಬುದರ ಕುರಿತು ಅರ್ಜುನ ಶ್ರೀಕೃಷ್ಣ ಪರಮಾತ್ಮನಿಗೆ ಪ್ರಶ್ನೀಸಿದಾಗ ಶ್ರೀಕೃಷ್ಣ ಪರಮಾತ್ಮನಿಂದ ಎಲ್ಲವನ್ನು ಅರ್ಥೈಸಿಕೊಂಡ ಅರ್ಜುನನಿಗೆ ತಿಳಿ ಹೇಳಿದಾಗ ಕೌರವರ ಜೊತೆ ಅರ್ಜುನ ಯುದ್ದಕ್ಕೆ ಸಜ್ಜಾಗಲು ಮುಂದಾಗುತ್ತಾನೆAಬುದರ ಕುರಿತು ಜೋಶಿ ಅವರು ಭಹು ಮಾರ್ಮಿಕವಾಗಿ ವಿವರಿಸಿದರು.
ಗೀತಾ ಪ್ರವಚನ ಎಂದರೆ ಭಗವದ್ಗೀತೆಯ ಉಪನ್ಯಾಸ ಭಗವದ್ಗೀತೆಯ ತತ್ವಗಳನ್ನು ಹಾಗೂ ಸಂದೇಶಗಳನ್ನು ಮತ್ತು ತತ್ವ ಜ್ಞಾನವನ್ನು ವಿವರಿಸುವಂತಹ ವಿವರಣಾತ್ಮಕ ಭೋದನೆಯಾಗಿದೆ ಎಂದು ಉಪಸ್ಥಿತ ಭಕ್ತರಿಗೆ ಜೋಶಿ ಅವರು ಮನವರಿಕೆ ಮಾಡಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀಕೃಷ್ಣ ಪರಮಾತ್ಮ ಮಹಾಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಹಾಗೂ ಅಲಂಕಾರವನ್ನು ಗುಂಡಬಟ್ ಜೋಶಿ ಅವರು ನೇರವೇರಿಸಿದರು.
ಈ ಸಮಯದಲ್ಲಿ ವೇ.ಗುಂಡಬಟ್ ಜೋಶಿ, ಡಾ.ಬಿ.ಎಸ್.ಯಾದವಾಡ, ರವಿ ಕುಲಕರ್ಣಿ, ಮಲ್ಲಯ್ಯ ಗೊಟಗುಣಕಿ, ರಾಮಣ್ಣ ಪತ್ತಾರ, ಸತೀಶ ದಪೇದಾರ, ಭೀಮರಾವ್ ಕುಲಕರ್ಣಿ, ವಿದ್ಯಾಧರ ಗೊಟಗುಣಕಿ, ಘನಶಾಮ ಚವ್ಹಾಣ, ಶ್ರೀಧರ ಗ್ರಾಂಪುರೋಹಿತ, ಶ್ರೀಮತಿ ಲಕ್ಷಿö್ಮÃಬಾಯಿ ದೇಶಪಾಂಡೆ, ದೀಪಲಕ್ಷಿö್ಮÃ ಮಹೇಂದ್ರಕರ, ಐಶ್ವರ್ಯ ಗೊಟಗುಣಕಿ, ಸುಶಿಲಾಬಾಯಿ ದೇಶಪಾಂಡೆ, ರಾಜಶ್ರೀ ದೇಶಪಾಂಡೆ, ಸುಪ್ರೀತಾ ಗೊಟಗುಣಕಿ, ಮೊದಲಾದವರು ಉಪಸ್ಥಿತರಿದ್ದರು.
ವೇ.ಗುಂಡಬಟ್ ಜೋಶಿ ಸ್ವಾಗತಿಸಿದರು.

























