
ಸೇಡಂ, ಫೆ,13: ಇಲ್ಲಿನ ತಾಲೂಕಾ ಪಂಚಾಯತ ಸಭಾಂಗಣದಲ್ಲಿಂದು 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾ ಅಧ್ಯಕ್ಷರಾದ ಶಿವಶರಣರೆಡ್ಡಿ.ಎನ್ ಅವರ ಅಧ್ಯಕ್ಷತೆಯಲ್ಲಿ ತಾಲೂಕಾ ಪ್ರಗತಿ ಪರಿಶೀಲನಾ ಸಭೆ ಜರುಗಿತ್ತು. ಈ ವೇಳೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಪ್ಪ ಎಫ್ ರಾಯಣ್ಣನವರ,ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆಯ ಶ್ರೀಮತಿ ಅನುರಾಧ ಎಸ್. ಪಾಟೀಲ್,ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀಮತಿ ಭಾರತಿ,ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಶಶಾಂಕ್ ಬಾಬು,ಆಹಾರ ಇಲಾಖೆಯ ಮಹಮದ್ ಹುಸೇನ್,ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸದಸ್ಯರಾದ ಮಹಮ್ಮದ್ ಮೆಹಬೂಬ್,ಶಹಾಬೂದ್ದಿನ ಟಿ ಸಂಗಾವಿ,ವಿಷ್ಣುವರ್ಧನ್ ರೆಡ್ಡಿ,ಶ್ರೀಮತಿ ಶೋಭಾ ವಾಲಿಕಾರ,ಅಶೋಕ್ ಫಿರಂಗಿ ಮೂಧೋಳ,
ಹಣಮಂತರಾವ್ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



























